ದೀಪಾವಳಿ ಧನಲಕ್ಷ್ಮೀ ಪೂಜೆ ವೇಳೆ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ; ಇಲ್ಲದಿದ್ರೆ ಲಕ್ಷ್ಮಿಯನ್ನು ನೀವು ಮನೆಯಿಂದ ಹೊರ ಕಳಿಸಿದಂತೆ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀಪಾವಳಿ ಧನಲಕ್ಷ್ಮೀ ಪೂಜೆ ವೇಳೆ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ; ಇಲ್ಲದಿದ್ರೆ ಲಕ್ಷ್ಮಿಯನ್ನು ನೀವು ಮನೆಯಿಂದ ಹೊರ ಕಳಿಸಿದಂತೆ!

ದೀಪಾವಳಿ ಧನಲಕ್ಷ್ಮೀ ಪೂಜೆ ವೇಳೆ ಎಂದಿಗೂ ಈ ತಪ್ಪುಗಳನ್ನು ಮಾಡದಿರಿ; ಇಲ್ಲದಿದ್ರೆ ಲಕ್ಷ್ಮಿಯನ್ನು ನೀವು ಮನೆಯಿಂದ ಹೊರ ಕಳಿಸಿದಂತೆ!

ದೀಪಾವಳಿ ಹಬ್ಬಕ್ಕೆ ಇನ್ನು ವಾರವಷ್ಟೇ ಬಾಕಿ ಇದೆ.  ಕೆಲವರಿಗೆ ಇದು ಇತರ ಹಬ್ಬಗಳಿಗಿಂತ ಮುಖ್ಯ. ಆದ್ದರಿಂದ ಬಹಳ ದಿನಗಳಿಂದಲೇ ಹಬ್ಬವನ್ನು ಬರಮಾಡಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ದೀಪಾವಳಿ 5 ದಿನಗಳ ಬೆಳಕಿನ ಹಬ್ಬ. ಎಲ್ಲಿ ನೋಡಿದರೂ ಹಣತೆಗಳ ಸಾಲು, ಬಣ್ಣ ಬಣ್ಣದ ರಂಗೋಲಿ ಕಣ್ಮನ ಸೆಳೆಯುತ್ತದೆ. ಎಲ್ಲರ ಮೊಗದಲ್ಲೂ ನಗು ತುಂಬಿರುತ್ತದೆ.

ಹಬ್ಬ ಆಚರಿಸುವರರು ತಮ್ಮ ಸ್ನೇಹಿತರನ್ನು , ಬಂದು ಬಾಂದವರು, ಆಪ್ತರನ್ನು ಮನೆಗೆ ಆಹ್ವಾನಿಸಿ ಅವರಿಗೆ ಭೋಜನ ಏರ್ಪಡಿಸಿ ತಾವೂ ಆ ವಿಶೇಷ ದಿನವನ್ನು ಎಂಜಾಯ್‌ ಮಾಡುತ್ತಾರೆ. ಹಾಗೇ ದೀಪಾವಳಿ ಹಬ್ಬದ ಸಮಯದಲ್ಲಿ ಅನೇಕರು ಲಕ್ಷ್ಮಿ ಪೂಜೆ ಮಾಡುತ್ತಾರೆ. ಧನಲಕ್ಷ್ಮೀ ನಮಗೆ ಒಲಿಯಲಿ. ನಮ್ಮ ಆರ್ಥಿಕ ಸಮಸ್ಯೆಗಳನ್ನು ಹೋಗಲಾಡಿಸಲಿ ಎಂದು ಪ್ರಾರ್ಥಿಸುತ್ತಾರೆ. ಆದರೆ ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಕೆಲವರು ಸಣ್ಣ ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ನೀವು ಲಕ್ಷ್ಮೀ ಪೂಜೆ ಮಾಡುವ ಸಮಯದಲ್ಲಿ ಈ ಕೆಲವೊಂದು ಅಂಶಗಳನ್ನು ಗಮನದಲ್ಲಿಡಿ. 
icon

(1 / 8)

ಹಬ್ಬ ಆಚರಿಸುವರರು ತಮ್ಮ ಸ್ನೇಹಿತರನ್ನು , ಬಂದು ಬಾಂದವರು, ಆಪ್ತರನ್ನು ಮನೆಗೆ ಆಹ್ವಾನಿಸಿ ಅವರಿಗೆ ಭೋಜನ ಏರ್ಪಡಿಸಿ ತಾವೂ ಆ ವಿಶೇಷ ದಿನವನ್ನು ಎಂಜಾಯ್‌ ಮಾಡುತ್ತಾರೆ. ಹಾಗೇ ದೀಪಾವಳಿ ಹಬ್ಬದ ಸಮಯದಲ್ಲಿ ಅನೇಕರು ಲಕ್ಷ್ಮಿ ಪೂಜೆ ಮಾಡುತ್ತಾರೆ. ಧನಲಕ್ಷ್ಮೀ ನಮಗೆ ಒಲಿಯಲಿ. ನಮ್ಮ ಆರ್ಥಿಕ ಸಮಸ್ಯೆಗಳನ್ನು ಹೋಗಲಾಡಿಸಲಿ ಎಂದು ಪ್ರಾರ್ಥಿಸುತ್ತಾರೆ. ಆದರೆ ಮನೆಯಲ್ಲಿ ಪೂಜೆ ಮಾಡುವ ಸಮಯದಲ್ಲಿ ಕೆಲವರು ಸಣ್ಣ ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ನೀವು ಲಕ್ಷ್ಮೀ ಪೂಜೆ ಮಾಡುವ ಸಮಯದಲ್ಲಿ ಈ ಕೆಲವೊಂದು ಅಂಶಗಳನ್ನು ಗಮನದಲ್ಲಿಡಿ. (PC: Unsplash)

ಗಣೇಶ, ಲಕ್ಷ್ಮಿ ಮೂರ್ತಿಯನ್ನು ಸೂಕ್ತ ದಿಕ್ಕಿನಲ್ಲಿ ಪ್ರತಿಷ್ಠಾಪಿಸಿ: ಪ್ರತಿಯೊಂದಕ್ಕೂ ನಿರ್ದಿಷ್ಟ ವಾಸ್ತು ಇದೆ. ಮನೆಯಲ್ಲಿ ಯಾವ ಯಾವ ವಸ್ತುಗಳನ್ನು ಯಾವ ಯಾವ ಸ್ಥಳದಲ್ಲಿ ಇಡಬೇಕೋ , ಹಾಗೆ ಇಟ್ಟರೆ ಮನೆಯಲ್ಲಿ ಸುಖ ಸಂತೋಷ ತುಂಬಿರುತ್ತದೆ. ಇಲ್ಲವಾದರೆ ಅಲ್ಲಿ ಸಮಸ್ಯೆ ಪರಿಹಾರಕ್ಕಿಂತ ತೊಂದರೆಯೇ ಹೆಚ್ಚು. ಹಾಗೇ ದೀಪಾವಳಿ ಹಬ್ಬದಂದು ನೀವು ಲಕ್ಷ್ಮೀ ಪೂಜೆ ಮಾಡುವಾಗ ಗಣೇಶ ಹಾಗೂ ಲಕ್ಷ್ಮೀ ಮೂರ್ತಿಯನ್ನು ಎಲ್ಲೆಂದರಲ್ಲಿ ಇಡಬೇಡಿ. ಹೀಗೆ ಮಾಡಿದರೆ ಮನೆಗೆ ತೊಂದರೆ. ಜ್ಯೋತಿಷಿಗಳು ಹೇಳುವ ಪ್ರಕಾರ ಲಕ್ಷ್ಮಿ, ಗಣೇಶ ವಿಗ್ರಹ ಮನೆಯ ಈಶಾನ್ಯ ಮೂಲೆಯಲ್ಲಿ ಪ್ರತಿಷ್ಠಾಪಿಸಬೇಕು. ಹೀಗೆ ಮಾಡಿದರೆ ನಿಮಗೆ ಲಕ್ಷ್ಮಿ ಕಟಾಕ್ಷ ಸಿದ್ಧಿಸಲಿದೆ. 
icon

(2 / 8)

ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಮರದ ಸ್ಟೂಲ್‌ ಬಳಸಿ: ನೋಡಲು ಆಕರ್ಷಕವಾಗಿ ಕಾಣಬೇಕೆಂಬ ಉದ್ದೇಶದಿಂದ ಕೆಲವರು ದೇವರ ಮೂರ್ತಿಗಳನ್ನು ಕಬ್ಬಿಣ, ಇಟ್ಟಿಗೆ, ಫ್ಯಾನ್ಸಿ ಬಾಕ್ಸ್‌ ಸೇರಿದಂತೆ ಬೇಕಾದ ಕಡೆ ಪ್ರತಿಷ್ಠಾಪಿಸುತ್ತಾರೆ. ಆದರೆ ಅದೆಲ್ಲವನ್ನೂ ಬಿಟ್ಟು ಮೂರ್ತಿಯನ್ನು ಇಡಲು ಮರದ ಸ್ಟೂಲ್‌ ಅಥವಾ ಟೇಬಲ್‌ ಬಳಸಿ, ಅದರ ಮೇಲೆ ಹಸಿರು ಅಥವಾ ಕೆಂಪು ಬಣ್ಣದ ಶುದ್ಧವಾದ ಬಟ್ಟೆ ಹಾಸಿ. ಪೂಜೆ ಆರಂಭಿಸುವ ಮುನ್ನ ಗಂಗಾಜಲ ಅಥವಾ ಗೋತೀರ್ಥವನ್ನು ಮನೆಯ ಎಲ್ಲಾ ಕಡೆ ಪ್ರೋಕ್ಷಣೆ ಮಾಡಿ.  
icon

(3 / 8)

ದೇವರ ಪೀಠವನ್ನು ಸೂಕ್ತ ರೀತಿ ಅಲಂಕರಿಸಿ: ದೇವರ ಪೀಠ ಸುಂದರವಾಗಿ ಕಾಣಿಸಬೇಕು ಎಂಬ ಉದ್ದೇಶದಿಂದ ಕೆಲವು ಪ್ಲಾಸ್ಟಿಕ್‌ ಹೂಗಳಿಂದ ಅಲಂಕರಿಸುತ್ತಾರೆ. ಆದರೆ ಹೀಗೆ ಮಾಡುವ ಬದಲಿಗೆ ನೀವು ಸಿದ್ಧಪಡಿಸಿದ ಪೀಠದ ಮೇಲೆ ಗುಲಾಬಿ ದಳ ಅಥವಾ ನಿಜವಾದ ಬಿಡಿ ಹೂಗಳನ್ನು ಹರಡಿ ಅದರ ಮೇಲೆ ಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ. ಕೃತಕ ಹೂಗಳನ್ನು ಅವಾಯ್ಡ್‌ ಮಾಡಿ.  
icon

(4 / 8)

ಪೂಜೆ ಸಾಮಗ್ರಿಗಳು ದೇವರ ಪೀಠದ ಮುಂದೆ ಇರಲಿ: ಪೂಜೆ ಮಾಡುವಾಗ ದೇವರ ಮೂರ್ತಿ ಮುಂದೆ ಕಳಸ ಸೇರಿದಂತೆ ಇನ್ನಿತರ ಪೂಜಾ ಸಾಮಗ್ರಿಗಳು ಇರಬೇಕು. ಕಳಸಕ್ಕೆ ನೀರು ತುಂಬಿ ಅದಕ್ಕೆ ಅರಿಶಿನ, ಬೆಳ್ಳಿ ನಾಣ್ಯ, ಅಕ್ಕಿ, ಹೂಗಳು, ಮಾವಿನ ಎಲೆ ಇಟ್ಟು ಕಳಸವನ್ನು ಬೆಳ್ಳಿ ತಟ್ಟೆ/ ಬೌಲ್‌ನಲ್ಲಿಡಿ.( ಬೆಳ್ಳಿ ಬಳಸಲು ಶಕ್ತಿ ಇಲ್ಲದವರು, ನಿಮ್ಮ ಶಕ್ತ್ಯಾನುಸಾರ ಪೂಜೆ ಮಾಡಿ)  ನಂತರ ಅರಿಶಿನ-ಕುಂಕುಮ ಹಚ್ಚಿದ ತೆಂಗಿನಕಾಯಿ ಇಟ್ಟು ಕೆಂಪು ಬಣ್ಣದ ಬಟ್ಟೆಯಿಂದ ಸುತ್ತಿ. ಹೀಗೆ ಮಾಡುವುದು ಬಹಳ ಶುಭ ಸಂಕೇತ. 
icon

(5 / 8)

ಪೂಜೆ ಮುಗಿಯುತ್ತಿದ್ದಂತೆ ಸುತ್ತ ಮುತ್ತ ಕ್ಲೀನ್‌ ಮಾಡಬೇಡ: ಕೆಲವರು, ಪೂಜೆ ಮುಗಿಯುತ್ತಿದ್ದಂತೆ ದೇವರ ಕೋಣೆ, ಅಥವಾ ದೇವರ ಪೂರ್ತಿ ಪ್ರತಿಷ್ಠಾಪಿಸಿರುವ ಸುತ್ತ ಮುತ್ತ ಕ್ಲೀನ್‌ ಮಾಡಲು ಹೊರಡುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ನಂಬಿಕೆಯ ಪ್ರಕಾರ ದೇವಿಯು ಪೂಜೆ ಸಮಯದಲ್ಲಿ ನಮ್ಮ ಮನೆಗೆ ಬಂದು ಆಶೀರ್ವದಿಸಿ ಸ್ವಲ್ಪ ಸಮಯ ಇದ್ದು ಹೊರಡುತ್ತಾಳೆ. ಆದರೆ ನೀವು ಅದೇ ಸಮಯಕ್ಕೆ ಸುತ್ತ ಮುತ್ತಲಿನ ಸ್ಥಳವನ್ನು ಶುಚಿಗೊಳಿಸಿದರೆ ಲಕ್ಷ್ಮಿಯನ್ನೇ ಮನೆ ಬಿಟ್ಟು ಕಳಿಸಿದಂತೆ. ಆದ್ದರಿಂದ ಎಂದಿಗೂ ಈ ತಪ್ಪು ಮಾಡಬೇಡಿ. 
icon

(6 / 8)

ನವೆಂಬರ್‌ 12, ಸಂಜೆ 5:40 ರಿಂದ 7:36ವರೆಗೆ ಲಕ್ಷ್ಮಿ ಪೂಜೆ ಮಾಡಲು ಶುಭ ಮುಹೂರ್ತವಿದೆ.  ಪೂಜೆ ನಂತರ ಬಡವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ದಾನ ಮಾಡಿದರೆ ಖಂಡಿತ ನಿಮಗೆ ಲಕ್ಷ್ಮೀ ಒಲಿಯುತ್ತಾಳೆ. 
icon

(7 / 8)

 ಪೂಜೆ ನಂತರ ಬಡವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ದಾನ ಮಾಡಿದರೆ ಖಂಡಿತ ನಿಮಗೆ ಲಕ್ಷ್ಮೀ ಒಲಿಯುತ್ತಾಳೆ. 
icon

(8 / 8)

ಇತರ ಗ್ಯಾಲರಿಗಳು