Curiosity killed the cat: ಇದು ಬೆಕ್ಕಿನ ಕ್ಯೂರಿಯಾಸಿಟಿಯೇ ಹೊರತು ಬೇರೇನಲ್ಲ! ಆ ಕ್ಯೂರಿಯಾಸಿಟಿಗೋಸ್ಕರ ಫೋಟೋಸ್ ಚೆಕ್ ಮಾಡಿ!
Curiosity killed the cat: ಇದು ಬೆಕ್ಕಿನ ಕ್ಯೂರಿಯಾಸಿಟಿ. ಇಂಗ್ಲಿಷ್ ಗಾದೆ ಮಾತಿಗೂ ಇದಕ್ಕೂ ಸಂಬಂಧ ಇದೆಯಾ ಕೇಳಿದ್ರೆ ಗೊತ್ತಿಲ್ಲ. ಫೋಟೋಗಳನ್ನು ನೋಡಿದಾಗ ತೋಚಿದ್ದು ಇದು! ಆ ಕ್ಯೂರಿಯಾಸಿಟಿಗೋಸ್ಕರ ಫೋಟೋ ಚೆಕ್ ಮಾಡಿ
(1 / 4)
ಇದು ಬೆಕ್ಕಿನ ಕ್ಯೂರಿಯಾಸಿಟಿ. ಅದೇನೋ ಗಮನಿಸುತ್ತಿರುವಂತಿದೆಯಲ್ಲ? ಎಂಬ ಕ್ಯೂರಿಯಾಸಿಟಿ ಮನಸ್ಸಿನಲ್ಲಿದೆ ಅಲ್ವಾ? ಕತಾರ್‌ನಲ್ಲಿ ಫಿಫಾ ವಿಶ್ವಕಪ್ 2022ರ ಕ್ವಾರ್ಟರ್ ಫೈನಲ್ ಪಂದ್ಯ ಒಂದರಲ್ಲಿ ಡಿ.9ರಂದು ಬ್ರೆಜಿಲ್ ಮತ್ತು ಕ್ರೊವೇಶಿಯಾ ತಂಡಗಳು ಮುಖಾಮುಖಿ ಆಗಲಿವೆ. ಇದಕ್ಕೆ ಸಂಬಂಧಿಸಿ ನಿನ್ನೆ (ಡಿ.7) ದೋಹಾದ ಅಲ್ ಅರಬಿ ಎಸ್‌ಸಿ ಸ್ಟೇಡಿಯಂನಲ್ಲಿ ಸುದ್ದಿಗೋಷ್ಠಿ ನಡೆಯುತ್ತಿತ್ತು. ಆ ಸುದ್ದಿಗೋಷ್ಠಿಯ ಟೇಬಲ್ ಮುಂಭಾಗದಲ್ಲಿರುವ ಬೆಕ್ಕು ಇದು. ಬ್ರೆಜಿಲ್‌ನ ಫಾರ್ವರ್ಡ್ ಆಟಗಾರ ವಿನಿಷಿಯಸ್ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಸಂದರ್ಭ ಇದು. (Photo by NELSON ALMEIDA / AFP)
(2 / 4)
ಬೆಕ್ಕಿನ ಕುತೂಹಲ ಎಷ್ಟರ ಮಟ್ಟಿಗೆ ಇತ್ತು ಎಂದರೆ ಅಲ್ಲಿಂದ ಅದು ಜಿಗಿದು ಸೇರಿದ್ದು ಸುದ್ದಿಗೋಷ್ಠಿ ಟೇಬಲ್‌ಗೆ! ಸುದ್ದಿಗೋಷ್ಠಿ ನಡೆಸಿದ್ದ ಬ್ರೆಜಿಲ್‌ನ ಫಾರ್ವರ್ಡ್ ಆಟಗಾರ ವಿನಿಷಿಯಸ್‌ಗೆ ನಗು ತಡೆಯಲಾಗಲಿಲ್ಲ. ಬೆಕ್ಕು ಅಲ್ಲಿ ಕುಳಿತದ್ದಕ್ಕೂ, ವಿನಿಷಿಯಸ್ ನಗುವಿನಲೆ ಅಲ್ಲಿ ಹರಡಿದ್ದಕ್ಕೂ, ಪಕ್ಕದಲ್ಲಿ ಕುಳಿತಿದ್ದ ಅಧಿಕಾರಿಯ ಮುಖದಲ್ಲೂ ನಸುನಗು ಚೆಲ್ಲಿದ್ದಕ್ಕೂ ಈ ಫೋಟೋ ಚಂದ ಬಂತು ನೋಡಿ! ಇದುವೇ ಟಾಪ್ ಶಾಟ್!(Photo by NELSON ALMEIDA / AFP)
(3 / 4)
ದೋಹಾದ ಗ್ರಾಂಡ್ ಹಮದ್ ಸ್ಟೇಡಿಯಂನಲ್ಲಿ ಅಭ್ಯಾಸ ಪಂದ್ಯ ಆಡಿ ಬಂದಿದ್ದ ಬ್ರೆಜಿಲ್‌ನ ವಿನಿಷಿಯಸ್ ಜ್ಯೂನಿಯರ್ ಮುಖದಲ್ಲಿ ನಗು ಮೂಡಿಸಿದ ಬೆಕ್ಕು ಅಲ್ಲೇ ಪಕ್ಕದಲ್ಲಿ ಮೈ ಮುದುರಿ ಕುಳಿತಿತ್ತು. ಬೆಕ್ಕಿನ ಕುತೂಹಲದಿಂದಾಗಿ ಸುದ್ದಿಗೋಷ್ಠಿ ಒಂದೆರಡು ನಿಮಿಷ ನಿಂತೇ ಹೋಯಿತು.! (AP Photo/Andre Penner)
ಇತರ ಗ್ಯಾಲರಿಗಳು