ರದ್ದಾಗುತ್ತಾ ಐಪಿಎಲ್ ಅಥವಾ ಉಳಿದ ಪಂದ್ಯಗಳು ಮರು ನಿಗದಿಯೇ? ಬಿಸಿಸಿಐ ತುರ್ತು ಸಭೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರದ್ದಾಗುತ್ತಾ ಐಪಿಎಲ್ ಅಥವಾ ಉಳಿದ ಪಂದ್ಯಗಳು ಮರು ನಿಗದಿಯೇ? ಬಿಸಿಸಿಐ ತುರ್ತು ಸಭೆ

ರದ್ದಾಗುತ್ತಾ ಐಪಿಎಲ್ ಅಥವಾ ಉಳಿದ ಪಂದ್ಯಗಳು ಮರು ನಿಗದಿಯೇ? ಬಿಸಿಸಿಐ ತುರ್ತು ಸಭೆ

  • ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯ ರದ್ದಾಗಿದೆ. ಇದೀಗ ಉಳಿದ ಪಂದ್ಯಗಳನ್ನು ರದ್ದುಗೊಳಿಸಬೇಕೇ ಅಥವಾ ಮರುನಿಗದಿಪಡಿಸಬೇಕೇ ಎಂಬುದರ ಕುರಿತು ಬಿಸಿಸಿಐ ಚರ್ಚೆ ನಡೆಸಿದೆ.

ಭಾರತ ಮತ್ತು ಪಾಕಿಸ್ತಾನ ನಡುವೆ ಯುದ್ಧೋನ್ಮಾದ ಹೆಚ್ಚಾದ ಹಿನ್ನೆಲೆ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ 58ನೇ ಐಪಿಎಲ್ ಪಂದ್ಯವನ್ನು ರದ್ದುಗೊಳಿಸಲಾಗಿದೆ.
icon

(1 / 5)

(AP)

ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್​ ನಡೆಯುತ್ತಿದ್ದ ಮ್ಯಾಚ್​​​ನಲ್ಲಿ ಪಂಜಾಬ್​​ ಅದ್ಭುತ ಬ್ಯಾಟಿಂಗ್ ಮಾಡುತ್ತಿತ್ತು. 10.1 ಓವರ್​​ಗಳಲ್ಲಿ 122 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿತ್ತು.
icon

(2 / 5)

ಪಂದ್ಯ ರದ್ದಾದ ಬೆನ್ನಲ್ಲೇ ಬಿಸಿಸಿಐ ತುರ್ತು ನಡೆಸಿದ್ದು, ಮುಂದಿನ ಪಂದ್ಯಗಳ ಆಯೋಜನೆಗೆ ಸಂಬಂಧಿಸಿ ಐಪಿಎಲ್ ಆಡಳಿತ ಮಂಡಳಿ ಜೊತೆಗೆ ಮಾತುಕತೆ ನಡೆಸಿದೆ.
icon

(3 / 5)

(PTI)

ಉತ್ತರ ಭಾರತದಲ್ಲಿ ನಡೆಯಲಿರುವ ಪಂದ್ಯಗಳನ್ನು ದಕ್ಷಿಣ ಭಾರತಕ್ಕೆ ಸ್ಥಳಾಂತರ ಮಾಡಬೇಕೇ ಅಥವಾ ಉಳಿದ ಪಂದ್ಯಗಳನ್ನು ರದ್ದುಪಡಿಸಿ ಮರುನಿಗದಿ ಮಾಡಬೇಕೇ ಎನ್ನುವ ಕುರಿತು ಚರ್ಚೆ ನಡೆದಿದೆ ಎಂದು ವರದಿಯಾಗಿದೆ.
icon

(4 / 5)

(Jitender Gupta)

ಆದರೆ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಮೇ 9ರಂದು ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿ ಮತ್ತೊಂದು ಸುತ್ತಿನ ಸಭೆ ನಡೆಸಲಿದೆ. ಸದ್ಯ ಭಾರತ ಸರ್ಕಾರದೊಂದಿಗೆ ಬಿಸಿಸಿಐ ನಿರಂತರ ಸಂಪರ್ಕದಲ್ಲಿದೆ.
icon

(5 / 5)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು