Dakshina Kannada News: ದಕ್ಷಿಣ ಕನ್ನಡದ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ; ಹೀಗಿದ್ದವು ಸಡಗರದ ಕ್ಷಣಗಳು
- ಪುತ್ತೂರಿಗೆ ಸಮೀಪದಲ್ಲಿರುವ ಕಬಕ ಗ್ರಾಮದ ಮಾಣಿ ಮೈಸೂರು ಹೆದ್ದಾರಿ ಬದಿಯಲ್ಲೇ ಇರುವ ಪ್ರಸಿದ್ಧ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ ಅದ್ದೂರಿಯಾಗಿ ನಡೆಯಿತು.
- ಚಿತ್ರ ಮಾಹಿತಿ: ಹರೀಶ ಮಾಂಬಾಡಿ.ಮಂಗಳೂರು
- ಪುತ್ತೂರಿಗೆ ಸಮೀಪದಲ್ಲಿರುವ ಕಬಕ ಗ್ರಾಮದ ಮಾಣಿ ಮೈಸೂರು ಹೆದ್ದಾರಿ ಬದಿಯಲ್ಲೇ ಇರುವ ಪ್ರಸಿದ್ಧ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ ಅದ್ದೂರಿಯಾಗಿ ನಡೆಯಿತು.
- ಚಿತ್ರ ಮಾಹಿತಿ: ಹರೀಶ ಮಾಂಬಾಡಿ.ಮಂಗಳೂರು
(1 / 10)
ದಕ್ಷಿಣ ಕನ್ನಡದ ಪುತ್ತೂರಿಗೆ ಸಮೀಪದಲ್ಲಿರುವ ಕಬಕ ಗ್ರಾಮದ ಮಾಣಿ ಮೈಸೂರು ಹೆದ್ದಾರಿಯಲ್ಲಿರುವ ಪ್ರಸಿದ್ಧ ಪೋಳ್ಯ ಶ್ರೀ ಲಕ್ಷ್ಮೀವೆಂಕಟರಮಣ ದೇವರ ವೈಭವದ ರಥೋತ್ಸವ ಅದ್ದೂರಿಯಾಗಿತ್ತು
(2 / 10)
ಪೂರ್ವಾಹ್ನ ರಥಪೂಜೆ, ಬಳಿಕ ಶ್ರೀದೇವರ ಅಲಂಕೃತ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಬಲಿಹೊರಟು, ರಥ ಪ್ರದಕ್ಷಿಣೆ, ಬಳಿಕ ರಥಾರೋಹಣ ನಡೆಯಿತು.
(3 / 10)
ಈ ಸಂಭ್ರಮಕ್ಕೆ ಸಾಕ್ಷಿಯಾಗಿ ಬಾನೆತ್ತರದಲ್ಲಿ ಗರುಡಗಳೆರಡು ಪ್ರತ್ಯಕ್ಷಗೊಂಡು ರಥ, ಮತ್ತು ದೇವಳದ ಸುತ್ತ ಪ್ರದಕ್ಷಿಣೆಗೈದವು. ಬಳಿಕ ರಥದಲ್ಲಿ ಶ್ರೀದೇವರಿಗೆ ಪೂಜೆ, ಆರತಿ ನಡೆಯುತ್ತಿರುವ ಹೊತ್ತಿನಲ್ಲಿ ಭಕ್ತರು ಗೋವಿಂದನಾಮ ಸ್ಮರಣೆ ಜೊತೆ ರಥವೆಳೆದು ಪುನೀತರಾದರು.
(4 / 10)
ಬಳಿಕ ರಥದ ಬಳಿ ಬಟ್ಟಲು ಕಾಣಿಕೆ ಉತ್ಸವ ನಡೆಯಿತು. ದೇವರು ರಥದಿಂದಿಳಿದು ದೇವಳ ಸುತ್ತ ಪ್ರದಕ್ಷಿಣೆ ಬಂದ ನಂತರ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸುಮಾರು 5 ಸಾವಿರ ಮಂದಿ ಅನ್ನಪ್ರಸಾದ ಸ್ವೀಕರಿಸಿದರು.
(5 / 10)
ಬಳಿಕ ದೇವರ ಬಲಿ, ಗೋವಿಂದ ನಾಮಸ್ಮರಣೆ ಜೊತೆ ರಥ ಪ್ರದಕ್ಷಿಣೆ ಮಾಡಿ ರಥಾರೋಹಣ ನಡೆದು ಸುಡುಮದ್ದು ಪ್ರದರ್ಶನ ಬಾನೆತ್ತರದಲ್ಲೂ ನಡೆಯಿತು. ರಥಗದ್ದೆಯಲ್ಲಿ ರಥವೆಳೆದ ನಂತರ ಸಂಪಿಗೆ ಕಟ್ಟೆಪೂಜೆ, ದೇವರ ಬಲಿ, ವಸಂತಕಟ್ಟೆಪೂಜೆ, ಅಷ್ಟಾವಧಾನ ಸೇವೆ, ಬಟ್ಟಲು ಕಾಣಿಕೆ ನಡೆಯಿತು.
(6 / 10)
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಧರಣ್ ಮಾಣಿ ಮತ್ತು ಬಳಗದ ಭಕ್ತಿಸಂಗೀತ, ಉಂಡೆಮನೆ ಕೃಷ್ಣಭಟ್ ಮತ್ತು ತಂಡದ ದಕ್ಷಾಧ್ವರ, ಗಿರಿಜಾಕಲ್ಯಾಣ ಯಕ್ಷಗಾನ ನಡೆದವು.
(7 / 10)
ಪೋಳ್ಯದಲ್ಲಿ ಗರುಡ ರಥೋತ್ಸವ ಸೇವೆ ಪ್ರಸಿದ್ಧ. ತಿರುಪತಿ ತಿರುಮಲದಲ್ಲಿ ನಡೆಯುವ ಶ್ರೀಲಕ್ಷ್ಮೀ ವೆಂಕಟ್ರಮಣ ದೇವರ ಗರುಡ ರಥೋತ್ಸವ ಸೇವೆ ಪೋಳ್ಯ ಮಠದಲ್ಲಿ ಮಾತ್ರ ಕಾಣಸಿಗುವುದು ಎಂಬ ಪ್ರತೀತಿ ಇರುವ ಕಾರಣ, ಈ ಬಾರಿ 110 ಮಂದಿ ಗರುಡ ರಥೋತ್ಸವದಲ್ಲಿ ಸೇವಾ ಹರಕೆ ಹೊತ್ತಿದ್ದರು. ಫೆಬ್ರವರಿ 02 ಮತ್ತು 03 ರಂದು ತಮ್ಮವರೊಂದಿಗೆ ಸೇರಿ ಶ್ರೀದೇವರ ಸಹಿತವಾಗಿ ಗರುಡರಥವನ್ನೆಳೆದು ಎಳೆದು ಧನ್ಯರಾದರು.
(8 / 10)
ಕೊನೆಯ ದಿನವಾದ ಫೆ. 5ರಂದು ಕ್ಷೇತ್ರ ಪಾಲ ದೈವಗಳಾದ ದೂಮಾವತಿ ಮತ್ತು ಗುಳಿಗ ದೈವದ ಹಾಗೂ ಎರಡು ಪರಿವಾರ ದೈವಗಳಿಗೆ ನೆಮೋತ್ಸವ ನಡೆಯಿತು.
(9 / 10)
ನಾಲ್ಕು ದಿನಗಳಿಂದ ನಿತ್ಯ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ಸಂಜೆಯ ಕಾಫಿ, ರಾತ್ರಿಯ ಭೋಜನ ಸೇರಿ 12 ಸಾವೀರಕ್ಕಿಂತ ಮಿಕ್ಕಿ ಭಕ್ತರಿಗೆ ಸಂತರ್ಪಣೆ ನಡೆಯಿತು
ಇತರ ಗ್ಯಾಲರಿಗಳು