ಚಹಲ್-ಧನಶ್ರೀ ಇನ್ಮುಂದೆ ಗಂಡ-ಹೆಂಡತಿ ಅಲ್ಲ, ವಿಚ್ಛೇದನ ಅಧಿಕೃತ; 60 ಕೋಟಿ ಜೀವನಾಂಶದ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್
- ಯುಜ್ವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರು ಇನ್ಮುಂದೆ ಗಂಡ-ಹೆಂಡತಿ ಅಲ್ಲ ಎಂದು ಮುಂಬೈನ ಕೌಟುಂಬಿಕ ನ್ಯಾಯಾಲಯ ಹೇಳಿದೆ. ಹಾಗಾಗಿ ಈ ಜೋಡಿ ವಿಚ್ಛೇದನ ಅಧಿಕೃತವಾಗಿದೆ.
- ಯುಜ್ವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರು ಇನ್ಮುಂದೆ ಗಂಡ-ಹೆಂಡತಿ ಅಲ್ಲ ಎಂದು ಮುಂಬೈನ ಕೌಟುಂಬಿಕ ನ್ಯಾಯಾಲಯ ಹೇಳಿದೆ. ಹಾಗಾಗಿ ಈ ಜೋಡಿ ವಿಚ್ಛೇದನ ಅಧಿಕೃತವಾಗಿದೆ.
(1 / 10)
ಭಾರತ ತಂಡದ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಮುಂಬೈನ ಕೌಟುಂಬಿಕ ನ್ಯಾಯಾಲಯದಲ್ಲಿ ದಂಪತಿಗಳು ಫೆಬ್ರವರಿ 20ರ ಗುರುವಾರ ವಿಚ್ಛೇದನದ ಅಂತಿಮ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಕಳೆದ 18 ತಿಂಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಇಬ್ಬರೂ ಡಿವೋರ್ಸ್ಗೆ ಕಾರಣವನ್ನೂ ಬಹಿರಂಗಪಡಿಸಿದ್ದಾರೆ.
(2 / 10)
ಎಬಿಪಿ ನ್ಯೂಸ್ ವರದಿಯ ಪ್ರಕಾರ, ಚಹಲ್ ಮತ್ತು ಧನಶ್ರೀ ವಿಚ್ಛೇದನದ ಅಂತಿಮ ವಿಚಾರಣೆ ಗುರುವಾರ ನಡೆಯಿತು. ಸುಮಾರು 45 ನಿಮಿಷಗಳ ಕಾಲ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶರು ಇಬ್ಬರಿಗೂ ಕೆಲವು ಪ್ರಶ್ನೆ ಕೇಳಿದರು.
(3 / 10)
ಪರಸ್ಪರ ಒಪ್ಪಿಗೆಯೊಂದಿಗೆ ಬೇರ್ಪಡಲು ನಿರ್ಧರಿಸಿದ್ದೀರಾ ಎಂದು ಧನಶ್ರೀ ಮತ್ತು ಚಹಲ್ ಅವರನ್ನು ನ್ಯಾಯಾಧೀಶರು ಕೇಳಿದಾಗ, ಅವರಿಬ್ಬರೂ ಒಪ್ಪಿಗೆ ಸೂಚಿಸಿದರು. ನಮ್ಮ ದೇಶದಲ್ಲಿ ವಿಚ್ಛೇದನ ಪಡೆಯಲು ದಂಪತಿಗಳು 1 ವರ್ಷಕ್ಕಿಂತ ಹೆಚ್ಚು ಕಾಲ ಪರಸ್ಪರ ಪ್ರತ್ಯೇಕವಾಗಿರಬೇಕು. ಆದರೆ ಈ ಜೋಡಿ 18 ತಿಂಗಳಿಂದ ಪ್ರತ್ಯೇಕವಾಗಿದೆ.
(4 / 10)
ಧನಶ್ರೀ ಮತ್ತು ಚಹಲ್ ಅವರನ್ನು ಪ್ರತ್ಯೇಕತೆಗೆ ಕಾರಣ ಏನೆಂದು ನ್ಯಾಯಾಧೀಶರು ಕೇಳಿದಾಗ, ಇಬ್ಬರೂ ಕೊಟ್ಟ ಉತ್ತರ ಅಚ್ಚರಿ ಮೂಡಿಸಿತ್ತು. ತಿಳುವಳಿಕೆ ಮತ್ತು ಹೊಂದಾಣಿಕೆ ಕೊರತೆಯ ಕಾರಣ ಪರಸ್ಪರ ವಿಚ್ಛೇದನ ಪಡೆಯಲು ಬಯಸಿರುವುದಾಗಿ ಸೆಲೆಬ್ರಿಟಿ ಕಪಲ್ಸ್ ಹೇಳಿದ್ದಾರೆ. ವಾದ ಆಲಿಸಿದ ನಂತರ ತೀರ್ಪಿತ್ತ ನ್ಯಾಯಾಧೀಶರು, ‘ಇನ್ನು ಮುಂದೆ ನೀವಿಬ್ಬರೂ ಗಂಡ ಮತ್ತು ಹೆಂಡತಿ ಅಲ್ಲ’ ಎಂದು ಆದೇಶ ಹೊರಡಿಸಿದ್ದಾರೆ ಎಂದು ವರದಿ ಖಚಿತಪಡಿಸಿದೆ.
(5 / 10)
ಚಹಲ್ ಮತ್ತು ಧನಶ್ರೀ ಇತ್ತೀಚೆಗೆ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದು ವಿಚ್ಛೇದನಕ್ಕೆ ಪುಷ್ಠಿ ನೀಡಿತ್ತು. ಇದಕ್ಕೂ ಮುನ್ನ ಧನಶ್ರೀ ಅವರು ಚಹಲ್ ಅವರ ಉಪನಾಮ ತೆಗೆದು ಹಾಕಿದ್ದೂ ವಿಚ್ಛೇದನ ಪಡೆಯುತ್ತಾರೆ ಎಂಬ ಚರ್ಚೆಗೆ ಕಾರಣವಾಗಿತ್ತು. ಚಹಲ್ ಅವರು ಪತ್ನಿಯ ಜೊತೆಗಿನ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.
(6 / 10)
ಏತನ್ಮಧ್ಯೆ, ವಿಚ್ಛೇದನದ ನಂತರ ಕ್ರಿಕೆಟಿಗ ತನ್ನ ಪತ್ನಿಗೆ ಜೀವನಾಂಶವಾಗಿ 60 ಕೋಟಿ ರೂ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿವೆ. ಆದರೆ ಇದಕ್ಕೆ ಸಂಬಂಧಿಸಿ ಇಬ್ಬರೂ ಕಡೆಯ ವಕೀಲರು ಪ್ರತಿಕ್ರಿಯಿಸಲಿಲ್ಲ. ಆದರೆ ಈ ಸುದ್ದಿ ಹರಡುತ್ತಿದ್ದಂತೆಯೇ ನೆಟ್ಟಿಗರು ಧನಶ್ರೀ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ದುಡ್ಡಿಗಾಗಿ ಇದೆಲ್ಲಾ ನಾಟಕವಾಡಿದ ಸ್ವಾರ್ಥಿ ಎಂದು ಜರಿದಿದ್ದಾರೆ.
(7 / 10)
ಧನಶ್ರೀ ಮತ್ತು ಚಹಲ್ ಅವರು 2020ರ ಡಿಸೆಂಬರ್ 22ರಂದು ಗುರುಗಾಂವ್ನಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾದರು. ಅದೇ ವರ್ಷ ಆಗಸ್ಟ್ನಲ್ಲಿ ಇಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
(8 / 10)
ಆದಾಗ್ಯೂ, ವಿಚ್ಛೇದನಕ್ಕೆ ಸಂಬಂಧಿಸಿ ಅವರು ಕಾನೂನು ಪ್ರಕಾರವೇ ಬೇರ್ಪಟ್ಟಿದ್ದಾರೆ ಎಂದು ಸುದ್ದಿಯಾಗಿರುವುದು ಖಚಿತ. ಆದರೆ 60 ಕೋಟಿ ಜೀವನಾಂಶದ ಬಗ್ಗೆ ಯಾವುದೇ ಅಧಿಕೃತ ಸುದ್ದಿ ಇಲ್ಲ.
(9 / 10)
ಧನಶ್ರೀ ಅವರು ವೃತ್ತಿಯಲ್ಲಿ ದಂತವೈದ್ಯೆ ಮತ್ತು ನೃತ್ಯ ಸಂಯೋಜಕಿ. ಅವರು ಝಲಕ್ ದಿಖ್ಲಾ ಜಾ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಚಹಲ್ ತನ್ನ ಪತ್ನಿ ಜತೆಗೆ ರೀಲ್ಗಳನ್ನು ಮಾಡುತ್ತಿದ್ದರು. ತುಂಬಾನೆ ಖುಷಿಖುಷಿಯಾಗಿ ಜೀವನ ನಡೆಸುತ್ತಿದ್ದ ಈ ಜನಪ್ರಿಯ ಜೋಡಿ ನಾಲ್ಕು ವರ್ಷಗಳ ನಂತರ ಬೇರ್ಪಟ್ಟಿದೆ.
ಇತರ ಗ್ಯಾಲರಿಗಳು












