ಕನ್ನಡ ಸುದ್ದಿ  /  Photo Gallery  /  Cricket Womens Premier League 2024 Points Table Mumbai Indians At Top Of The Table Wpl 2024 Standings Rcb Upw Dcw Gj Jra

ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ಗೆ ಅಗ್ರಸ್ಥಾನ; ಆರ್‌ಸಿಬಿ ಎಲ್ಲಿದೆ? ಡಬ್ಲ್ಯೂಪಿಎಲ್‌ 2024ರ ಅಂಕಪಟ್ಟಿ

  • WPL 2024 Points Table: ಪ್ರಸಕ್ತ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಈಗಾಗಲೇ ಮೂರು ಪಂದ್ಯಗಳು ನಡೆದಿವೆ. ಸದ್ಯ ಅಂಕಪಟ್ಟಿಯಲ್ಲಿ ಯಾವ ತಂಡವು ಯಾವ ಸ್ಥಾನ ಪಡೆದುಕೊಂಡಿವೆ ಎಂಬುದನ್ನು ಇಲ್ಲಿ ನೋಡೋಣ. ಆಡಿದ ಎರಡೂ ಪಂದ್ಯಗಳಲ್ಲಿ ಗೆದ್ದ ಮುಂಬೈ ಇಂಡಿಯನ್ಸ್‌ ಅಗ್ರಸ್ಥಾನ ಪಡೆದುಕೊಂಡಿದೆ.

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ಮೊದಲ 2 ಪಂದ್ಯಗಳಲ್ಲಿ ಗೆದ್ದಿದೆ. ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿತು. ಸದ್ಯ ಮುಂಬೈ ಇಂಡಿಯನ್ಸ್ 2 ಪಂದ್ಯಗಳಿಂದ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂಡದ ನೆಟ್ ರನ್-ರೇಟ್ +0.488 ಆಗಿದೆ. 
icon

(1 / 5)

ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡವು ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ತನ್ನ ಮೊದಲ 2 ಪಂದ್ಯಗಳಲ್ಲಿ ಗೆದ್ದಿದೆ. ಆರಂಭಿಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿತು. ಸದ್ಯ ಮುಂಬೈ ಇಂಡಿಯನ್ಸ್ 2 ಪಂದ್ಯಗಳಿಂದ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ತಂಡದ ನೆಟ್ ರನ್-ರೇಟ್ +0.488 ಆಗಿದೆ. (PTI)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಗೆಲುವಿನೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ ಅಭಿಯಾನ ಆರಂಭಿಸಿದೆ. ಟೂರ್ನಿಯಲ್ಲಿ ಇದುವರೆಗೆ 1 ಪಂದ್ಯ ಆಡಿದ ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ತಂಡ, ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿತು. ಬೆಂಗಳೂರು ಪ್ರಸ್ತುತ 1 ಪಂದ್ಯದಿಂದ 2 ಅಂಕಗಳೊಂದಿಗೆ ಲೀಗ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನೆಟ್ ರನ್‌ ರೇಟ್ +0.100 ಆಗಿದೆ.
icon

(2 / 5)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ವರ್ಷ ಗೆಲುವಿನೊಂದಿಗೆ ಮಹಿಳಾ ಪ್ರೀಮಿಯರ್ ಲೀಗ್ ಅಭಿಯಾನ ಆರಂಭಿಸಿದೆ. ಟೂರ್ನಿಯಲ್ಲಿ ಇದುವರೆಗೆ 1 ಪಂದ್ಯ ಆಡಿದ ಸ್ಮೃತಿ ಮಂಧಾನ ನೇತೃತ್ವದ ಆರ್‌ಸಿಬಿ ತಂಡ, ಯುಪಿ ವಾರಿಯರ್ಸ್ ತಂಡವನ್ನು ಸೋಲಿಸಿತು. ಬೆಂಗಳೂರು ಪ್ರಸ್ತುತ 1 ಪಂದ್ಯದಿಂದ 2 ಅಂಕಗಳೊಂದಿಗೆ ಲೀಗ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನೆಟ್ ರನ್‌ ರೇಟ್ +0.100 ಆಗಿದೆ.(AFP)

ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭಿಕ ಪಂದ್ಯವನ್ನು ಸೋತಿತು. ಕೊನೆಯ ಎಸೆತದಲ್ಲಿ ಪಂದ್ಯ ಕಳೆದುಕೊಂಡ ತಂಡವು, ಟೂರ್ನಿಯಲ್ಲಿಅಂಕಗಳ ಖಾತೆಯನ್ನು ತೆರೆಯಲು ಇನ್ನೂ ಸಾಧ್ಯವಾಗಿಲ್ಲ. ಆದರೂ ತಂಡವು ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನೆಟ್ ರನ್ ರೇಟ್ -0.100‌ ಆಗಿದೆ.
icon

(3 / 5)

ಮೆಗ್ ಲ್ಯಾನಿಂಗ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭಿಕ ಪಂದ್ಯವನ್ನು ಸೋತಿತು. ಕೊನೆಯ ಎಸೆತದಲ್ಲಿ ಪಂದ್ಯ ಕಳೆದುಕೊಂಡ ತಂಡವು, ಟೂರ್ನಿಯಲ್ಲಿಅಂಕಗಳ ಖಾತೆಯನ್ನು ತೆರೆಯಲು ಇನ್ನೂ ಸಾಧ್ಯವಾಗಿಲ್ಲ. ಆದರೂ ತಂಡವು ಲೀಗ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ನೆಟ್ ರನ್ ರೇಟ್ -0.100‌ ಆಗಿದೆ.(PTI)

ಅಲಿಸ್ಸಾ ಹೀಲಿ ನೇತೃತ್ವದ ಯುಪಿ ವಾರಿಯರ್ಸ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಈ ವರ್ಷದ ಅಭಿಯಾನವನ್ನು ಸೋಲಿನೊಂದಿಗೆ ಆರಂಭಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೊದಲ ಪಂದ್ಯವನ್ನು ಸೋತ ತಂಡವು, ಇನ್ನೂ ಪಾಯಿಂಟ್ ಗಳಿಸಿಲ್ಲ. ಸದ್ಯ ತಂಡವು ಲೀಗ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಾರಿಯರ್ಸ್ ತಂಡದ ನೆಟ್ ರನ್-ರೇಟ್ -0.100. 
icon

(4 / 5)

ಅಲಿಸ್ಸಾ ಹೀಲಿ ನೇತೃತ್ವದ ಯುಪಿ ವಾರಿಯರ್ಸ್ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಈ ವರ್ಷದ ಅಭಿಯಾನವನ್ನು ಸೋಲಿನೊಂದಿಗೆ ಆರಂಭಿಸಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಮೊದಲ ಪಂದ್ಯವನ್ನು ಸೋತ ತಂಡವು, ಇನ್ನೂ ಪಾಯಿಂಟ್ ಗಳಿಸಿಲ್ಲ. ಸದ್ಯ ತಂಡವು ಲೀಗ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ವಾರಿಯರ್ಸ್ ತಂಡದ ನೆಟ್ ರನ್-ರೇಟ್ -0.100. (WPL)

ಬೆತ್ ಮುನಿ ನೇತೃತ್ವದ ಗುಜರಾತ್ ಜೈಂಟ್ಸ್ ತಂಡವು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದೆ. 1 ಪಂದ್ಯ ಆಡಿದ ಬಳಿಕ ತಂಡದ ಬಳಿ ಯಾವುದೇ ಅಂಕ ಗಳಿಸಿಲ್ಲ. ಗುಜರಾತ್ ಜೈಂಟ್ಸ್‌ ಪ್ರಸ್ತುತ ಲೀಗ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್-ರೇಟ್ -0.801. 
icon

(5 / 5)

ಬೆತ್ ಮುನಿ ನೇತೃತ್ವದ ಗುಜರಾತ್ ಜೈಂಟ್ಸ್ ತಂಡವು ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋತಿದೆ. 1 ಪಂದ್ಯ ಆಡಿದ ಬಳಿಕ ತಂಡದ ಬಳಿ ಯಾವುದೇ ಅಂಕ ಗಳಿಸಿಲ್ಲ. ಗುಜರಾತ್ ಜೈಂಟ್ಸ್‌ ಪ್ರಸ್ತುತ ಲೀಗ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ತಂಡದ ನೆಟ್ ರನ್-ರೇಟ್ -0.801. (WPL)


IPL_Entry_Point

ಇತರ ಗ್ಯಾಲರಿಗಳು