Vipraj Nigam: ಅಂದು ಬ್ಯಾಟರ್, ಇಂದು ಆಲ್‌ರೌಂಡರ್; ಐಪಿಎಲ್ ಹೊಸ ಸೆನ್ಸೇಷನ್ 20 ವರ್ಷದ ವಿಪ್ರಾಜ್ ನಿಗಮ್ ಯಾರು?
- ಐಪಿಎಲ್ ಟೂರ್ನಿಯು ಹೊಸ ಹೊಸ ಪ್ರತಿಭೆಗಳನ್ನು ಹುಟ್ಟುಹಾಕುವ ಫ್ಯಾಕ್ಟರಿ ಎಂದರೆ ಅತಿಶಯೋಕ್ತಿ ಅಲ್ಲ. ಐಪಿಎಲ್ ಆಡುವವರೆಗೂ ಅಷ್ಟೇನೂ ಗುರುತಿಸಿಕೊಳ್ಳದ, ಪರಿಚಿತ ಅಲ್ಲದವರು ಕೂಡಾ ದಿನಬೆಳಗಾಗುವುದರೊಳಗೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಾರೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಲ್‌ಎಸ್‌ಜಿ ನಡುವಿನ ಪಂದ್ಯದಲ್ಲೂ ಹೊಸ ಆಟಗಾರನ ಉದಯವಾಗಿದೆ. ಅವರೇ ವಿಪ್ರಾಜ್ ನಿಗಮ್.
- ಐಪಿಎಲ್ ಟೂರ್ನಿಯು ಹೊಸ ಹೊಸ ಪ್ರತಿಭೆಗಳನ್ನು ಹುಟ್ಟುಹಾಕುವ ಫ್ಯಾಕ್ಟರಿ ಎಂದರೆ ಅತಿಶಯೋಕ್ತಿ ಅಲ್ಲ. ಐಪಿಎಲ್ ಆಡುವವರೆಗೂ ಅಷ್ಟೇನೂ ಗುರುತಿಸಿಕೊಳ್ಳದ, ಪರಿಚಿತ ಅಲ್ಲದವರು ಕೂಡಾ ದಿನಬೆಳಗಾಗುವುದರೊಳಗೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗುತ್ತಾರೆ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಎಲ್‌ಎಸ್‌ಜಿ ನಡುವಿನ ಪಂದ್ಯದಲ್ಲೂ ಹೊಸ ಆಟಗಾರನ ಉದಯವಾಗಿದೆ. ಅವರೇ ವಿಪ್ರಾಜ್ ನಿಗಮ್.
(1 / 10)
ಮಾರ್ಚ್ 24ರಂದು ನಡೆದ ಐಪಿಎಲ್ 2025ರ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು 1 ವಿಕೆಟ್ ಅಂತರದ ರೋಮಾಂಚಕ ಗೆಲುವು ಸಾಧಿಸಿತು. ಪಂದ್ಯದಲ್ಲಿ ಅಶುತೋಷ್ ಶರ್ಮಾ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು ಗೆಲ್ಲಿಸಿದರು. ಕಳೆದ ಆವೃತ್ತಿಯ ಐಪಿಎಲ್‌ನಲ್ಲೇ ಅಶುತೋಷ್ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದರು. ಹೀಗಾಗಿ ಅವರು ಹೊಸ ಪರಿಚಯ ಅಲ್ಲ. ಇಲ್ಲಿ ತಿಳಿಯಬೇಕಾಗಿದ್ದು ವಿಪ್ರಾಜ್ ಬಗ್ಗೆ.
(AFP)(2 / 10)
ಅಷ್ಟಕ್ಕೂ ಲಕ್ನೋ ತಂಡದಿಂದ ಗೆಲವು ಕಸಿದಿದ್ದೇ ವಿಪ್ರಾಜ್ ಆಟ. ಟ್ರಿಸ್ಟಾನ್ ಸ್ಟಬ್ಸ್ ಔಟಾದಾಗ, ಡೆಲ್ಲಿ ಸೋಲು ಖಚಿತ ಎಂದೇ ಭಾವಿಸಲಾಗಿತ್ತು. ಈ ವೇಳೆ ಕೇವಲ 15 ಎಸೆತಗಳಲ್ಲಿ 39 ರನ್ ಗಳಿಸಿದ ವಿಪ್ರಾಜ್, ತಂಡದ ಬೃಹತ್ ಗುರಿಯನ್ನು ಕುಗ್ಗಿಸಿದರು.
(AFP)(3 / 10)
ಡೆಲ್ಲಿ ತಂಡದ ಗೆಲುವು ಐಪಿಎಲ್ ಮೂಲಕ ಹೊಸ ಪ್ರತಿಭೆಯನ್ನು ಹುಟ್ಟುಹಾಕಿದೆ. ಪಂದ್ಯವು ವಿಪ್ರಾಜ್ ನಿಗಮ್ ಅವರ ಅದ್ಧೂರಿ ಎಂಟ್ರಿಯನ್ನು ತೋರಿಸಿದೆ. ಡೆಲ್ಲಿ ಪರ ಐಪಿಎಲ್‌ಗೆ ಪದಾರ್ಪಣೆ ಮಾಡಿದ ನಿಗಮ್, ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
(AFP)(4 / 10)
ವಿಪ್ರಾಜ್ ನಿಗಮ್ ಉತ್ತರ ಪ್ರದೇಶದವರು. ಇವರಿಗೆ ಇನ್ನೂ 20 ವರ್ಷ ವಯಸ್ಸು. ಕಳೆದ ವರ್ಷ ನಡೆದ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಇವರನ್ನು 50 ಲಕ್ಷ ರೂ.ಗೆ ಖರೀದಿ ಮಾಡಿತು. ತಂಡದ ಪರ ಆಡಿದ ಮೊದಲ ಪಂದ್ಯದಲ್ಲೇ ತಮ್ಮ ಖರೀದಿಯನ್ನು ಸಮರ್ಥಿಸಿಕೊಂಡಿದ್ದಾರೆ.
(PTI)(5 / 10)
ಡೆಲ್ಲಿ ತಂಡದ ಅಭಿಯಾನ ಆರಂಭಕ್ಕೂ ಮುನ್ನ ನಡೆದ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿ (ತಂಡದೊಳಗಿನ), ವಿಪ್ರಾಜ್ 29 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ನೆರವಿನಿಂದ 54 ರನ್ ಗಳಿಸಿದ್ದರು.
(PTI)(6 / 10)
ಯುವ ಆಲ್‌ರೌಂಡರ್ ಮೊದಲು UPT20 ಟೂರ್ನಿಯ 2024ರ ಋತುವಿನಲ್ಲಿ ಗಮನ ಸೆಳೆದಿದ್ದರು. ಯುಪಿ ಫಾಲ್ಕನ್ಸ್ ಪರ 12 ಪಂದ್ಯಗಳನ್ನು ಆಡಿದ್ದರು. 7.45ರ ಎಕಾನಮಿಯಲ್ಲಿ 20 ವಿಕೆಟ್ ಕಬಳಿಸಿದ್ದರು.
(Surjeet Yadav)(7 / 10)
ಉತ್ತರ ಪ್ರದೇಶ ಪರ ಎಲ್ಲಾ ಸ್ವರೂಪಗಳಲ್ಲಿ ಆಡುವ ಮೂಲಕ ದೇಶೀಯ ವೃತ್ತಿಜೀವನದಲ್ಲಿಯೂ ಇವರು ಅಬ್ಬರಿಸಿದ್ದಾರೆ. 2024-25ರ ಋತುವಿನಲ್ಲಿ, ಅವರು ಮೂರು ಪ್ರಥಮ ದರ್ಜೆ ಪಂದ್ಯ, ಐದು ಲಿಸ್ಟ್-ಎ ಪಂದ್ಯಗಳು ಮತ್ತು ಏಳು ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.
(PTI)(8 / 10)
2024-25ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಸಮಯದಲ್ಲಿ, ನಿಗಮ್ ಉತ್ತಮ ಪ್ರದರ್ಶನ ನೀಡಿದ್ದರು. 7ರ ಎಕಾನಮಿಯಲ್ಲಿ 8 ವಿಕೆಟ್ ಕಬಳಿಸಿದ್ದರು. ರಿಂಕು ಸಿಂಗ್ ಅವರೊಂದಿಗೆ ಕೇವಲ ಎಂಟು ಎಸೆತಗಳಲ್ಲಿ 27 ರನ್ ಗಳಿಸುವ ಮೂಲಕ ಆಂಧ್ರ ವಿರುದ್ಧ 157 ರನ್‌ಗಳ ಚೇಸಿಂಗ್ ಯಶಸ್ವಿಯಾಗಿ ಮಾಡಿದ್ದರು.
(PTI)(9 / 10)
ನಿಗಮ್ ರಣಜಿ ಟ್ರೋಫಿಯಲ್ಲಿ ಆಡಿದ ಮೂರು ಪಂದ್ಯಗಳಿಂದ 31ರ ಸರಾಸರಿಯಲ್ಲಿ 13 ವಿಕೆಟ್ ಪಡೆದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಆಂಧ್ರ ವಿರುದ್ಧದ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡದ ಪರ ಕೇವಲ ಎಂಟು ಎಸೆತಗಳಲ್ಲಿ 27 ರನ್ ಗಳಿಸುವ ಮೂಲಕ ಗೆಲುವಿನ ದಡ ಸೇರಿಸಿದರು.
(PTI)ಇತರ ಗ್ಯಾಲರಿಗಳು