ಕನ್ನಡ ಸುದ್ದಿ  /  Photo Gallery  /  Dakshin Kannada News Venur Bahubali Maha Mastakabhisheka Begun After 12years Festival Till March 1 2024 Kub

Dakshin Kannada News: ವೇಣೂರು ಮಂದಸ್ಮಿತ ಬಾಹುಬಲಿಗೆ 12 ವರ್ಷ ಬಳಿಕ ಮಹಾಮಸ್ತಕಾಭಿಷೇಕ , ಮಾ1 ವರೆಗೂ ಉಂಟು ಸಡಗರ Photos

  • Maha Masthakabhisheka ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ವೇಣೂರಿನಲ್ಲಿ ಬಾಹುಬಲಿ ಮೂರ್ತಿಗೆ ಈಗ ಮಹಾಮಸ್ತಕಾಭಿಷೇಕ ಸಮಯ. 9 ದಿನ  ಉತ್ಸವದ ಸಡಗರ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರಿನ ಬಾಹುಬಲಿ ಕ್ಷೇತ್ರದಲ್ಲಿ ಮಹಾಮಸ್ತಕಾಭಿಷೇಕಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಮೊದಲ ದಿನವೇ ಡಾ.ವೀರೇಂದ್ರ ಹೆಗ್ಗಡೆ ಸಹಿತ ಹಲವರು ಭಾಗಿಯಾದರು.
icon

(1 / 10)

2 ವರ್ಷದ ಬಳಿಕ ಕಲಶದ ಮೂಲಕ 35 ಅಡಿ ಎತ್ತರದ ಬಾಹುಬಲಿ ಮೂರ್ತಿಗೆ ಐದು ಅಂತಸ್ತಿನ ಅಟ್ಟಳಿಗೆ ನಿರ್ಮಿಸಿ ಸಮಿತಿಯಿಂದ ಅಭಿಷೇಕ ಆರಂಭಗೊಂಡಿದೆ. ಬಾಹುಬಲಿ ಮೂರ್ತಿಗೆ ಮೊದಲ ನಾಲ್ಕು ದಿನ 108 ಕಲಶ, ಬಳಿಕ ಮೂರು ದಿನ 216 ಕಲಶ, ಎಂಟನೇ ದಿನ 504 ಕಲಶ ಬಳಿಕ 9 ದಿನ 1008 ಕಲಶಗಳ ಅಭಿಷೇಕ ನಡೆಯಲಿದೆ. 
icon

(2 / 10)

ಧರ್ಮಗುರುಗಳು, ಸ್ಥಳೀಯ ಸಮಿತಿಯವರ ನೇತೃತ್ವಲ್ಲಿ  ವಿವಿಧ ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಅಭಿಷೇಕ ನಡೆಯಲಿದ್ದು, ಮಾರ್ಚ್ 1ರವರೆಗೆ ಮುಂದುವರಿಯಲಿದೆ. ಜಲ, ಸೀಯಾಳ, ಹಾಲು, ಇಕ್ಷುರಸ, ಕಲ್ಕರಸ, ಅರಿಶಿಣ ಹುಡಿ, ಕಷಾಯ, ಗಂಧ, ಕೇಸರಿ, ಚಂದನ, ಅಷ್ಟಗಂಧ, ಮೊದಲಾದ ದ್ರವ್ಯಗಳಿಂದ ಅಭಿಷೇಕ ನಡೆದು ಬಳಿಕ ಪುಷ್ಪವೃಷ್ಠಿಯಿಂದ ಅಭಿಷೇಕ ನಡೆಯಲಿದೆ..
icon

(3 / 10)

ವೇಣೂರು ಕ್ಷೇತ್ರದಲ್ಲಿ ಬಾಹುಬಲಿ ಮೂರ್ತಿಗೆ ನಡೆದಿರುವ ಮಹಾ ಮಸ್ತಕಾಭಿಷೇಕದ ಕ್ಷಣ  ಕಣ್ತುಂಬಿಕೊಳ್ಳಲು  ಸಾವಿರಾರು ಭಕ್ತರು ಪಾಲ್ಗೊಂಡಿದ್ದಾರೆ.
icon

(4 / 10)

ಈ ಬಾರಿ 50 ಅಡಿ ಎತ್ತರದ ಕಬ್ಬಿಣದ ಅಟ್ಟಳಿಗೆ  ನಿರ್ಮಿಸಿದ್ದು, 5 ಅಂತಸ್ತಿನಲ್ಲಿದೆ. ಪ್ರತಿ ಅಂತಸ್ತಿನಲ್ಲಿ 100 ಮಂದಿ ನಿಲ್ಲಲು ಸ್ಥಳಾವಕಾಶದೊಂದಿಗೆ ಅಭಿಷೇಕ ನಡೆದಿದೆ.
icon

(5 / 10)

ವೇಣೂರು ಎಂಬ ಗ್ರಾಮದ ಫಲ್ಗುಣಿ ನದಿ ತೀರದಲ್ಲಿ ಕ್ರಿ.ಶ. 1604ರಲ್ಲಿ ತುಳುನಾಡಿನ ರಾಜ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ವೇಣೂರಿನ ಅಜಿಲ ವಂಶದ ಅಳದಂಗಡಿ ಅರಮನೆಯ ಅಜಿಲ ಅರಸರಾದ ನಾಲ್ಕನೇ ತಿಮ್ಮಣ್ಣ ಅಜಿಲರಸರು ಪ್ರತಿಷ್ಠಾಪಿಸಿದ್ದರು  ಬಾಹುಬಲಿ ಮೂರ್ತಿಗೆ ಈ ಶತಮಾನದ ಮೂರನೇ ಮಹಾ ಮಸ್ತಕಾಭಿಷೇಕ. ಈ ಹಿಂದೆ 2000, 2012ರಲ್ಲಿ ಮಹಾ ಮಸ್ತಕಾಭಿಷೇಕ ನಡೆದಿತ್ತು. ಈ ಬಾರಿಯೂ ವೈಭವದಿಂದಲೇ ಕಾರ್ಯಕ್ರಮ ನಡೆದಿದೆ.   
icon

(6 / 10)

ವೇಣೂರು ಎಂಬ ಗ್ರಾಮದ ಫಲ್ಗುಣಿ ನದಿ ತೀರದಲ್ಲಿ ಕ್ರಿ.ಶ. 1604ರಲ್ಲಿ ತುಳುನಾಡಿನ ರಾಜ ಪರಂಪರೆಯಲ್ಲಿ ಮಹತ್ವದ ಸ್ಥಾನ ಪಡೆದಿರುವ ವೇಣೂರಿನ ಅಜಿಲ ವಂಶದ ಅಳದಂಗಡಿ ಅರಮನೆಯ ಅಜಿಲ ಅರಸರಾದ ನಾಲ್ಕನೇ ತಿಮ್ಮಣ್ಣ ಅಜಿಲರಸರು ಪ್ರತಿಷ್ಠಾಪಿಸಿದ್ದರು  ಬಾಹುಬಲಿ ಮೂರ್ತಿಗೆ ಈ ಶತಮಾನದ ಮೂರನೇ ಮಹಾ ಮಸ್ತಕಾಭಿಷೇಕ. ಈ ಹಿಂದೆ 2000, 2012ರಲ್ಲಿ ಮಹಾ ಮಸ್ತಕಾಭಿಷೇಕ ನಡೆದಿತ್ತು. ಈ ಬಾರಿಯೂ ವೈಭವದಿಂದಲೇ ಕಾರ್ಯಕ್ರಮ ನಡೆದಿದೆ.   (Rathan Barady)

ಕರ್ನಾಟಕದಲ್ಲಿರುವ ಪ್ರಮುಖ ನಾಲ್ಕು ಬಾಹುಬಲಿ ಮೂರ್ತಿಗಳ ಪೈಕಿ ಮೂರು ಮೂರ್ತಿಗಳು ದಕ ಜಿಲ್ಲೆಯಲ್ಲಿದ್ದರೆ, ಅತಿ ಎತ್ತರದ ಮೂರ್ತಿ ಶ್ರವಣಬೆಳಗೊಳದಲ್ಲಿದೆ. ವೇಣೂರು ಮೂರ್ತಿಗೆ ಅರಿಶಿಣದ ಅಭಿಷೇಕ ಸಮಯ.,  
icon

(7 / 10)

ಕಾರ್ಕಳದಲ್ಲಿ 42 ಅಡಿ, ವೇಣೂರಿನಲ್ಲಿ 35 ಅಡಿ ಹಾಗೂ ಧರ್ಮಸ್ಥಳದಲ್ಲಿ 39 ಅಡಿ ಎತ್ತರದ ಬಾಹುಬಲಿ ಮೂರ್ತಿಗಳಿವೆ. ವೇಣೂರು ಮೂರ್ತಿಗೆ ರಕ್ತ ಶ್ರೀಗಂಧದ ಅಭಿಷೇಕ ನಡೆಯಿತು.
icon

(8 / 10)

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲ ಅವರ ಅಧ್ಯಕ್ಷತೆ, ಶ್ರೇಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆ ಹಾಗೂ ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಅದ್ಧೂರಿಯಾಗಿ ನಡೆಯಲಿದೆ ಮಹಾಮಸ್ತಕಾಭಿಷೇಕ ಕಾರ್ಯಕ್ರಮ ಮಾ.1ರಂದು  ಕೊನೆಗೊಳ್ಳಲಿದೆ., 
icon

(9 / 10)

ಪ್ರತಿದಿನ ಧಾರ್ಮಿಕ ವಿಧಿವಿಧಾನ, ಸಂತರ್ಪಣೆ, ಧಾರ್ಮಿಕ ಸಭೆ, ಪ್ರವಚನ, ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ವಸ್ತು ಪ್ರದರ್ಶನವನ್ನೂ ಮಾಡಲಾಗಿದೆ. ಪ್ರತಿನಿತ್ಯ ವೇಣೂರಿನಲ್ಲಿ ಸಂಜೆ ಹಲವು ದ್ರವ್ಯಗಳಿಂದ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ಇರಲಿದ್ದು, ವಿವಿಧ ಭಾಗದಿಂದ ಆಗಮಿಸುವವರು ಅಭಿಷೇಕ ಮಾಡಲು ಅವಕಾಶ ಮಾಡಿಕೊಡಲಾಗುತ್ತದೆ.
icon

(10 / 10)

IPL_Entry_Point

ಇತರ ಗ್ಯಾಲರಿಗಳು