6 ಶತಕ-ಇಬ್ಬರು ದ್ವಿಶತಕ, 5 ದಿನಗಳಲ್ಲಿ 1427 ರನ್; ಜಿಂಬಾಬ್ವೆ vs ಅಫ್ಘಾನಿಸ್ತಾನ ಟೆಸ್ಟ್ ಡ್ರಾದಲ್ಲಿ ಅಂತ್ಯ
- ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಬಜ್‌ಬಾಲ್ ಟ್ರೆಂಡಿಂಗ್‌ನಲ್ಲಿರುವ ಸಮಯದಲ್ಲಿ ಈ 2 ತಂಡಗಳ ನಡುವಿನ ಪಂದ್ಯವು ನಿಜವಾದ ಟೆಸ್ಟ್ ಹೇಗಿರುತ್ತೆ ಎಂಬುದನ್ನು ತೋರಿಸಿತು. ಈ ಪಂದ್ಯದಲ್ಲಿ 6 ಬ್ಯಾಟರ್‌ಗಳು ಶತಕ ಗಳಿಸಿದರು, ಅವರಲ್ಲಿ ಇಬ್ಬರು ದ್ವಿಶತಕ ಸಿಡಿಸಿದರು.
- ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಬಜ್‌ಬಾಲ್ ಟ್ರೆಂಡಿಂಗ್‌ನಲ್ಲಿರುವ ಸಮಯದಲ್ಲಿ ಈ 2 ತಂಡಗಳ ನಡುವಿನ ಪಂದ್ಯವು ನಿಜವಾದ ಟೆಸ್ಟ್ ಹೇಗಿರುತ್ತೆ ಎಂಬುದನ್ನು ತೋರಿಸಿತು. ಈ ಪಂದ್ಯದಲ್ಲಿ 6 ಬ್ಯಾಟರ್‌ಗಳು ಶತಕ ಗಳಿಸಿದರು, ಅವರಲ್ಲಿ ಇಬ್ಬರು ದ್ವಿಶತಕ ಸಿಡಿಸಿದರು.
(1 / 5)
ಉಭಯ ತಂಡಗಳ ಸಮಬಲದ ಆಟದಿಂದಾಗಿ ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಜಿಂಬಾಬ್ವೆಯ ಕ್ವೀನ್ಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆದ ಮೊದಲ ಪಂದ್ಯದದಲ್ಲಿ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಮಾಡಿತು. ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 586 ರನ್ ಗಳಿಸಿತು. ಫೋಟೋ: ಜಿಂಬಾಬ್ವೆ ಕ್ರಿಕೆಟ್ ಮಂಡಳಿ
(2 / 5)
ಇದಕ್ಕೆ ಉತ್ತರವಾಗಿ ಅಫ್ಘಾನಿಸ್ತಾನ ಕೂಡ ದೊಡ್ಡ ಮೊತ್ತ ಗಳಿಸಿತು. ತಂಡ 699 ರನ್ ಗಳಿಸಿತು. ಒಂದು ವೇಳೆ ಹಶ್ಮತುಲ್ಲಾ ಶಾಹಿದಿ ಪಡೆಯು ಒಂದು ರನ್ ಗಳಿಸಲು ಸಾಧ್ಯವಾಗಿದ್ದರೆ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 700 ರನ್ ಗಳಿಸಿದ ದಾಖಲೆ ನಿರ್ಮಿಸಬಹುದಿತ್ತು. ಆದರೆ ಅದು ಆಗಲಿಲ್ಲ. ಫೋಟೋ: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ.
(3 / 5)
ಪಂದ್ಯಕ್ಕೆ ನಡುವೆ ಮಳೆ ಅಡ್ಡಿಯಾಯ್ತು. ಹೀಗಾಗಿ ಅಫ್ಘಾನಿಸ್ತಾನದ ಗೆಲುವು ಸಾಧ್ಯವಾಗಲಿಲ್ಲ. ನಾಲ್ಕನೇ ದಿನ ಸುರಿದ ಮಳೆಯಿಂದಾಗಿ, ಆಫ್ಘನ್ನರಿಗೆ ಸಮಯ ಕಡಿಮೆಯಾಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಜಿಂಬಾಬ್ವೆ 142 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. ಅಫ್ಘಾನಿಸ್ತಾನ ಪರ ಜಹೀರ್ ಖಾನ್ 3 ವಿಕೆಟ್ ಪಡೆದು ಮಿಂಚಿದರು. ಇನ್ನೂ ಸಮಯ ಇದ್ದಿದ್ದರೆ, ತಂಡ ಗೆಲುವು ಸಾಧಿಸುವ ಸಾಧ್ಯತೆಯೂ ಇತ್ತು. ಫೋಟೋ - ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ.
(4 / 5)
ಈ ಪಂದ್ಯದಲ್ಲಿ ಉಭಯ ತಂಡಗಳ ಒಟ್ಟು ಆರು ಬ್ಯಾಟರ್‌ಗಳು ಶತಕ ಗಳಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆಯ ಸೀನ್ ವಿಲಿಯಮ್ಸ್, ಕ್ರೇಗ್ ಇರ್ವಿನ್ ಮತ್ತು ಬ್ರಿಯಾನ್ ಬೆನೆಟ್ ಶತಕ ಗಳಿಸಿದರು. ಆ ಬಳಿಕ ಅಫ್ಘಾನಿಸ್ತಾನ ಪರ ರಹಮತ್ ಶಾ ಹಾಗೂ ಹಶ್ಮತುಲ್ಲಾ ಶಾಹಿದಿ ದ್ವಿಶತಕ ಬಾರಿಸಿದರು. ಅಫ್ಸರ್ ಝಜೈ ಕೂಡ ಶತಕ ಬಾರಿಸಿದರು. ತಂಡ ಗೆಲ್ಲುವ ಕನಸಿನಲ್ಲಿತ್ತು. ಆದರೆ ಅದು ಆಗಲಿಲ್ಲ. ಫೋಟೋ: ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ
ಇತರ ಗ್ಯಾಲರಿಗಳು