ವೀರೇಂದ್ರ ಸೆಹ್ವಾಗ್ ಪತ್ನಿ ಹಿನ್ನೆಲೆಯೇನು? ಉದ್ಯಮಿಯೂ ಆಗಿರುವ ಆರತಿ ಅಹ್ಲಾವತ್ ಉದ್ಯೋಗ, ಶಿಕ್ಷಣ, ವೈಯಕ್ತಿಕ ಬದುಕಿನ ಪರಿಚಯ ಇಲ್ಲಿದೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವೀರೇಂದ್ರ ಸೆಹ್ವಾಗ್ ಪತ್ನಿ ಹಿನ್ನೆಲೆಯೇನು? ಉದ್ಯಮಿಯೂ ಆಗಿರುವ ಆರತಿ ಅಹ್ಲಾವತ್ ಉದ್ಯೋಗ, ಶಿಕ್ಷಣ, ವೈಯಕ್ತಿಕ ಬದುಕಿನ ಪರಿಚಯ ಇಲ್ಲಿದೆ

ವೀರೇಂದ್ರ ಸೆಹ್ವಾಗ್ ಪತ್ನಿ ಹಿನ್ನೆಲೆಯೇನು? ಉದ್ಯಮಿಯೂ ಆಗಿರುವ ಆರತಿ ಅಹ್ಲಾವತ್ ಉದ್ಯೋಗ, ಶಿಕ್ಷಣ, ವೈಯಕ್ತಿಕ ಬದುಕಿನ ಪರಿಚಯ ಇಲ್ಲಿದೆ

  • Aarti Ahlawat: ವೀರೇಂದ್ರ ಸೆಹ್ವಾಗ್ ಪತ್ನಿ ಆರತಿ ಅಹ್ವಾವತ್ ಅವರ ಹಿನ್ನೆಲೆ ಏನು? ಉದ್ಯಮಿಯೂ ಆಗಿರುವ ಆರತಿ, ಉದ್ಯೋಗ, ಶಿಕ್ಷಣ, ವೈಯಕ್ತಿಕ ಬದುಕಿನ ಸಂಪೂರ್ಣ ಪರಿಚಯ ಇಲ್ಲಿದೆ ನೋಡಿ.

ಭಾರತ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್-ಪತ್ನಿ ಆರತಿ ಅಹ್ಲಾವತ್ ಅವರು 20 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಹಲವು ತಿಂಗಳಿಂದ ಈ ಜೋಡಿ ಪ್ರತ್ಯೇಕವಾಗಿ ವಾಸಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
icon

(1 / 12)

ಇನ್​ಸ್ಟಾಗ್ರಾಂನಲ್ಲಿ ಸೆಲೆಬ್ರಿಟಿ ಕಪಲ್ಸ್ ಪರಸ್ಪರ ಅನ್​ಫಾಲೋ ಮಾಡಿಕೊಂಡಿದ್ದಾರೆ. ಸೆಹ್ವಾಗ್ ವಿಚ್ಛೇದನ ವದಂತಿ ನಡುವೆ ಅವರ ಪತ್ನಿ ಆರತಿ ಯಾರೆಂದು ಹುಡುಕಾಟ ಜೋರಾಗಿದೆ. ಆರತಿ ವೈಯಕ್ತಿಕ ಜೀವನ, ಕುಟುಂಬ, ವೃತ್ತಿ ಕುರಿತು ನಾವಿಲ್ಲಿ ತಿಳಿದುಕೊಳ್ಳೋಣ.
icon

(2 / 12)

Who is Aarti Ahlawat?: ಸೆಹ್ವಾಗ್ ಅವರ ಪತ್ನಿ ಆರತಿ ಅಹ್ಲಾವತ್ ಹೊಸದಿಲ್ಲಿಯವರು. 1980ರ ಡಿಸೆಂಬರ್ 16ರಂದು ಜನಿಸಿದರು. ಆಕೆಯ ತಂದೆ ಸೂರಜ್ ಸಿಂಗ್ ಅಹ್ಲಾವತ್ ವಕೀಲರಾಗಿದ್ದರು. ಆರತಿಯ ತಾಯಿಯ ಹೆಸರು ಇನ್ನೂ ಮಾಹಿತಿ ಸಿಕ್ಕಿಲ್ಲ.
icon

(3 / 12)

ದೆಹಲಿ ವಿಶ್ವವಿದ್ಯಾಲಯದ ಮೈತ್ರೇಯಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ ಪದವಿ ಪಡೆಯುವುದಕ್ಕೂ ಮುನ್ನ, ಲೇಡಿ ಇರ್ವಿನ್ ಸೆಕೆಂಡರಿ ಸ್ಕೂಲ್ ಮತ್ತು ಭಾರತೀಯ ವಿದ್ಯಾಭವನದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದರು.
icon

(4 / 12)

ಆರತಿ ಉದ್ಯಮಿಯಾಗಿ ಉತ್ತಮ ಹೆಸರು ಸಂಪಾದಿಸಿದ್ದಾರೆ. ಇವೆಂಟುರಾ ಕ್ರಿಯೇಶನ್ಸ್ ಪ್ರೈವೆಟ್ ಲಿಮಿಟೆಡ್, ಎವಿಎಸ್ ಹೆಲ್ತ್‌ಕೇರ್ ಪ್ರೈವೇಟ್ ಲಿಮಿಟೆಡ್, ಎವಿಎಸ್ ಇವೆಂಟ್ ಮ್ಯಾನೇಜ್ಮೆಂಟ್ ಪ್ರೈವೇಟ್ ಲಿಮಿಟೆಡ್, ಎಸ್​ಎಂಜಿಕೆ ಆಗ್ರೋ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ನಿರ್ದೇಶಕರಾಗಿದ್ದಾರೆ.
icon

(5 / 12)

ಆಕೆಯ ಸಾಧನೆಗಳ ಹೊರತಾಗಿ 2019ರಲ್ಲಿ ಹಿನ್ನಡೆ ಎದುರಿಸಿದರು. ತನ್ನ ವ್ಯಾಪಾರ ಪಾಲುದಾರರು  ₹ 4.5 ಕೋಟಿ ಸಾಲ ಪಡೆಯಲು ಆಕೆಯ ಸಹಿಯನ್ನು ನಕಲಿ ಮಾಡುವ ಮೂಲಕ ವಂಚಿಸಿದ್ದರು ಎಂದು ಆರತಿ ಆರೋಪಿಸಿದರು. ಈ ಬಗ್ಗೆ ಆರತಿ ದೂರು ದಾಖಲಿಸಿದ್ದರು.
icon

(6 / 12)

ಆಕೆಯ ಸಾಧನೆಗಳ ಹೊರತಾಗಿ 2019ರಲ್ಲಿ ಹಿನ್ನಡೆ ಎದುರಿಸಿದರು. ತನ್ನ ವ್ಯಾಪಾರ ಪಾಲುದಾರರು 4.5 ಕೋಟಿ ಸಾಲ ಪಡೆಯಲು ಆಕೆಯ ಸಹಿಯನ್ನು ನಕಲಿ ಮಾಡುವ ಮೂಲಕ ವಂಚಿಸಿದ್ದರು ಎಂದು ಆರತಿ ಆರೋಪಿಸಿದರು. ಈ ಬಗ್ಗೆ ಆರತಿ ದೂರು ದಾಖಲಿಸಿದ್ದರು.

Sehwag-Aarti Love Story: ಆರತಿ-ಸೆಹ್ವಾಗ್ ಲವ್​ ಸ್ಟೋರಿ ಅವರ ಬಾಲ್ಯದಿಂದಲೇ ಪ್ರಾರಂಭವಾಯಿತು. ಸೆಹ್ವಾಗ್ 7 ವರ್ಷ, ಆರತಿ 5 ವರ್ಷದವರಾಗಿದ್ದಾಗ ಮದುವೆಯೊಂದರಲ್ಲಿ ಇಬ್ಬರೂ ಮೊದಲು ಭೇಟಿಯಾಗಿದ್ದರು. ಸೆಹ್ವಾಗ್​ರ ಸೋದರಸಂಬಂಧಿ ಆರತಿ ಅವರ ಚಿಕ್ಕಮ್ಮನನ್ನು ವಿವಾಹವಾದರು. ಇದು ವರ್ಷಗಳು ಕಳೆದಂತೆ ಇಬ್ಬರ ನಡುವೆ ಬಾಂಧವ್ಯ ಹೆಚ್ಚಿಸಿತು.
icon

(7 / 12)

ಸೆಹ್ವಾಗ್ ತನ್ನ 21ನೇ ವಯಸ್ಸಿನಲ್ಲಿ ತನಗೆ 14 ವರ್ಷಗಳಿಂದ ಪರಿಚಯ ಹೊಂದಿದ್ದ ಆರತಿಯನ್ನು ವರಿಸಿದರು. ದೂರದ ಕೌಟುಂಬಿಕ ಸಂಬಂಧ ಹೊಂದಿದ್ದ ಹಿನ್ನೆಲೆ ಇಬ್ಬರ ಪ್ರೇಮ ವಿವಾಹಕ್ಕೆ ಎರಡೂ ಕುಟುಂಬಗಳು ಒಪ್ಪಿಗೆ ನೀಡಿದ್ದವು. 
icon

(8 / 12)

2004ರಲ್ಲಿ ದಿವಂಗತ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನಿವಾಸದಲ್ಲಿ ಆಯೋಜಿಸಲಾದ ಅದ್ಧೂರಿ ಸಮಾರಂಭದಲ್ಲಿ ವೀರು ಮತ್ತು ಆರತಿ ವಿವಾಹವಾದರು. ಅರುಣ್ ಜೇಟ್ಲಿ ಸಹ ಇಬ್ಬರಿಗೂ ಸಂಬಂಧಿಯಾಗಿದ್ದರು.
icon

(9 / 12)

2007ರಲ್ಲಿ ತಮ್ಮ ಮೊದಲ ಮಗ ಆರ್ಯವೀರ್​ಗೆ ಮತ್ತು 2010ರಲ್ಲಿ 2ನೇ ಮಗ ವೇದಾಂತ್​ಗೆ ಪೋಷಕರಾದರು. ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನ ಸಮತೋಲನಗೊಳಿಸಿದ ಆರತಿ ಮತ್ತು ಸೆಹ್ವಾಗ್, ಅನೇಕರಿಗೆ ಮಾದರಿಯಾಗಿದ್ದರು.
icon

(10 / 12)

ಮೂಲಗಳ ಪ್ರಕಾರ, ಆರತಿ ಮತ್ತು ವೀರೇಂದ್ರ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಒಬ್ಬ ಮಗ ಸೆಹ್ವಾಗ್​ ಜತೆಗೆ ಮತ್ತೊಬ್ಬ ಆರತಿಯೊಂದಿಗೆ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ಆದರೆ ಇಬ್ಬರು ವಿಚ್ಛೇದನ ಪಡೆಯುವ ಕುರಿತು ಯಾವುದೇ ಅಧಿಕೃತ ಪೋಸ್ಟ್ ಅಥವಾ ಹೇಳಿಕೆ ನೀಡಿಲ್ಲ.
icon

(11 / 12)

ವೀರೇಂದ್ರ ಸೆಹ್ವಾಗ್ ಭಾರತದ ಮಾಜಿ ಕ್ರಿಕೆಟಿಗ. 1999 ರಿಂದ 2013ರ ತನಕ ಅಂದರೆ 14 ವರ್ಷಗಳ ಕಾಲ ರಾಷ್ಟ್ರೀಯ ತಂಡ ಪ್ರತಿನಿಧಿಸಿದ್ದರು. ಆರಂಭಿಕ ಆಟಗಾರನಾಗಿ ಅನೇಕ ಪಂದ್ಯಗಳ ಗೆಲುವಿಗೆ ನೆರವಾಗಿದ್ದ  ರತ್ನಗಳಲ್ಲಿ ಒಬ್ಬರು. ಭಾರತೀಯ ಕ್ರಿಕೆಟ್​ಗೆ ಸೆಹ್ವಾಗ್ ಕೊಡುಗೆ ಅನನ್ಯ.
icon

(12 / 12)

ಇತರ ಗ್ಯಾಲರಿಗಳು