2022ರ ನಂತರ ಅತಿ ಹೆಚ್ಚು ಪಂದ್ಯಶ್ರೇಷ್ಠ ಗೆದ್ದ ಕ್ರಿಕೆಟಿಗರು; ಗಿಲ್ಗೆ ಅಗ್ರಸ್ಥಾನ, ಕೊಹ್ಲಿಗೆ ಎಷ್ಟನೇ ಸ್ಥಾನ?
- 2025ರ ಐಪಿಎಲ್ನಲ್ಲಿ ಆಟಗಾರರ ಅದ್ಭುತ ಪ್ರದರ್ಶನ ಮುಂದುವರೆದಿದೆ. ಆದರೆ 2022ರ ಐಪಿಎಲ್ ನಂತರ ಅತ್ಯಧಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಆಟಗಾರರು ಯಾರು? ಇಲ್ಲಿದೆ ವಿವರ.
- 2025ರ ಐಪಿಎಲ್ನಲ್ಲಿ ಆಟಗಾರರ ಅದ್ಭುತ ಪ್ರದರ್ಶನ ಮುಂದುವರೆದಿದೆ. ಆದರೆ 2022ರ ಐಪಿಎಲ್ ನಂತರ ಅತ್ಯಧಿಕ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿರುವ ಆಟಗಾರರು ಯಾರು? ಇಲ್ಲಿದೆ ವಿವರ.
(1 / 8)
ಗುಜರಾತ್ ಜೈಂಟ್ಸ್ ನಾಯಕ ಶುಭ್ಮನ್ ಗಿಲ್, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಐಪಿಎಲ್ 2022ರ ನಂತರ, ಗಿಲ್ 53 ಪಂದ್ಯಗಳಲ್ಲಿ 8 ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದು ಅಗ್ರಸ್ಥಾನದಲ್ಲಿದ್ದಾರೆ.
(2 / 8)
ಸೋಮವಾರ (ಏಪ್ರಿಲ್ 21) ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಶುಭ್ಮನ್ ಗಿಲ್ ತಮ್ಮ ಬ್ಯಾಟಿಂಗ್‌ನ ಬಲಿಷ್ಠ ಫಾರ್ಮ್ ಪ್ರದರ್ಶಿಸಿದರು. ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ 90 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ಗಿಲ್, ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
(3 / 8)
ಈ ಪಟ್ಟಿಯಲ್ಲಿ ಜೋಸ್ ಬಟ್ಲರ್ ಕೂಡ ಹಿಂದುಳಿದಿಲ್ಲ. ಇಂಗ್ಲೆಂಡ್ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಬಟ್ಲರ್ ಈ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ತಂಡದ ಭಾಗವಾಗಿದ್ದಾರೆ. ಐಪಿಎಲ್ 2022 ರಿಂದ ಇಲ್ಲಿಯವರೆಗೆ ಅವರು 50 ಪಂದ್ಯಗಳಲ್ಲಿ 7 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ.
(4 / 8)
ಸೋಮವಾರ (ಏಪ್ರಿಲ್ 21) ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಜೋಸ್ ಬಟ್ಲರ್ ಬ್ಯಾಟ್ ಕೂಡ ಜೋರು ಸದ್ದು ಮಾಡಿತು. ಅವರು 41 ರನ್‌ಗಳ ಸಣ್ಣ ಇನ್ನಿಂಗ್ಸ್ ಕಟ್ಟಿದರೂ ಬಹಳ ಮುಖ್ಯವಾದ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್‌ನಿಂದ ಗುಜರಾತ್ ತಂಡ 198 ರನ್‌ಗಳ ಗುರಿ ತಲುಪಿತು. ಪ್ರಸ್ತುತ ಐಪಿಎಲ್ನಲ್ಲಿ 356 ರನ್ ಗಳಿಸಿ ಅತ್ಯಧಿಕ ರನ್ ಗಳಿಸಿದವರ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದಿದ್ದಾರೆ.
(5 / 8)
ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಐಪಿಎಲ್ 2022ರ ನಂತರ ಕೊಹ್ಲಿ 53 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, ಆರು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ.
(6 / 8)
ಈ ಋತುವಿನಲ್ಲಿ ಪಂಜಾಬ್ ವಿರುದ್ಧ ಮಹತ್ವದ ಇನ್ನಿಂಗ್ಸ್ ಆಡುವ ಮೂಲಕ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ಈ ಕಾರಣಕ್ಕೆ ಅವರಿಗೆ ಪಂದ್ಯಶ್ರೇಷ್ಠ ನೀಡಲಾಗಿತ್ತು. ಅವರು ಅಜೇಯ 73 ರನ್ ಸಿಡಿಸಿದ್ದರು.
(7 / 8)
ಈ ಪಟ್ಟಿಯಲ್ಲಿ ಕುಲ್ದೀಪ್ ಯಾದವ್ ಹೆಸರೂ ಸೇರಿದೆ. ಡೆಲ್ಲಿ ಕ್ಯಾಪಿಟಲ್ಸ್‌ನ ಈ ಅದ್ಭುತ ಸ್ಪಿನ್ನರ್ ಐಪಿಎಲ್ 2022ರ ನಂತರ ಒಟ್ಟು 46 ಪಂದ್ಯಗಳಲ್ಲಿ ಆರು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ.
ಇತರ ಗ್ಯಾಲರಿಗಳು