ಅನಂತ್ ಅಂಬಾನಿ ವಿವಾಹ ಪೂರ್ವ ಸಮಾರಂಭದಲ್ಲಿ ಕ್ರಿಕೆಟಿಗರ ದಂಡು; ಧೋನಿ ಹೇರ್‌ಸ್ಟೈಲ್‌ಗೆ ನೆಟ್ಟಿಗರು ಫಿದಾ
- ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಲು ಕ್ರಿಕೆಟ್ ಆಟಗಾರರ ದಂಡೇ ಆಗಮಿಸಿದೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ ಸೇರಿದಂತೆ ಹಲವರು ಜಾಮ್‌ನಗರಕ್ಕೆ ಆಗಮಿಸಿದ್ದಾರೆ. ಇವರೊಂದಿಗೆ ರಶೀದ್ ಖಾನ್, ಡ್ವೇನ್ ಬ್ರಾವೋ ಕೂಡ ಸೇರಿದ್ದಾರೆ.

(1 / 7)
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಲು ಕ್ರಿಕೆಟಿಗರು ಗುಜರಾತ್ನ ಜಾಮ್‌ನಗರಕ್ಕೆ ಆಗಮಿಸಿದ್ದಾರೆ. ಅವರಲಿ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಎಲ್ಲರ ಗಮನ ಸೆಳೆದರು. ಹಳೆಯ ಸ್ಟೈಲ್‌ನಂತೆ ಉದ್ದನೆಯ ಕೂದಲನ್ನು ಬಿಟ್ಟಿರುವ ಮಾಹಿಯ ಹೊಸ ನೋಟ ನೆಟ್ಟಿಗರ ಗಮ ಸೆಳೆದಿದೆ. ಫೋಟೋ: ಇನ್ಸ್ಟಾಗ್ರಾಮ್
(2 / 7)
ಧೋನಿ ಜೊತೆಗೆ ಅವರ ಪತ್ನಿ ಸಾಕ್ಷಿ ಕೂಡ ಅಂಬಾನಿ ಕುಟುಂಬದ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಜಾಮ್‌ನಗರಕ್ಕೆ ತಲುಪಿದ್ದಾರೆ. ಅವರೊಂದಿಗೆ ಮಗಳು ಝಿವಾ ಕಾಣಿಸಿಕೊಂಡಿರಲಿಲ್ಲ.
(ANI)(3 / 7)
ಅನಂತ್-ರಾಧಿಕಾ ವಿವಾಹ ಪೂರ್ವ ಸಮಾರಂಭದಲ್ಲಿ ಹಾರ್ದಿಕ್ ಪಾಂಡ್ಯ ಭಾಗವಹಿಸುವ ನಿರೀಕ್ಷೆಯಿದೆ. ಹಾರ್ದಿಕ್ ಜೊತೆಗೆ ಅವರ ಸಹೋದರ ಕೃನಾಲ್ ಪಾಂಡ್ಯ ಕೂಡ ಇರಲಿದ್ದಾರೆ. ಚಿತ್ರ: ಇನ್ಸ್ಟಾಗ್ರಾಮ್
(4 / 7)
ಸಚಿನ್ ತೆಂಡೂಲ್ಕರ್ ತಮ್ಮ ಪತ್ನಿ ಅಂಜಲಿ ಮತ್ತು ಮಗಳು ಸಾರಾ ತೆಂಡೂಲ್ಕರ್ ಕೂಡಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಅವರು ಈಗಾಗಲೇ ಜಾಮ್‌ಗರ ತಲುಪಿದ್ದಾರೆ. ಚಿತ್ರ: ಇನ್ಸ್ಟಾಗ್ರಾಮ್
(5 / 7)
ರಣಜಿ ಟ್ರೋಫಿಯಲ್ಲಿ ಆಡದೆ ಬಿಸಿಸಿಐ ವಾರ್ಷಿಕ ಒಪ್ಪಂದದಿಂದ ಹೊರಬಿದ್ದಿರುವ ಇಶಾನ್ ಕಿಶನ್ ಕೂಡಾ ಅನಂತ್-ರಾಧಿಕಾ ಅವರ ವಿವಾಹಪೂರ್ವ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ. ಚಿತ್ರ: ಇನ್ಸ್ಟಾಗ್ರಾಮ್
(6 / 7)
ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ ಅವರು ಅಂಬಾನಿ ಕುಟುಂಬದ ಕುಡಿಯ ವಿವಾಹ ಪೂರ್ವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ಮಧ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕ ಜಾಮ್‌ನಗರ ತಲುಪಿದ್ದಾರೆ. ಚಿತ್ರ: ಇನ್ಸ್ಟಾಗ್ರಾಮ್
ಇತರ ಗ್ಯಾಲರಿಗಳು