Thugs of Ramaghada Event: 'ಥಗ್ಸ್ ಆಫ್ ರಾಮಘಡ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ಫೋಟೋ ಗ್ಯಾಲರಿ
- ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಿದ್ಧವಾಗಿರುವ 'ಥಗ್ಸ್ ಆಫ್ ರಾಮಘಡ' ಚಿತ್ರದ ಟ್ರೇಲರ್, ಭಾನುವಾರ ಬಿಡುಗಡೆ ಆಗಿದೆ. ಭಾನುವಾರ ಸಂಜೆ ಬೆಂಗಳೂರಿನ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ನಟ ರಾಕ್ಷಸ ಡಾಲಿ ಧನಂಜಯ್ ಆಗಮಿಸಿ ಟ್ರೇಲರ್ ಬಿಡುಗಡೆ ಮಾಡಿದರು.

(1 / 7)
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಧನಂಜಯ್ ''ಜನವರಿ 6ಕ್ಕೆ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾ ವರ್ಷದ ಮೊದಲ ಹಿಟ್ ಚಿತ್ರವಾಗಲಿ. ಉತ್ತರ ಕರ್ನಾಟಕ ಭಾಗದಿಂದ ಇನ್ನಷ್ಟು ನಿರ್ದೇಶಕರು, ಕಲಾವಿದರು ಚಿತ್ರರಂಗಕ್ಕೆ ಬಂದು ಆ ಭಾಗದ ಕಥೆಗಳನ್ನು ಹೇಳಲಿ'' ಎಂದು ಶುಭ ಹಾರೈಸಿದರು.
(2 / 7)
'ಥಗ್ಸ್ ಆಫ್ ರಾಮಘಡ’ ಸಿನಿಮಾ ಟೈಟಲ್, ಪೋಸ್ಟರ್‌ನಿಂದಲೇ ಗಮನ ಸೆಳೆಯುತ್ತಿದೆ. ಭಾನುವಾರ ರಿಲೀಸ್ ಆಗಿರುವ ಟೀಸರ್‌ಗೆ ಕೂಡಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
(3 / 7)
ಚಿತ್ರತಂಡ ಈಗಾಗಲೇ ಪ್ರಮೋಷನ್ ಕೆಲಸಗಳಲ್ಲಿ ನಿರತವಾಗಿದೆ. ವಿಭಿನ್ನ ಕಾನ್ಸೆಪ್ಟ್ ಮೂಲಕ ಜನರನ್ನು ಚಿತ್ರಮಂದಿರದತ್ತ ಸೆಳೆಯುವ ಪ್ರಯತ್ನ ಮಾಡುತ್ತಿದೆ.
(4 / 7)
ರಾಮಘಡ ನ್ಯೂಸ್ ಎಂಬ ಪತ್ರಿಕೆಯಂತೆ ಡಿಸೈನ್ ಮಾಡಿ ಅದರಲ್ಲಿ ಚಿತ್ರತಂಡ ಸಿನಮಾ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡಿದೆ.
ಇತರ ಗ್ಯಾಲರಿಗಳು