ದಶಕವೊಂದರಲ್ಲಿ ಅತ್ಯಧಿಕ ಶತಕ ಸಿಡಿಸಿದವರು; ಸಚಿನ್-ಪಾಂಟಿಂಗ್ ಪಟ್ಟಿಯಲ್ಲಿದ್ದರೂ ಕೊಹ್ಲಿಗೆ ಯಾರಿಲ್ಲ ಸರಿಸಾಟಿ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದಶಕವೊಂದರಲ್ಲಿ ಅತ್ಯಧಿಕ ಶತಕ ಸಿಡಿಸಿದವರು; ಸಚಿನ್-ಪಾಂಟಿಂಗ್ ಪಟ್ಟಿಯಲ್ಲಿದ್ದರೂ ಕೊಹ್ಲಿಗೆ ಯಾರಿಲ್ಲ ಸರಿಸಾಟಿ!

ದಶಕವೊಂದರಲ್ಲಿ ಅತ್ಯಧಿಕ ಶತಕ ಸಿಡಿಸಿದವರು; ಸಚಿನ್-ಪಾಂಟಿಂಗ್ ಪಟ್ಟಿಯಲ್ಲಿದ್ದರೂ ಕೊಹ್ಲಿಗೆ ಯಾರಿಲ್ಲ ಸರಿಸಾಟಿ!

ವಿರಾಟ್ ಕೊಹ್ಲಿ 1970 ರಿಂದ ಒಂದು ದಶಕದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆಯನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ಮತ್ತು ರಿಕಿ ಪಾಂಟಿಂಗ್ ಅವರಂತಹ ದಂತಕಥೆಗಳಿದ್ದಾರೆ, ಆದರೆ ಕೊಹ್ಲಿಗೆ ಸರಿಸಾಟಿಯಿಲ್ಲ.

ಒಂದು ದಶಕದಲ್ಲಿ ಅತಿ ಹೆಚ್ಚು ರನ್ ಗಳಿಸಿದವರು - ಕ್ರಿಕೆಟ್ ಮೈದಾನದಲ್ಲಿ ಅನೇಕ ಶ್ರೇಷ್ಠ ಬ್ಯಾಟ್ಸ್ಮನ್ಗಳು ಇಡೀ ವಿಶ್ವದ ಗಮನವನ್ನು ಸೆಳೆದಿದ್ದಾರೆ. ಈ ಪಟ್ಟಿಯಲ್ಲಿ ಸುನಿಲ್ ಗವಾಸ್ಕರ್, ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್ ಮತ್ತು ವಿರಾಟ್ ಕೊಹ್ಲಿ ಅವರಂತಹ ಆಟಗಾರರು ಸೇರಿದ್ದಾರೆ. ಆದರೆ ಒಂದು ದಶಕದಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ದಾಖಲೆ ಹೊಂದಿರುವ ಆಟಗಾರರು ಯಾರು ಎಂದು ನಿಮಗೆ ತಿಳಿದಿದೆಯೇ? ಇಲ್ಲದಿದ್ದರೆ, ನಾವು ನಿಮಗೆ ಹೇಳೋಣ, ಈ ಅಂಕಿಅಂಶಗಳು 1970 ರವು, ನೋಡೋಣ-
icon

(1 / 6)

ಸುನಿಲ್ ಗವಾಸ್ಕರ್ (1970-79): 1970ರ ದಶಕದಲ್ಲಿ ಕ್ರಿಕೆಟ್ ಲೋಕವನ್ನು ಆಳುತ್ತಿದ್ದ ಗವಾಸ್ಕರ್, ಎದುರಾಳಿ ತಂಡಗಳಿಗೆ ನಡುಕು ಹುಟ್ಟಿಸುತ್ತಿದ್ದರು. 22 ಯಾರ್ಡ್​ ಪಿಚ್​​ನಲ್ಲಿ ಬೌಲರ್​​ಗಳಿಗೆ ಮನಬಂದಂತೆ ದಂಡಿಸುತ್ತಿದ್ದ ಲಿಟ್ಲ್ ಮಾಸ್ಟರ್​, ಈ ಅವಧಿಯಲ್ಲಿ 22 ಶತಕ ಬಾರಿಸಿದ್ದರು.
icon

(2 / 6)

ಡೆಸ್ಮಂಡ್ ಹೇನ್ಸ್ (1980-89): ಈ ವೆಸ್ಟ್ ಇಂಡೀಸ್ ಬ್ಯಾಟರ್​ 1980ರ ದಶಕದಲ್ಲಿ ಒಟ್ಟು 27 ಶತಕ ಗಳಿಸಿದ್ದರು. ಏಕದಿನ ಕ್ರಿಕೆಟ್​ನಲ್ಲಿ 15 ಬಾರಿ ಮತ್ತು ಟೆಸ್ಟ್​ನಲ್ಲಿ 12 ಬಾರಿ 100 ರನ್​ಗಳ ಮ್ಯಾಜಿಕ್ ನಂಬರ್ ಮುಟ್ಟಿದ್ದಾರೆ.
icon

(3 / 6)

ಸಚಿನ್ ತೆಂಡೂಲ್ಕರ್ (1990-99): ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 1990ರ ಜನವರಿ 1ರಿಂದ 1999ರ ಡಿಸೆಂಬರ್ 31ರ ಅವಧಿಯಲ್ಲಿ 46 ಶತಕ ಬಾರಿಸಿದ್ದರು. ಏಕದಿನ ಕ್ರಿಕೆಟ್​ನಲ್ಲಿ 24 ಶತಕ ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ 22 ಶತಕ ಬಾರಿಸಿದ್ದರು.
icon

(4 / 6)

ರಿಕಿ ಪಾಂಟಿಂಗ್ (2000-09): ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ತಮ್ಮ ತಂಡಕ್ಕೆ 2003 ಮತ್ತು 2007ರ ವಿಶ್ವಕಪ್ ಗೆದ್ದರು. ಈ ಸಮಯದಲ್ಲಿ ಅವರು ಬ್ಯಾಟ್​​ನೊಂದಿಗೂ ಸಖತ್ ಸದ್ದು ಮಾಡಿದರು. 2000ರ ಜನವರಿ 1 ರಿಂದ 31 ಡಿಸೆಂಬರ್ 2009ರ ನಡುವೆ, ಅವರು ಒಟ್ಟು 55 ಶತಕ ಗಳಿಸಿದರು. ಈ ಪಟ್ಟಿಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ.
icon

(5 / 6)

ವಿರಾಟ್ ಕೊಹ್ಲಿ (2010-19): ಒಂದು ದಶಕದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್​ಗಳ ರೇಸ್​​ನಲ್ಲಿ ಕೊಹ್ಲಿಗೆ ಸರಿಸಾಟಿ ಯಾರು ಇಲ್ಲ. 2010 ಮತ್ತು 2019ರ ನಡುವೆ, ಕಿಂಗ್ ಕೊಹ್ಲಿ ಒಟ್ಟು 69 ಶತಕ ಬಾರಿಸಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ 42 ಮತ್ತು ಟೆಸ್ಟ್ ಕ್ರಿಕೆಟ್​ನಲ್ಲಿ 27 ಶತಕ ಗಳಿಸಿದ್ದರು.
icon

(6 / 6)

(AP)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು