ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೂವರು ಪುತ್ರಿಯರ ಶಾಲಾ ಫೀಸ್ ಕಟ್ಟದೆ ಧೋನಿ ನೋಡಲೆಂದು ಐಪಿಎಲ್ ಟಿಕೆಟ್ ಖರೀದಿಸಿದ ತಂದೆ; ಇದು ಅಂಧಾಭಿಮಾನ ಎಂದ ನೆಟ್ಟಿಗರು

ಮೂವರು ಪುತ್ರಿಯರ ಶಾಲಾ ಫೀಸ್ ಕಟ್ಟದೆ ಧೋನಿ ನೋಡಲೆಂದು ಐಪಿಎಲ್ ಟಿಕೆಟ್ ಖರೀದಿಸಿದ ತಂದೆ; ಇದು ಅಂಧಾಭಿಮಾನ ಎಂದ ನೆಟ್ಟಿಗರು

  • MS Dhoni Fan: ಚೆನ್ನೈ ಸೂಪರ್ ಕಿಂಗ್ಸ್​ ಮಾಜಿ ನಾಯಕ ಎಂಎಸ್ ಧೋನಿ ಅಭಿಮಾನಿಯೊಬ್ಬರು ತಮ್ಮ ಮೂವರು ಪುತ್ರಿಯರ ಶಾಲಾ ಫೀಸ್ ಕಟ್ಟದೆ ಮಾಹಿ ಅವರನ್ನು ನೋಡಲೆಂದು ಐಪಿಎಲ್ ಟಿಕೆಟ್ ಖರೀದಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಕೋಟ್ಯಂತರ ಅಭಿಮಾನಿಗಳಿಗೆ ಆರಾಧ್ಯ ದೈವ. ಮಾಹಿ ಹೋದಲೆಲ್ಲಾ ಕ್ರೀಡಾಂಗಣಗಳು ಭರ್ತಿಯಾಗಿರುತ್ತದೆ. ಅವರ ಆಟವನ್ನು ಕಣ್ತುಂಬಿಕೊಳ್ಳುವುದೇ ಅಭಿಮಾನಿಗಳ ಆಸೆಯಾಗಿರುತ್ತದೆ.
icon

(1 / 7)

ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಕೋಟ್ಯಂತರ ಅಭಿಮಾನಿಗಳಿಗೆ ಆರಾಧ್ಯ ದೈವ. ಮಾಹಿ ಹೋದಲೆಲ್ಲಾ ಕ್ರೀಡಾಂಗಣಗಳು ಭರ್ತಿಯಾಗಿರುತ್ತದೆ. ಅವರ ಆಟವನ್ನು ಕಣ್ತುಂಬಿಕೊಳ್ಳುವುದೇ ಅಭಿಮಾನಿಗಳ ಆಸೆಯಾಗಿರುತ್ತದೆ.(AFP)

ಸಾಲವಾದರೂ ಮಾಡಿ ಧೋನಿಯನ್ನು ಮತ್ತು ಆತನ ಆಟವನ್ನು ನೋಡಬೇಕೆಂದು ಹಲವಾರು ಮಂದಿ ಟಿಕೆಟ್ ಖರೀದಿಸಿ ಮೈದಾನಕ್ಕೆ ಬರುತ್ತಿದ್ದಾರೆ. ಅಂತಹವರ ಸಾಲಿಗೆ ಇಲ್ಲೊಬ್ಬ ಸೇರಿದ್ದಾನೆ. ಮಗಳ ಫೀಸ್ ಕಟ್ಟದೆ ಧೋನಿಗಾಗಿ 64,000 ರೂ. ಟಿಕೆಟ್ ಕೊಟ್ಟು ಖರೀದಿಸಿದ್ದಾನೆ.
icon

(2 / 7)

ಸಾಲವಾದರೂ ಮಾಡಿ ಧೋನಿಯನ್ನು ಮತ್ತು ಆತನ ಆಟವನ್ನು ನೋಡಬೇಕೆಂದು ಹಲವಾರು ಮಂದಿ ಟಿಕೆಟ್ ಖರೀದಿಸಿ ಮೈದಾನಕ್ಕೆ ಬರುತ್ತಿದ್ದಾರೆ. ಅಂತಹವರ ಸಾಲಿಗೆ ಇಲ್ಲೊಬ್ಬ ಸೇರಿದ್ದಾನೆ. ಮಗಳ ಫೀಸ್ ಕಟ್ಟದೆ ಧೋನಿಗಾಗಿ 64,000 ರೂ. ಟಿಕೆಟ್ ಕೊಟ್ಟು ಖರೀದಿಸಿದ್ದಾನೆ.(ANI)

ಧೋನಿ ಆಟವನ್ನು ನೋಡಲೆಂದು ತನ್ನ ಮಗಳ ಶಾಲಾ ಫೀಸ್ ಪಾವತಿಯನ್ನು ತಡಮಾಡಿದ್ದಾನೆ. ಅದು ಕೂಡ ಒಬ್ಬರದ್ದಲ್ಲ, ಮೂವರು ಹೆಣ್ಣುಮಕ್ಕಳ ಶಾಲಾ ಫೀಸ್ ಕಟ್ಟದೆ ವಿಳಂಬ ಮಾಡಿದ್ದಾನೆ. ಮೂವರು ಪುತ್ರಿಯರೊಂದಿಗೆ ಸಿಎಸ್​ಕೆ ಪಂದ್ಯವನ್ನು ನೋಡಿದ್ದಾನೆ.
icon

(3 / 7)

ಧೋನಿ ಆಟವನ್ನು ನೋಡಲೆಂದು ತನ್ನ ಮಗಳ ಶಾಲಾ ಫೀಸ್ ಪಾವತಿಯನ್ನು ತಡಮಾಡಿದ್ದಾನೆ. ಅದು ಕೂಡ ಒಬ್ಬರದ್ದಲ್ಲ, ಮೂವರು ಹೆಣ್ಣುಮಕ್ಕಳ ಶಾಲಾ ಫೀಸ್ ಕಟ್ಟದೆ ವಿಳಂಬ ಮಾಡಿದ್ದಾನೆ. ಮೂವರು ಪುತ್ರಿಯರೊಂದಿಗೆ ಸಿಎಸ್​ಕೆ ಪಂದ್ಯವನ್ನು ನೋಡಿದ್ದಾನೆ.(IPL-X)

ಈ ಕುರಿತು ವಿಡಿಯೋ ಮತ್ತು ವರದಿಗಳು ವೈರಲ್ ಆಗುತ್ತಿವೆ. ಈ ಅಭಿಮಾನಿ 64,000 ರೂಪಾಯಿಗೆ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಕೆಕೆಆರ್ ಎದುರಿನ ಪಂದ್ಯಕ್ಕೆ ಟಿಕೆಟ್ ಖರೀದಿಸಿದ್ದಾನೆ. ಏಪ್ರಿಲ್ 8ರಂದು ನಡೆದ ಈ ಪಂದ್ಯವನ್ನು ಸಿಎಸ್​ಕೆ 7 ವಿಕೆಟ್​ಗಳಿಂದ ಗೆದ್ದು ಬೀಗಿತು.
icon

(4 / 7)

ಈ ಕುರಿತು ವಿಡಿಯೋ ಮತ್ತು ವರದಿಗಳು ವೈರಲ್ ಆಗುತ್ತಿವೆ. ಈ ಅಭಿಮಾನಿ 64,000 ರೂಪಾಯಿಗೆ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಕೆಕೆಆರ್ ಎದುರಿನ ಪಂದ್ಯಕ್ಕೆ ಟಿಕೆಟ್ ಖರೀದಿಸಿದ್ದಾನೆ. ಏಪ್ರಿಲ್ 8ರಂದು ನಡೆದ ಈ ಪಂದ್ಯವನ್ನು ಸಿಎಸ್​ಕೆ 7 ವಿಕೆಟ್​ಗಳಿಂದ ಗೆದ್ದು ಬೀಗಿತು.(ANI)

ಈ ಪಂದ್ಯದ ಟಿಕೆಟ್​ ಖರೀದಿಗೆ ನನ್ನ ತಂದೆ ಸಾಕಷ್ಟು ಕಷ್ಟಪಟ್ಟರು. ಧೋನಿ ಬ್ಯಾಟಿಂಗ್ ಮಾಡಲು ಬಂದಿದ್ದು ತುಂಬಾ  ಸಂತಸವಾಯಿತು ಅಭಿಮಾನಿಯ ಪುತ್ರಿ ಹೇಳಿದ್ದಾರೆ.
icon

(5 / 7)

ಈ ಪಂದ್ಯದ ಟಿಕೆಟ್​ ಖರೀದಿಗೆ ನನ್ನ ತಂದೆ ಸಾಕಷ್ಟು ಕಷ್ಟಪಟ್ಟರು. ಧೋನಿ ಬ್ಯಾಟಿಂಗ್ ಮಾಡಲು ಬಂದಿದ್ದು ತುಂಬಾ  ಸಂತಸವಾಯಿತು ಅಭಿಮಾನಿಯ ಪುತ್ರಿ ಹೇಳಿದ್ದಾರೆ.(PTI)

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಸಿಎಸ್​ಕೆ ಅಭಿಮಾನಿಗಳೇ ಈ ನಿರ್ಧಾರವನ್ನು ಟೀಕಿಸಿದ್ದಾರೆ. ಅಭಿಮಾನ ಇರಬೇಕು, ಈ ರೀತಿ ಅಂಧಾಭಿಮಾನ ಇರಬಾರದು ಎಂದು ಕಿಡಿಕಾರಿದ್ದಾರೆ.
icon

(6 / 7)

ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ. ಸಿಎಸ್​ಕೆ ಅಭಿಮಾನಿಗಳೇ ಈ ನಿರ್ಧಾರವನ್ನು ಟೀಕಿಸಿದ್ದಾರೆ. ಅಭಿಮಾನ ಇರಬೇಕು, ಈ ರೀತಿ ಅಂಧಾಭಿಮಾನ ಇರಬಾರದು ಎಂದು ಕಿಡಿಕಾರಿದ್ದಾರೆ.

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.
icon

(7 / 7)

ಕ್ಷಣಕ್ಷಣದ ಅಪ್ಡೇಟ್ಸ್​ಗಾಗಿ ಹಿಂದೂಸ್ತಾನ್ ಟೈಮ್ಸ್ ಕನ್ನಡ ಓದಿ.


IPL_Entry_Point

ಇತರ ಗ್ಯಾಲರಿಗಳು