ಬಂದ, ಮಗನೂ ಬಂದ; ಫುಟ್ಬಾಲ್ ಲೋಕಕ್ಕೆ ಕಾಲಿಟ್ಟ ಕ್ರಿಸ್ಟಿಯಾನೊ ರೊನಾಲ್ಡೊ ಪುತ್ರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಂದ, ಮಗನೂ ಬಂದ; ಫುಟ್ಬಾಲ್ ಲೋಕಕ್ಕೆ ಕಾಲಿಟ್ಟ ಕ್ರಿಸ್ಟಿಯಾನೊ ರೊನಾಲ್ಡೊ ಪುತ್ರ

ಬಂದ, ಮಗನೂ ಬಂದ; ಫುಟ್ಬಾಲ್ ಲೋಕಕ್ಕೆ ಕಾಲಿಟ್ಟ ಕ್ರಿಸ್ಟಿಯಾನೊ ರೊನಾಲ್ಡೊ ಪುತ್ರ

ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಒಂದು ಕಡೆ ಅದ್ಭುತ ಆಟದೊಂದಿಗೆ ಮುನ್ನಡೆಯುತ್ತಿದ್ದಾರೆ. ಮತ್ತೊಂದೆಡೆ ಅವರ ಮಗ ಫುಟ್ಬಾಲ್ಗೆ ಪಾದಾರ್ಪಣೆ ಮಾಡಿದರು. ಅವರು ರಾಷ್ಟ್ರೀಯ ತಂಡವನ್ನು ಪ್ರವೇಶಿಸಿದರು.

ವಿಶ್ವಶ್ರೇಷ್ಠ ಕಾಲ್ಚೆಂಡಿನ ಚತುರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪುತ್ರ ಕ್ರಿಸ್ಟಿಯಾನೊ ಡಾಸ್ ಸ್ಯಾಂಟೋಸ್ ಫುಟ್ಬಾಲ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಪೋರ್ಚುಗಲ್​ನ ಅಂಡರ್ -15 ತಂಡದಲ್ಲಿ ಅವಕಾಶ ಪಡೆಯುವ ಮೂಲಕ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ.
icon

(1 / 5)

(AFP)

ವ್ಲಾಟ್ಕೊ ಮಾರ್ಕೊವಿಕ್ ಇಂಟರ್​​ನ್ಯಾಷನಲ್​ ಟೂರ್ನಮೆಂಟ್​ನಲ್ಲಿ ಜಪಾನ್ ವಿರುದ್ಧದ ಪಂದ್ಯದಲ್ಲಿ ಜೂನಿಯರ್ ಕ್ರಿಸ್ಟಿಯಾನೊ ಪೋರ್ಚುಗಲ್​​ನ 15 ವರ್ಷದೊಳಗಿನ ತಂಡಕ್ಕೆ ಪಾದಾರ್ಪಣೆ ಮಾಡಿದರು. ಈ ಪಂದ್ಯದಲ್ಲಿ ಪೋರ್ಚುಗಲ್ 4-1 ಗೋಲುಗಳಿಂದ ಗೆದ್ದು ಬೀಗಿತು.
icon

(2 / 5)

ಜಪಾನ್ ವಿರುದ್ಧದ ಪಂದ್ಯದ 54ನೇ ನಿಮಿಷದಲ್ಲಿ ಕ್ರಿಸ್ಟಿಯಾನೊ ಡಾಸ್ ಸ್ಯಾಂಟೋಸ್ ಫಾರ್ವರ್ಡ್ ಆಟಗಾರನಾಗಿ ಉತ್ತಮ ಪ್ರದರ್ಶನ ನೀಡಿದರು. 14 ವರ್ಷದ ಜೂನಿಯರ್ ಕ್ರಿಸ್ಟಿಯಾನೊ ಈಗಾಗಲೇ ಜೂನಿಯರ್ ಮಟ್ಟದಲ್ಲಿ ಮಿಂಚಿದ್ದಾರೆ.
icon

(3 / 5)

ತನ್ನ ಮೊಮ್ಮಗ ಜೂನಿಯರ್ ರೊನಾಲ್ಡೊ ಪೋರ್ಚುಗಲ್ನ ಅಂಡರ್-15 ತಂಡಕ್ಕೆ ಪ್ರವೇಶಿಸಿದ್ದಕ್ಕೆ ಅಜ್ಜಿ ಮಾರಿಯಾ ಅವರು ಭಾವುಕರಾಗಿದ್ದಾರೆ. ಪಂದ್ಯದ ನಂತರ ಅವರು ಮೊಮ್ಮಗನಿಗೆ ಮುತ್ತಿಟ್ಟರು. ತನ್ನ ತಂದೆಯಂತೆಯೇ ಮಗನೂ 7ನೇ ಸಂಖ್ಯೆಯ ಜರ್ಸಿ ಪಡೆದಿದ್ದಾರೆ.
icon

(4 / 5)

ರೊನಾಲ್ಡೊ ತಮ್ಮ ಮಗನ ಚೊಚ್ಚಲ ಪಂದ್ಯದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ತನಗೆ ತುಂಬಾ ಹೆಮ್ಮೆಯಾಗಿರುವುದಾಗಿ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ. ರೊನಾಲ್ಡೊ ಮತ್ತು ಅವರ ಸಂಗಾತಿ ಜಾರ್ಜಿನಾ ರೊಡ್ರಿಗಸ್ ಐದು ಮಕ್ಕಳನ್ನು ಹೊಂದಿದ್ದಾರೆ.
icon

(5 / 5)

(x/cristiano ronaldo)

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು