ರಾಜಸ್ಥಾನ್‌ ರಾಯಲ್ಸ್‌ ಪರ ವಿಶೇಷ ದಾಖಲೆ ಬರೆದ ಆರ್‌ಸಿಬಿ ಮಾಜಿ ಬೌಲರ್ ಯುಜ್ವೇಂದ್ರ ಚಹಾಲ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಜಸ್ಥಾನ್‌ ರಾಯಲ್ಸ್‌ ಪರ ವಿಶೇಷ ದಾಖಲೆ ಬರೆದ ಆರ್‌ಸಿಬಿ ಮಾಜಿ ಬೌಲರ್ ಯುಜ್ವೇಂದ್ರ ಚಹಾಲ್‌

ರಾಜಸ್ಥಾನ್‌ ರಾಯಲ್ಸ್‌ ಪರ ವಿಶೇಷ ದಾಖಲೆ ಬರೆದ ಆರ್‌ಸಿಬಿ ಮಾಜಿ ಬೌಲರ್ ಯುಜ್ವೇಂದ್ರ ಚಹಾಲ್‌

  • ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಎಲಿಮನೇಟರ್‌ ಪಂದ್ಯದಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಪ್ರಮುಖ ಸ್ಪಿನ್ನರ್‌ ಯುಜ್ವೇಂದ್ರ ಚಹಾಲ್‌ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಐಪಿಎಲ್‌ ಇತಿಹಾಸದಲ್ಲೇ ರಾಜಸ್ಥಾನ್‌ ರಾಯಲ್ಸ್‌ ಪರ ಅತಿ ಹೆಚ್ಚು ವಿಕೆಟ್‌ ಕಬಳಿಸಿದ ವಿಶೇಷ ದಾಖಲೆ ಬರೆದಿದ್ದಾರೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ್‌ ರಾಯಲ್ಸ್‌ ತಂಡಗಳ ನಡುವೆ ಎಲಿಮನೇಟರ್‌ ಪಂದ್ಯ ನಡೆಯಿತು. ಪಂದ್ಯದಲ್ಲಿ ಒಂದು ವಿಕೆಟ್‌ ಪಡೆಯುವ ಮೂಲಕ ರಾಜಸ್ಥಾನ್‌ ರಾಯಲ್ಸ್‌ ಪರ ಚಹಾಲ್ ಐಪಿಎಲ್‌ ಇತಿಹಾಸದಲ್ಲಿ ಒಟ್ಟು 66 ವಿಕೆಟ್‌ ಕಬಳಿಸಿದ ಸಾಧನೆ ಮಾಡಿದರು.
icon

(1 / 5)

(PTI)

ಆರ್‌ಸಿಬಿ ವಿರುದ್ಧ 4 ಓವರ್‌ ಎಸೆದ ಚಹಾಲ್‌, ಬೌಲಿಂಗ್‌ನಲ್ಲಿ ದುಬಾರಿಯಾದರು. 10.80ರ ಎಕಾನಮಿಯಲ್ಲಿ ಬರೋಬ್ಬರಿ 43 ರನ್‌ ಬಿಟ್ಟುಕೊಟ್ಟು 1 ವಿಕೆಟ್‌ ಮಾತ್ರ ಪಡೆದರು. ಇದರೊಂದಿಗೆ ತಂಡದ ಪರ ದಾಖಲೆಯ ಪಟ್ಟಿ ಸೇರಿದರು.
icon

(2 / 5)

(Rajasthan Royals-X)

ರಾಜಸ್ಥಾನ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ ದಾಖಲೆ ಈವರೆಗೆ ಸಿದ್ಧಾರ್ಥ್ ತ್ರಿವೇದಿ ಹೆಸರಲ್ಲಿತ್ತು. ಮಾಜಿ ಆಟಗಾರ ತ್ರಿವೇದಿ 65 ವಿಕೆಟ್‌ ಪಡೆದಿದ್ದಾರೆ. ಇದೀಗ ಈ ದಾಖಲೆಯನ್ನು ಚಹಾಲ್‌ ಬ್ರೇಕ್‌ ಮಾಡಿದ್ದಾರೆ.
icon

(3 / 5)

ಆಸೀಸ್‌ ಮಾಜಿ ಆಲ್‌ರೌಂಡರ್‌ ಶೇನ್ ವ್ಯಾಟ್ಸನ್, ಆರ್‌ಆರ್‌ ಪರ 61 ವಿಕೆಟ್‌ ಪಡೆದರೆ, ಶೇನ್ ವಾರ್ನ್ 57 ವಿಕೆಟ್‌ ಪಡೆದಿದ್ದಾರೆ. ಇವರಿಬ್ಬರು ಕ್ರಮವಾಗಿ 4 ಹಾಗೂ 5ನೇ ಸ್ಥಾನದಲ್ಲಿದ್ದಾರೆ.
icon

(4 / 5)

(AP)

ಪಂದ್ಯದಲ್ಲಿ ಮೊದಲು ಬಾಟಿಂಗ್‌ ನಡೆಸಿದ ಆರ್‌ಸಿಬಿ 172 ರನ್‌ ಮಾತ್ರ ಗಳಿಸಿತು. ರಾಜಸ್ಥಾನ್‌ ಕರಾರುವಕ್‌ ಬೌಲಿಂಗ್‌ ದಾಳಿಗೆ ಆರ್‌ಸಿಬಿ ಬ್ಯಾಟ್‌ ಬೀಸಲು ಪರದಾಡಿತು.
icon

(5 / 5)

ಇತರ ಗ್ಯಾಲರಿಗಳು