ದಸರಾ ರಜೆಗೆ ಮಕ್ಕಳನ್ನು ಕರ್ಕೊಂಡು ಮೈಸೂರಿಗೆ ಹೊರಟ್ರಾ, ಪುಟಾಣಿಗಳು ಎಂಜಾಯ್ ಮಾಡೋ ಈ 10 ಪ್ಲೇಸ್ ಮಿಸ್ ಮಾಡ್ಬೇಡಿ
ದಸರಾ ರಜೆ ಯಾವಾಗ ಅಂತ ಗೊತ್ತಾಗಿದೆ ಅಲ್ವ, ಅಕ್ಟೋಬರ್ ಮೊದಲ ವಾರದಲ್ಲೇ ಇದೆ. ದಸರಾ ರಜೆಗೆ ಮಕ್ಕಳನ್ನು ಕರ್ಕೊಂಡು ಮೈಸೂರಿಗೆ ಹೊರಟ್ರಾ?, ಹಾಗಾದ್ರೆ ಪುಟಾಣಿಗಳು ಎಂಜಾಯ್ ಮಾಡಬಲ್ಲ ಈ 10 ಪ್ಲೇಸ್ ಮಿಸ್ ಮಾಡ್ಲೇ ಬೇಡಿ.
(1 / 11)
ಪ್ರವಾಸ ಹೋಗುವುದಕ್ಕಾಗಿ ಎಷ್ಟೋ ಮಕ್ಕಳು ದಸರಾ ರಜೆ ಎದುರು ನೋಡುತ್ತಿರುತ್ತಾರೆ. ಹೌದು ಫ್ಯಾಮಿಲಿ ಫ್ರೆಂಡ್ಸ್ ಜತೆಗೆ ಪ್ರವಾಸ ಹೋಗುವ ಖುಷಿಯೇ ಬೇರೆ. ಈ ಸಲ ಮಕ್ಕಳನ್ನು ಕರ್ಕೊಂಡು ಮೈಸೂರಿಗೆ ಹೊರಟ್ರಾ? ಹಾಗಾದ್ರೆ ಮುಂಚಿತವಾಗಿಯೇ ಪ್ಲಾನ್ ಮಾಡ್ಕೊಳ್ಳಿ. ಪುಟಾಣಿಗಳು ಎಂಜಾಯ್ ಮಾಡೋ ಈ 10 ಪ್ಲೇಸ್‌ಗಳಿಗೆ ಮಿಸ್ ಮಾಡದೇ ಅವರನ್ನು ಕರ್ಕೊಂಡು ಹೋಗಿ ಖುಷಿ ನೋಡಿ.
(2 / 11)
ಲೋಕರಂಜನ್ ಅಕ್ವಾ ವರ್ಲ್ಡ್ - ಭಾರತದ ಅತಿದೊಡ್ಡ ಒಳಾಂಗಣ ಸುರಂಗ ಅಕ್ವೇರಿಯಂಗಳಲ್ಲಿ ಒಂದು. ಅಕ್ವಾ ವರ್ಲ್ಡ್ ಆಂಡ್ ಅಂಡರ್ ವಾಟರ್ ಝೂ ಭಾರತದ ‘ಉದ್ದದ ನೀರೊಳಗಿನ ಸುರಂಗ’ ಎಂಬ ಕಾರಣಕ್ಕೆ ಗಿನ್ನೆಸ್ ದಾಖಲೆ ನಿರ್ಮಿಸಿದೆ. ಇಲ್ಲಿ 118 ಕ್ಕೂ ಹೆಚ್ಚು ಜಾತಿಯ ಮೀನುಗಳಿವೆ. ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆ ತನಕ ಓಪನ್ ಇರುತ್ತೆ.
(3 / 11)
ಮೈಸೂರಿನ ಇನ್ನೊಂದು ಪ್ರವಾಸಿ ಆಕರ್ಷಣೆಯ ಕೇಂದ್ರ ಕಾರಂಜಿ ಕೆರೆ. ಇದು ಚಿಟ್ಟೆ ಪಾರ್ಕ್ ಮತ್ತು ವಾಕ್-ಥ್ರೂ ಪಂಜರವನ್ನು ಒಳಗೊಂಡಿರುವ ಪ್ರಕೃತಿ ಉದ್ಯಾನವನದ ನಡುವೆ ಇದೆ.
(4 / 11)
ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್ - ಮೈಸೂರು ಹೊರವಲಯದಲ್ಲಿ ಅಂದರೆ ನಗರದಿಂದ 7 ಕಿ.ಮೀ ದೂರದಲ್ಲಿದೆ. ಇದು ಬೆಳಗ್ಗೆ 10.30ಕ್ಕೆ ಓಪನ್ ಆಗುತ್ತೆ.
(5 / 11)
ಮೈಸೂರು ಮರಳುಶಿಲ್ಪ ಸಂಗ್ರಹಾಲಯ ಅಥವಾ ಮರಳು ಮ್ಯೂಸಿಯಂ. ಇದು ಬೆಳಗ್ಗೆ 8.30ಕ್ಕೆ ಓಪನ್ ಆಗುತ್ತದೆ. ವಿವಿಧ ಮರಳು ಶಿಲ್ಪಗಳನ್ನು ಇಲ್ಲಿ ವೀಕ್ಷಿಸಬಹುದಾಗಿದೆ.
(6 / 11)
ದೇವರಾಜ ಮಾರುಕಟ್ಟೆ - ಹೂವು, ಹಣ್ಣು ತರಕಾರಿ ಮಾರುಕಟ್ಟೆ ಇದಾಗಿದ್ದು, ಮಕ್ಕಳನ್ನು ಇಲ್ಲಿ ಒಮ್ಮೆ ಸುತ್ತಾಡಿಸಬಹುದು.
(7 / 11)
ಮೈಸೂರು ಅರಮನೆ. ಇದನ್ನು ಅಂಬಾ ವಿಲಾಸ್ ಅರಮನೆ ಎಂದೂ ಹೇಳುತ್ತಾರೆ. 1897ರಲ್ಲಿ ಈ ಅರಮನೆಯ ನಿರ್ಮಾಣ ಪ್ರಾರಂಭಿಸಿದ್ದು 1912ರಲ್ಲಿ ಪೂರ್ಣಗೊಂಡಿತು. ಮೈಸೂರಿನ ಪ್ರವಾಸಿ ಆಕರ್ಷಣೆಯ ಮುಖ್ಯ ಸ್ಥಳಗಳಲ್ಲಿ ಈ ಮೈಸೂರು ಅರಮನೆಯೂ ಒಂದು.
(8 / 11)
ಮೈಸೂರು ರೈಲು ಮ್ಯೂಸಿಯಂ- ಇದು ರೈಲ್ವೆಗೆ ಸಂಬಂಧಿಸಿದ ಇತಿಹಾಸ ಸಾರುವ ವಸ್ತು ಸಂಗ್ರಹಾಲಯ. ಮಕ್ಕಳು ನೋಡಿ ಖುಷಿ ಪಟ್ಟಾರು.
(9 / 11)
'ಮೈಸೂರು ಮೃಗಾಲಯ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಶ್ರೀ ಚಾಮರಾಜೇಂದ್ರ ಝೂಲಾಜಿಕಲ್ ಗಾರ್ಡನ್ಸ್, 1892 ರಲ್ಲಿ ಮೈಸೂರಿನ ಹಿಂದಿನ ಆಡಳಿತಗಾರ ಶ್ರೀ ಚಾಮರಾಜೇಂದ್ರ ಒಡೆಯರ್ ಬಹದ್ದೂರ್ ಅವರಿಂದ ಸ್ಥಾಪಿಸಲ್ಪಟ್ಟ ದೇಶದ ಅತ್ಯಂತ ಹಳೆಯ ಮೃಗಾಲಯಗಳಲ್ಲಿ ಒಂದಾಗಿದೆ. ಇದು ಕೂಡ ಮಕ್ಕಳಿಗೆ ಖುಷಿ ನೀಡಬಲ್ಲ, ವನ್ಯಜೀವಿಗಳ ಬಗ್ಗೆ ತಿಳಿವಳಿಕೆ ನೀಡಬಲ್ಲ ಸ್ಥಳ.
(10 / 11)
ಚಾಮುಂಡಿ ಬೆಟ್ಟ - ಚಾಮುಂಡಿ ಬೆಟ್ಟದ ಮೇಲೆ ವ್ಯೂ ಪಾಯಿಂಟ್ ಇದೆ. ಅಲ್ಲಿಂದ ಬೈನಾಕ್ಯುಲರ್ ಬಳಸಿ ವಿಹಂಗಮ ನೋಟ ನೋಡುವುದಕ್ಕೆ ಅವಕಾಶವಿದೆ.
ಇತರ ಗ್ಯಾಲರಿಗಳು