WTC Point Table: ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌, ಹೀಗಿದೆ ಅಂಕಪಟ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Wtc Point Table: ದಕ್ಷಿಣ ಆಫ್ರಿಕಾ Vs ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌, ಹೀಗಿದೆ ಅಂಕಪಟ್ಟಿ

WTC Point Table: ದಕ್ಷಿಣ ಆಫ್ರಿಕಾ vs ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌, ಹೀಗಿದೆ ಅಂಕಪಟ್ಟಿ

  • ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್‌ ಟ್ರೋಫಿ ಸರಣಿಯ ಐದನೇ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆದ್ದ ಆಸೀಸ್‌, ಡಬ್ಲ್ಯುಟಿಸಿ ಫೈನಲ್‌ಗೆ ಲಗ್ಗೆ ಹಾಕಿದೆ. 2024-25ರ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಡಲಿರುವ ಎರಡು ತಂಡಗಳು ಅಂತಿಮವಾಗಿದ್ದು, ಭಾರತ ರೇಸ್‌ನಿಂದ ಹೊರಬಿದ್ದಿದೆ.

ಸಿಡ್ನಿಯಲ್ಲಿ ನಡೆದ ಐದನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ ಪ್ರಸಕ್ತ ಡಬ್ಲ್ಯುಟಿಸಿ ಋತುವಿನಲ್ಲಿ ಆಡಿದ 17 ಪಂದ್ಯಗಳಲ್ಲಿ 11 ಗೆಲುವುಗಳೊಂದಿಗೆ ಶೇಕಡಾ 63.73 ಅಂಕಗಳನ್ನು ಪಡೆದಿದೆ. ಆ ಮೂಲಕ ತಂಡವು ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ.
icon

(1 / 10)

(AFP)

ಆಸ್ಟ್ರೇಲಿಯಾ ಸತತ ಎರಡನೇ ಬಾರಿಗೆ ಡಬ್ಲ್ಯುಟಿಸಿ ಫೈನಲ್ ಪ್ರವೇಶಿಸಿದೆ. ಕಳೆದ ಆವೃತ್ತಿಯಲ್ಲಿ ಭಾರತವನ್ನು ಮಣಿಸಿದ್ದ ಆಸೀಸ್‌, ಅದೇ ಮೊದಲ ಬಾರಿಗೆ ಟೆಸ್ಟ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು.
icon

(2 / 10)

ಈ ಬಾರಿ ಮತ್ತೊಮ್ಮೆ ಫೈನಲ್‌ ಪ್ರವೇಶಿಸಿದ ಕಾಂಗರೂಗಳು, ಸತತ ಎರಡನೇ ಬಾರಿಗೆ ಟೆಸ್ಟ್‌ ಚಾಂಪಿಯನ್‌ ಆಗುವ ವಿಶ್ವಾಸದಲ್ಲಿದೆ.
icon

(3 / 10)

ದಕ್ಷಿಣ ಆಫ್ರಿಕಾ ತಂಡವು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಆಡಿದ 11 ಪಂದ್ಯಗಳಲ್ಲಿ 7ರಲ್ಲಿ ಗೆದ್ದ ತಂಡ 88 ಅಂಕ ಗಳಿಸಿದೆ. ಶೇಕಡಾ 66.670 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
icon

(4 / 10)

ಭಾರತ ಕ್ರಿಕೆಟ್‌ ತಂಡವು ಇದೇ ಮೊದಲ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಸ್ಥಾನವನ್ನು ಕಳೆದುಕೊಳ್ಳುತ್ತಿದೆ. ಸತತ ಎರಡೂ ಆವೃತ್ತಿಗಳಲ್ಲಿ ಫೈನಲ್‌ ಪ್ರವೇಶಿಸಿದ್ದ ತಂಡ, ಒಮ್ಮೆಯೂ ಟ್ರೋಫಿ ಗೆದ್ದಿರಲಿಲ್ಲ. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್‌ ವಿರುದ್ಧ ಸೋತರೆ, ಕಳೆದ ಬಾರಿ ಆಸೀಸ್‌ ವಿರುದ್ಧ ಮುಗ್ಗರಿಸಿತ್ತು.
icon

(5 / 10)

ಪ್ರಸಕ್ತ ಆವೃತ್ತಿಯಲ್ಲಿ ಒಟ್ಟು 19 ಪಂದ್ಯ ಆಡಿರುವ ಭಾರತ, 9 ಪಂದ್ಯಗಳಲ್ಲಿ ಗೆದ್ದು 8ರಲ್ಲಿ ಸೋತಿದೆ. 114 ಅಂಕ ಗಳಿಸಿರುವ ತಂಡವು, ಶೇಕಡಾವಾರು 50.00 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
icon

(6 / 10)

ಸದ್ಯ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ನ್ಯೂಜಿಲೆಂಡ್‌ ನಾಲ್ಕನೇ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಐದನೇ ಸ್ಥಾನ ಪಡೆದಿದೆ. ಇಂಗ್ಲೆಂಡ್‌ 6ನೇ ಸ್ಥಾನದಲ್ಲಿದೆ.
icon

(7 / 10)

(PTI)

ಭಾರತದ WTC ಫೈನಲ್ ಹಾದಿ ಸುಲಭವಾಗಿರಲಿಲ್ಲ. ಒಂದು ವೇಳೆ ಸಿಡ್ನಿ ಟೆಸ್ಟ್ ಗೆದ್ದರೂ, ಜನವರಿ 27ರಿಂದ ಆರಂಭವಾಗುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಶ್ರೀಲಂಕಾ ತಂಡವು ಕಾಂಗರೂಗಳನ್ನು ಸೋಲಿಸಬೇಕಿತ್ತು.
icon

(8 / 10)

(AP)

ಈ ಬಾರಿಯ ಡಬ್ಲ್ಯುಟಿಸಿ ಫೈನಲ್‌ ಪಂದ್ಯವು 2025ರ ಜೂನ್‌ 11ರಂದು ಲಂಡನ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆಯಲಿದೆ. ರೋಚಕ ಮುಖಾಮುಖಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಎದುರಾಗಲಿವೆ.
icon

(9 / 10)

ಕ್ಷಣ ಕ್ಷಣದ ಕ್ರಿಕೆಟ್ ಸುದ್ದಿಗಳ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(10 / 10)

ಇತರ ಗ್ಯಾಲರಿಗಳು