ಅಲ್ ನಾಸರ್ ತೊರೆಯಲಿದ್ದಾರೆ 1800 ಕೋಟಿ ವೇತನ ಪಡೆಯುವ ಕ್ರಿಸ್ಟಿಯಾನೊ ರೊನಾಲ್ಡೊ? ದಿಗ್ಗಜನ ಮೇಲೆ ಕಣ್ಣಿಟ್ಟ 2 ಕ್ಲಬ್ಗಳು
- Cristiano Ronaldo: ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಲ್ ನಾಸರ್ ಕ್ಲಬ್ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಈ ಕ್ಲಬ್ ಪರ 200 ಮಿಲಿಯನ್ ಯುರೋಗೆ ಒಪ್ಪಂದ ಮಾಡಿಕೊಂಡಿದ್ದ ರೊನಾಲ್ಡೊ ಅವರ ಮೇಲೆ ಎರಡು ಕ್ಲಬ್ಗಳು ಕಣ್ಣಿಟ್ಟಿವೆಯಂತೆ.
- Cristiano Ronaldo: ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಲ್ ನಾಸರ್ ಕ್ಲಬ್ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಈ ಕ್ಲಬ್ ಪರ 200 ಮಿಲಿಯನ್ ಯುರೋಗೆ ಒಪ್ಪಂದ ಮಾಡಿಕೊಂಡಿದ್ದ ರೊನಾಲ್ಡೊ ಅವರ ಮೇಲೆ ಎರಡು ಕ್ಲಬ್ಗಳು ಕಣ್ಣಿಟ್ಟಿವೆಯಂತೆ.
(1 / 6)
2022ರ ಡಿಸೆಂಬರ್ 30ರಂದು ಕ್ರಿಸ್ಟಿಯಾನೊ ರೊನಾಲ್ಡೊ ಅವರು ಅಲ್ ನಾಸರ್ ತಂಡ ಸೇರುವ ಮೂಲಕ ಜಗತ್ತನ್ನು ಅಚ್ಚರಿಗೊಳಿಸಿದ್ದರು. ಸಾರ್ವಕಾಲಿಕ ಶ್ರೇಷ್ಠ ಫುಟ್ಬಾಲ್ ಆಟಗಾರ ಎಂದು ಪರಿಗಣಿಸಲ್ಪಟ್ಟ ರೊನಾಲ್ಡೊ ಅವರು ವರ್ಷಕ್ಕೆ 200 ಮಿಲಿಯನ್ ಯುರೋಗಳನ್ನು ಗಳಿಸುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಜಾಹೀರಾತು ಸೇರಿ 200 ಮಿಲಿಯನ್ ಸಂಬಳ ಪಡೆಯುತ್ತಿದ್ದರು, ಈ ಪೈಕಿ 90 ಮಿಲಿಯನ್ ಯುರೋ ಅವರ ಖಾತರಿ ಸಂಬಳವಾಗಿತ್ತು.
(2 / 6)
200 ಮಿಲಿಯನ್ ಡಾಲರ್ ಯುರೋ ಅಂದರೆ ಭಾರತೀಯ ರೂಪಾಯಿ ಮೌಲ್ಯದಲ್ಲಿ 1800 ಕೋಟಿ ರೂಪಾಯಿ ದುಡಿಯುತ್ತಿದ್ದ ಕ್ರಿಸ್ಟಿಯಾನೋ ರೊನಾಲ್ಡೊ ಇದೀಗ, ಅಲ್ ನಾಸರ್ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಅವರು ಅಲ್ ಹಿಲಾಲ್ ಕ್ಲಬ್ ತಂಡವನ್ನು ಸೇರ್ಪಡೆಯಾಗಲಿದ್ದಾರೆ ಎಂದು ಅದೇ ವರದಿಗಳು ಹೇಳುತ್ತಿವೆ.
(3 / 6)
ಮತ್ತೊಬ್ಬ ಸ್ಟಾರ್ ಪ್ಲೇಯರ್ ನೇಮರ್ ಬದಲಿಗೆ ರೊನಾಲ್ಡೊ ಅವರನ್ನು ಖರೀದಿಸಲು ಅಲ್-ಹಿಲಾಲ್ ಚಿಂತನೆ ನಡೆಸಿದೆ. ನೇಮರ್ ಗಾಯದಿಂದ ಬಳಲುತ್ತಿರುವ ಕಾರಣ, ಚಳಿಗಾಲದ ವರ್ಗಾವಣೆ ವಿಂಡೋದಲ್ಲಿ (Winter transfer window) ಇಂಟರ್ ಮಿಯಾಮಿಗೆ ಸೇರುವ ವದಂತಿಗಳೂ ಇವೆ.
(4 / 6)
ಅಲ್ ಹಿಲಾಲ್ ಜನವರಿಯಲ್ಲಿ ನೇಮರ್ ಅವರ ಒಪ್ಪಂದ ಪೂರ್ಣಗೊಳಿಸುವ ಭರವಸೆ ಇದೆ. ಅಲ್ ನಾಸರ್ ಸೇರಿದ ನಂತರ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ರೊನಾಲ್ಡೊ ವಿಫಲರಾಗಿದ್ದಾರೆ. ಈ ಋತುವಿನಲ್ಲಿ 14 ಪಂದ್ಯಗಳನ್ನು ಆಡಿದ್ದು, 10 ಗೋಲು ಗಳಿಸಿದ್ದಾರೆ.
(5 / 6)
ನಿವೃತ್ತಿಗೂ ಮುನ್ನ ರೊನಾಲ್ಡೊ ಅವರು ಯುರೋಪಿಯನ್ ಪ್ರೀಮಿಯರ್ ಲೀಗ್ ಆಡುತ್ತಾರೆ ಎಂದು ನಿರೀಕ್ಷಿಸುತ್ತಿದ್ದಾರೆ. ಏಕೆಂದರೆ 2022ರಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಪರ ಕೊನೆಯದಾಗಿ ಅವರು ಆಡಿದ್ದರು. ಇದೀಗ 2021 ರಲ್ಲಿ ಎರಡನೇ ಅವಧಿಗೆ ಈ ಕ್ಲಬ್ಗೆ ಸೇರಿದ್ದರು.
ಇತರ ಗ್ಯಾಲರಿಗಳು