ಏಕದಿನ ವಿಶ್ವಕಪ್ ಲೀಗ್ ಮುಕ್ತಾಯ, ಅಜೇಯ ತಂಡವಾಗಿ ಸೆಮಿಫೈನಲ್ಗೆ ಭಾರತ; ಇಲ್ಲಿದೆ ಅಂತಿಮ ಅಂಕಪಟ್ಟಿ
- World Cup 2023 Points Table: ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡಿದೆ. ಲೀಗ್ನ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ, ನೆದರ್ಲೆಂಡ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಹಾಗಾದರೆ ಯಾವ ತಂಡ ಯಾವ ಸ್ಥಾನಕ್ಕೆ ಕೊನೆಗೊಂಡಿದೆ.
- World Cup 2023 Points Table: ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತ ಮುಕ್ತಾಯಗೊಂಡಿದೆ. ಲೀಗ್ನ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾ, ನೆದರ್ಲೆಂಡ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಹಾಗಾದರೆ ಯಾವ ತಂಡ ಯಾವ ಸ್ಥಾನಕ್ಕೆ ಕೊನೆಗೊಂಡಿದೆ.
(1 / 10)
ನಿರೀಕ್ಷೆಯಂತೆ ವಿಶ್ವಕಪ್ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲೆಂಡ್ಸ್ ವಿರುದ್ಧ ಭಾರತ ಜಯಿಸಿದೆ. ಇದರೊಂದಿಗೆ ಲೀಗ್ನ 9 ಪಂದ್ಯಗಳನ್ನೂ ಗೆದ್ದು 18 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಅಜೇಯವಾಗಿ ಸೆಮೀಸ್ನಲ್ಲಿ ನ್ಯೂಜಿಲೆಂಡ್ ಅನ್ನು ಎದುರಿಸಲು ಸಜ್ಜಾಗಿದೆ. ವಿಶ್ವಕಪ್‌ನಲ್ಲಿ ಅಜೇಯವಾಗಿ ಉಳಿದಿರುವ ಏಕೈಕ ತಂಡ ಭಾರತ. ನೆಟ್ ರನ್-ರೇಟ್ +2.570.
(2 / 10)
ದಕ್ಷಿಣ ಆಫ್ರಿಕಾ ತನ್ನ 9 ಲೀಗ್ ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದೆ. ಟೆಂಬಾ ಬವುಮಾ ಪಡೆ, 14 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಲೀಗ್ ಅಭಿಯಾನ ಮುಗಿಸಿದೆ. ದಕ್ಷಿಣ ಆಫ್ರಿಕಾ ನೆಟ್ ರನ್-ರೇಟ್ +1.261. ದಕ್ಷಿಣ ಆಫ್ರಿಕಾ ತಂಡವು 2ನೇ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ.
(3 / 10)
ಆಸ್ಟ್ರೇಲಿಯಾ ಸಹ 9 ಲೀಗ್ ಪಂದ್ಯಗಳಿಂದ 7 ಗೆಲುವು ಸೇರಿದಂತೆ 14 ಅಂಕ ಕಲೆಹಾಕಿದೆ. ನೆಟ್ ರನ್-ರೇಟ್ ವಿಷಯದಲ್ಲಿ ದಕ್ಷಿಣ ಆಫ್ರಿಕಾದ ನಂತರ 3ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾದ ನೆಟ್ ರನ್-ರೇಟ್ +0.841. ನವೆಂಬರ್ 16ರಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಲಿವೆ.
(4 / 10)
ನ್ಯೂಜಿಲೆಂಡ್ 9 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 10 ಅಂಕ ಪಡೆದು 4ನೇ ಸ್ಥಾನದಲ್ಲಿ ಲೀಗ್ ಅಭಿಯಾನ ಮುಗಿಸಿದೆ. ಸೆಮಿಫೈನಲ್‌ನಲ್ಲಿ ಭಾರತ ತಂಡದ ಎದುರು ನವೆಂಬರ್ 15ರಂದು ಸೆಣಸಾಟ ನಡೆಸಲಿದೆ.ಕಿವೀಸ್ ನೆಟ್ ರನ್-ರೇಟ್ +0.743
(5 / 10)
ಪಾಕಿಸ್ತಾನ 9 ಪಂದ್ಯಗಳಲ್ಲಿ 4 ಗೆಲುವು, 5 ಸೋಲು ಕಂಡಿದ್ದು, 8 ಅಂಕ ಪಡೆದಿದೆ. ನೆಟ್ ರನ್-ರೇಟ್ -0.199. ಪಾಕಿಸ್ತಾನ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ವಿಶ್ವಕಪ್ ಅಭಿಯಾನ ಮುಗಿಸಿದೆ.
(6 / 10)
ಅಫ್ಘಾನಿಸ್ತಾನ 9 ಪಂದ್ಯಗಳಲ್ಲಿ 4 ಗೆಲುವಿನೊಂದಿಗೆ 8 ಅಂಕ ಕಲೆಹಾಕಿದೆ. 6ನೇ ಸ್ಥಾನ ಪಡೆಯುವ ಮೂಲಕ ತಮ್ಮ ವಿಶ್ವಕಪ್ ಅಭಿಯಾನ ಮುಗಿಸಿದೆ. ಆಫ್ಘನ್ನರ ನೆಟ್ ರನ್-ರೇಟ್ -0.336.
(7 / 10)
ಹಾಲಿ ಚಾಂಪಿಯನ್ ಇಂಗ್ಲೆಂಡ್ ಈ ಬಾರಿಯ ವಿಶ್ವಕಪ್ ಅಭಿಯಾನವನ್ನು 9 ಪಂದ್ಯಗಳಲ್ಲಿ 3 ಗೆಲುವು ಸೇರಿದಂತೆ 6 ಅಂಕಗಳೊಂದಿಗೆ ಮುಗಿಸಿದೆ. ನೆಟ್ ರನ್-ರೇಟ್ -0.572. ಇಂಗ್ಲೆಂಡ್ ಲೀಗ್ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
(8 / 10)
ಬಾಂಗ್ಲಾದೇಶ 9 ಪಂದ್ಯಗಳಲ್ಲಿ 2 ಗೆಲುವು ಸೇರಿದಂತೆ 4 ಅಂಕಗಳೊಂದಿಗೆ ವಿಶ್ವಕಪ್ ಅಭಿಯಾನವನ್ನು ಪೂರ್ಣಗೊಳಿಸಿತು. ನೆಟ್ ರನ್-ರೇಟ್ -1.087. ಶಕೀಬ್ ಪಡೆ ಲೀಗ್ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.
(9 / 10)
ಶ್ರೀಲಂಕಾ ತನ್ನ ವಿಶ್ವಕಪ್ ಅಭಿಯಾನವನ್ನು ಲೀಗ್ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಮುಗಿಸಿತು. 9 ಲೀಗ್ ಪಂದ್ಯಗಳಿಂದ 2 ಗೆಲುವು ಸಾಧಿಸಿದೆ. ದ್ವೀಪ ರಾಷ್ಟ್ರವು ಒಟ್ಟು 4 ಅಂಕ ಸಂಗ್ರಹಿಸಿದೆ. ನೆಟ್ ರನ್-ರೇಟ್ -1.419.
ಇತರ ಗ್ಯಾಲರಿಗಳು