Dakshina Kannada News: ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಸಡಗರ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾರಥೋತ್ಸವ ಸಂಭ್ರಮ
- ಕರ್ನಾಟಕದ ಪ್ರಮುಖ ನಾಗ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಹಾಗೂ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಆ ಕ್ಷಣಗಳು ಹೀಗಿದ್ದವು.
- ಕರ್ನಾಟಕದ ಪ್ರಮುಖ ನಾಗ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಹಾಗೂ ಮಹಾರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ನೆರವೇರಿತು. ಆ ಕ್ಷಣಗಳು ಹೀಗಿದ್ದವು.
(1 / 8)
ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್ ಬಂದರೆ ಹದಿನೈದು ದಿನಗಳ ಕಾಲ ಧಾರ್ಮಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತವೆ.
(2 / 8)
ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಸುಬ್ರಹ್ಮಣ್ಯದಲ್ಲಿ ಚಂಪಾ ಷಷ್ಠಿ ಮಹೋತ್ಸವವಂತೂ ಲಕ್ಷಾಂತರ ಭಕ್ತರನ್ನು ಸೆಳೆಯುತ್ತದೆ.
(3 / 8)
ಷಷ್ಠಿ ದಿನಕ್ಕೂ ಮುನ್ನ ಸತತವಾಗಿ ನಾನಾ ಧಾರ್ಮಿಕ ಚಟುವಟಿಕೆಗಳು ನಡೆಯುತ್ತವೆ. ಅದರಲ್ಲಿ ಶೇಷವಾಹನೋತ್ಸವ, ಅಶ್ವವಾಹನೋತ್ಸವ, ಮಯೂರ ವಾಹನೋತ್ಸವ ಪ್ರಮುಖವಾದವು.
(4 / 8)
ಷಷ್ಠಿ ದಿನ ನಡೆಯುವ ಮಹಾರಥೋತ್ಸವಕ್ಕೆ ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ತರಲಾಗುತ್ತದೆ.
(5 / 8)
ದೇವರ ಉತ್ಸವ ಮೂರ್ತಿಯನ್ನು ದೇಗುಲದಿಂದ ರಥೋತ್ಸವಕ್ಕೆ ತರುವ ಹೊತ್ತಿಗೆ ಸಹಸ್ರಾರು ಭಕ್ತರು ದರ್ಶನ ಪಡೆಯುತ್ತಾರೆ.
(6 / 8)
ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ತಂದು ರಥಕ್ಕೆ ತೆಗೆದುಕೊಂಡು ಹೋಗುವಾಗಲೂ ಭಕ್ತರು ದರ್ಶನ ಪಡೆದು ಪುನೀತರಾಗುತ್ತಾರೆ.
(7 / 8)
ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ರಥೋತ್ಸವವನ್ನು ವಿಶೇಷವಾಗಿ ಅಲಂಕರಿಸಲಾಗುತ್ತದೆ. ಸ್ಥಳೀಯರು ಹಗ್ಗವನ್ನು ಸಿದ್ದಪಡಿಸುತ್ತಾರೆ. ಅಲಂಕೃತಗೊಂಡ ರಥ ನೋಡುವುದೇ ಚಂದ.
ಇತರ ಗ್ಯಾಲರಿಗಳು