Sienna Weir Died: ಜೀವಕ್ಕೆ ಉರುಳಾಯ್ತು ಕುದುರೆ ಸವಾರಿ; ಪ್ರಾಣ ಕಳೆದುಕೊಂಡ 23 ವರ್ಷದ ಮಿಸ್‌ ಯೂನಿವರ್ಸ್‌ ಫಿನಾಲೆ ರೂಪದರ್ಶಿ ಸಿಯೆನ್ನಾ-death news miss universe finalist australian model sienna weir dies aged 23 from tragic horse riding accident mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sienna Weir Died: ಜೀವಕ್ಕೆ ಉರುಳಾಯ್ತು ಕುದುರೆ ಸವಾರಿ; ಪ್ರಾಣ ಕಳೆದುಕೊಂಡ 23 ವರ್ಷದ ಮಿಸ್‌ ಯೂನಿವರ್ಸ್‌ ಫಿನಾಲೆ ರೂಪದರ್ಶಿ ಸಿಯೆನ್ನಾ

Sienna Weir Died: ಜೀವಕ್ಕೆ ಉರುಳಾಯ್ತು ಕುದುರೆ ಸವಾರಿ; ಪ್ರಾಣ ಕಳೆದುಕೊಂಡ 23 ವರ್ಷದ ಮಿಸ್‌ ಯೂನಿವರ್ಸ್‌ ಫಿನಾಲೆ ರೂಪದರ್ಶಿ ಸಿಯೆನ್ನಾ

  • Sienna Weir Died: 2022ರ ಮಿಸ್ ಯೂನಿವರ್ಸ್ ಫೈನಲಿಸ್ಟ್, ಆಸ್ಟ್ರೇಲಿಯಾದ 23 ವರ್ಷದ ಮಾಡೆಲ್ ಸಿಯೆನ್ನಾ ವೀರ್ ದುರಂತ ಸಾವಿಗೀಡಾಗಿದ್ದಾರೆ. ಕುದುರೆ ಸವಾರಿ ವೇಳೆ ಕೆಳಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿತ್ತು. ಚಿಕಿತ್ಸೆ ನೀಡಿದರೂ ಅವರು ಬದುಕುಳಿಯಲಿಲ್ಲ.

ರೂಪದರ್ಶಿ ಸಿಯೆನ್ನಾ ವೀರ್‌ಗೆ ಮೊದಲಿಂದಲೂ ಕುದುರೆ ಸವಾರಿ ಇಷ್ಟ. ಅದೇ ರೀತಿ ಏಪ್ರಿಲ್‌ 2ರಂದು ಆಸ್ಟ್ರೇಲಿಯಾದ ವಿಂಡ್ಸರ್ ಪೋಲೋ ಮೈದಾನದಲ್ಲಿ ಕುದುರೆ ಸವಾರಿ ಮಾಡುತ್ತಿದ್ದರು. ಇದ್ದಕ್ಕಿದ್ದಂತೆ ಕುದುರೆ ನೆಲಕ್ಕುರುಳಿದೆ. ಕುದುರೆ ಮೇಲಿದ್ದ ಸಿಯೆನ್ನಾ ಸಹ ಕೆಳಗೆ ಬಿದ್ದಿದ್ದರು. (Instagram/ Sienna Weir)
icon

(1 / 5)

ಅದಾಗಿ ಸುದೀರ್ಘ ನಾಲ್ಕು ವಾರಗಳ ಕಾಲ ಸಿಯೆನ್ನಾ ವೀರ್ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ, ಬದುಕುಳಿಯಲಿಲ್ಲ. ತಲೆಗೆ ಪೆಟ್ಟಾಗಿದ್ದರಿಂದ ಪ್ರಜ್ಞಾವಸ್ಥೆಯಲ್ಲಿದ್ದ ಸಿಯೆನ್ನಾಗೆ ವೆಂಟಿಲೇಟರ್‌ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಸಿಯೆನ್ನಾ ವೀರ್ ನಿಧನದ ಸುದ್ದಿಯನ್ನು ಅವರ ಕುಟುಂಬ ಮತ್ತು ಮಾಡೆಲಿಂಗ್ ಏಜೆನ್ಸಿ ಖಚಿತಪಡಿಸಿದೆ. (Instagram/ Sienna Weir)
icon

(2 / 5)

2022ರ ಆಸ್ಟ್ರೇಲಿಯನ್ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ 27 ಅಂತಿಮ ಸ್ಪರ್ಧಿಗಳಲ್ಲಿ ಸಿಯೆನ್ನಾ ವೀರ್ ಸಹ ಒಬ್ಬರು. ಸಿಡ್ನಿ ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಸಾಹಿತ್ಯ ಮತ್ತು ಮನೋವಿಜ್ಞಾನದಲ್ಲಿ ಡಬಲ್ ಡಿಗ್ರಿ ಪಡೆದಿದ್ದಾರೆ. (Instagram/ Sienna Weir)
icon

(3 / 5)

ಫ್ಯಾಷನ್‌ ಲೋಕದಲ್ಲಿ ಆಸಕ್ತಿ ಇದ್ದ ಹಿನ್ನೆಲೆಯಲ್ಲಿ ಅದನ್ನೇ ಸಕ್ರಿಯ ವೃತ್ತಿಯಾಗಿಸಿಕೊಳ್ಳಬೇಕೆಂದು ಸಿಯೆನ್ನಾ ನಿರ್ಧರಿಸಿದ್ದರು. ಇಂಗ್ಲೆಂಡ್‌ಗೆ ತೆರಳುವುದಕ್ಕೂ ಸಿದ್ಧತೆ ನಡೆಸಿದ್ದರು. (Instagram/ Sienna Weir)
icon

(4 / 5)

ಮಾಡೆಲ್ ಸಿಯೆನ್ನಾ ವೀರ್‌ ಅವರ ಸಾವಿಗೆ ಅವರ ಆಪ್ತರು, ಮಾಡೆಲಿಂಗ್‌ ಕ್ಷೇತ್ರದ ಸ್ನೇಹಿತರು ಸೇರಿ ಅನೇಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. (Instagram/ Sienna Weir)
icon

(5 / 5)

ಇತರ ಗ್ಯಾಲರಿಗಳು