Deepavali 2023: ಕಜ್ಜಾಯ, ಗವ್ವಲು, ಚೋರಾಫಲಿ; ದೀಪಾವಳಿಗೆ ವಿವಿಧ ರಾಜ್ಯಗಳಲ್ಲಿ ತಯಾರಿಸುವ ಸಾಂಪ್ರದಾಯಿಕ ತಿನಿಸುಗಳಿವು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Deepavali 2023: ಕಜ್ಜಾಯ, ಗವ್ವಲು, ಚೋರಾಫಲಿ; ದೀಪಾವಳಿಗೆ ವಿವಿಧ ರಾಜ್ಯಗಳಲ್ಲಿ ತಯಾರಿಸುವ ಸಾಂಪ್ರದಾಯಿಕ ತಿನಿಸುಗಳಿವು

Deepavali 2023: ಕಜ್ಜಾಯ, ಗವ್ವಲು, ಚೋರಾಫಲಿ; ದೀಪಾವಳಿಗೆ ವಿವಿಧ ರಾಜ್ಯಗಳಲ್ಲಿ ತಯಾರಿಸುವ ಸಾಂಪ್ರದಾಯಿಕ ತಿನಿಸುಗಳಿವು

ದೀಪಾವಳಿ ಎಂದರೆ ಪಟಾಕಿ ಸಿಡಿಸುವುದು, ಲಕ್ಷ್ಮೀ ಪೂಜೆ ಮಾಡುವುದು ಮಾತ್ರವಲ್ಲ, ಅಲ್ಲಿ ತಿಂಡಿ ತಿನಿಸಿಗೂ ಅದರದ್ದೇ ಪ್ರಾಮೂಖ್ಯತೆ ಇದೆ. ಪ್ರತಿಯೊಂದು ರಾಜ್ಯಗಳಲ್ಲೂ ದೀಪಾವಳಿಗೆ ವಿಭಿನ್ನ ಸಾಂಪ್ರದಾಯಿಕ ತಿನಿಸು ತಯಾರಿಸಲಾಗುತ್ತದೆ. 

ವಿವಿಧ ತಿಂಡಿ ತಿನಿಸುಗಳು ಇಲ್ಲದೆ ಯಾವುದೇ ಹಬ್ಬ ಪೂರ್ಣವಾಗುವುದಿಲ್ಲ. ಮಕ್ಕಳು ಪಟಾಕಿ ಹೊಡೆಯುವುದರ ಜೊತೆಗೆ ಹಬ್ಬದ ತಿಂಡಿಗಳನ್ನು ತಿನ್ನಲು ಕಾತರಿಂದ ಕಾಯುತ್ತಿರುತ್ತಾರೆ. ಅದು ಸಿಹಿ ಆಗಿರಬಹುದು, ಖಾರ ಆಗಿರಬಹುದು. 
icon

(1 / 8)

ವಿವಿಧ ತಿಂಡಿ ತಿನಿಸುಗಳು ಇಲ್ಲದೆ ಯಾವುದೇ ಹಬ್ಬ ಪೂರ್ಣವಾಗುವುದಿಲ್ಲ. ಮಕ್ಕಳು ಪಟಾಕಿ ಹೊಡೆಯುವುದರ ಜೊತೆಗೆ ಹಬ್ಬದ ತಿಂಡಿಗಳನ್ನು ತಿನ್ನಲು ಕಾತರಿಂದ ಕಾಯುತ್ತಿರುತ್ತಾರೆ. ಅದು ಸಿಹಿ ಆಗಿರಬಹುದು, ಖಾರ ಆಗಿರಬಹುದು. (Pinterest)

ಚೋರಾಫಲಿ: ಇದು ಗುಜರಾತ್‌ನ ಸಾಂಪ್ರದಾಯಿಕ ರೆಸಿಪಿ. ಕಡ್ಲೆಹಿಟ್ಟು, ಉದ್ದಿನ ಹಿಟ್ಟು, ಆಮ್‌ಚೂರ್‌ ಪುಡಿ, ಅಚ್ಚ ಖಾರದ ಪುಡಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಜೊತೆ ಸೇರಿಸಿ, ಒಣಗಿಸಿ ತಯಾರಿಸಲಾದ ಇದನ್ನು ಎಣ್ಣೆಯಲ್ಲಿ ಕರಿದು ತಿಂದರೆ ರುಚಿ ಹೆಚ್ಚು.
icon

(2 / 8)

ಚೋರಾಫಲಿ: ಇದು ಗುಜರಾತ್‌ನ ಸಾಂಪ್ರದಾಯಿಕ ರೆಸಿಪಿ. ಕಡ್ಲೆಹಿಟ್ಟು, ಉದ್ದಿನ ಹಿಟ್ಟು, ಆಮ್‌ಚೂರ್‌ ಪುಡಿ, ಅಚ್ಚ ಖಾರದ ಪುಡಿ ಹಾಗೂ ಇನ್ನಿತರ ಸಾಮಗ್ರಿಗಳನ್ನು ಜೊತೆ ಸೇರಿಸಿ, ಒಣಗಿಸಿ ತಯಾರಿಸಲಾದ ಇದನ್ನು ಎಣ್ಣೆಯಲ್ಲಿ ಕರಿದು ತಿಂದರೆ ರುಚಿ ಹೆಚ್ಚು.(Pinterest)

 ಅನಾರ್ಸ: ಇದು ಮಹಾರಾಷ್ಟ್ರದ ಸಾಂಪ್ರದಾಯಿಕ ತಿನಿಸು. ಸಿಹಿ ಹಾಗೂ ಹುಳಿಯ ಮಿಶ್ರಣ ಹೊಂದಿರುವ ಈ ತಿಂಡಿಯನ್ನು ದೀಪಾವಳಿ ಸಮಯದಲ್ಲಿ ಮಹಾರಾಷ್ಟ್ರದ ಬಹುತೇಕ ಎಲ್ಲಾ ಮನೆಗಳಲ್ಲೂ ತಯಾರಿಸಲಾಗುತ್ತದೆ. 
icon

(3 / 8)

 ಅನಾರ್ಸ: ಇದು ಮಹಾರಾಷ್ಟ್ರದ ಸಾಂಪ್ರದಾಯಿಕ ತಿನಿಸು. ಸಿಹಿ ಹಾಗೂ ಹುಳಿಯ ಮಿಶ್ರಣ ಹೊಂದಿರುವ ಈ ತಿಂಡಿಯನ್ನು ದೀಪಾವಳಿ ಸಮಯದಲ್ಲಿ ಮಹಾರಾಷ್ಟ್ರದ ಬಹುತೇಕ ಎಲ್ಲಾ ಮನೆಗಳಲ್ಲೂ ತಯಾರಿಸಲಾಗುತ್ತದೆ. (Pinterest)

 ಮಾವಾ ಕಛೋರಿ: ಇದು ರಾಜಸ್ಥಾನದ ಸಾಂಪ್ರದಾಯಿಕ ತಿಂಡಿ. ಸಿಹಿ ಹಾಗೂ ಖಾರ ಫ್ಲೇವರ್‌ನ ಮಾವಾ ಕಚೋರಿಯನ್ನು ರಾಜಸ್ಥಾನದ ಜನರು ತಯಾರಿಸುತ್ತಾರೆ. ದೀಪಾವಳಿಯ ಪ್ರಮುಖ ಸಾಂಪ್ರದಾಯಿಕ ರೆಸಿಪಿಗಳಲ್ಲಿ ಇದೂ ಒಂದು. 
icon

(4 / 8)

 ಮಾವಾ ಕಛೋರಿ: ಇದು ರಾಜಸ್ಥಾನದ ಸಾಂಪ್ರದಾಯಿಕ ತಿಂಡಿ. ಸಿಹಿ ಹಾಗೂ ಖಾರ ಫ್ಲೇವರ್‌ನ ಮಾವಾ ಕಚೋರಿಯನ್ನು ರಾಜಸ್ಥಾನದ ಜನರು ತಯಾರಿಸುತ್ತಾರೆ. ದೀಪಾವಳಿಯ ಪ್ರಮುಖ ಸಾಂಪ್ರದಾಯಿಕ ರೆಸಿಪಿಗಳಲ್ಲಿ ಇದೂ ಒಂದು. (Pinterest)

 ಶುಫ್ತಾ: ಕಾಶ್ಮೀರ್‌ನ ಫೇಮಸ್‌ ಸಿಹಿ ತಿನಿಸು. ಡ್ರೈ ಫ್ರೂಟ್ಸ್‌, ಸಕ್ಕರೆ ಪಾಕ ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿ ಶುಫ್ತಾ ತಯಾರಿಸಲಾಗುತ್ತದೆ. 
icon

(5 / 8)

 ಶುಫ್ತಾ: ಕಾಶ್ಮೀರ್‌ನ ಫೇಮಸ್‌ ಸಿಹಿ ತಿನಿಸು. ಡ್ರೈ ಫ್ರೂಟ್ಸ್‌, ಸಕ್ಕರೆ ಪಾಕ ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿ ಶುಫ್ತಾ ತಯಾರಿಸಲಾಗುತ್ತದೆ. (Pinterest)

 ಗವ್ವಲು: ಇದು ಆಂಧ್ರ ಪ್ರದೇಶದ ಫೇಮಸ್‌ ತಿನಿಸು. ನೋಡಲು ಸುರುಳಿಯಂತಿರುವ ಈ ಸಿಹಿ ತಿಂಡಿಯನ್ನು ಕ್ರಿಸ್‌ಮಸ್‌ ಸಮಯದಲ್ಲಿ ಕೂಡಾ ತಯಾರಿಸುತ್ತಾರೆ. 
icon

(6 / 8)

 ಗವ್ವಲು: ಇದು ಆಂಧ್ರ ಪ್ರದೇಶದ ಫೇಮಸ್‌ ತಿನಿಸು. ನೋಡಲು ಸುರುಳಿಯಂತಿರುವ ಈ ಸಿಹಿ ತಿಂಡಿಯನ್ನು ಕ್ರಿಸ್‌ಮಸ್‌ ಸಮಯದಲ್ಲಿ ಕೂಡಾ ತಯಾರಿಸುತ್ತಾರೆ. (Pinterest)

 ನಾರಿಕೊಲ್‌ ಲಾರು: ಇದು ಅಸ್ಸೋಂನ ಸಾಂಪ್ರದಾಯಿಕ ತಿಂಡಿ. ಹೆಸರೇ ಸೂಚಿಸುವಂತೆ ಇದನ್ನು ತೆಂಗಿನಕಾಯಿಂದ ತಯಾರಿಸಲಾಗುತ್ತದೆ. ಜೊತೆಗೆ ಏಲಕ್ಕಿ ಪುಡಿ , ತುಪ್ಪ, ಸಕ್ಕರೆಯನ್ನೂ ಸೇರಿಸಲಾಗುತ್ತದೆ. 
icon

(7 / 8)

 ನಾರಿಕೊಲ್‌ ಲಾರು: ಇದು ಅಸ್ಸೋಂನ ಸಾಂಪ್ರದಾಯಿಕ ತಿಂಡಿ. ಹೆಸರೇ ಸೂಚಿಸುವಂತೆ ಇದನ್ನು ತೆಂಗಿನಕಾಯಿಂದ ತಯಾರಿಸಲಾಗುತ್ತದೆ. ಜೊತೆಗೆ ಏಲಕ್ಕಿ ಪುಡಿ , ತುಪ್ಪ, ಸಕ್ಕರೆಯನ್ನೂ ಸೇರಿಸಲಾಗುತ್ತದೆ. (Pinterest)

ಕಜ್ಜಾಯ: ಕರ್ನಾಟಕದ ಸಾಂಪ್ರದಾಯಿಕ ಸಿಹಿತಿಂಡಿ ಕಜ್ಜಾಯ. ಅಕ್ಕಿಹಿಟ್ಟನ್ನು ಬೆಲ್ಲದ ಪಾಕದೊಂದಿಗೆ ಮಿಕ್ಸ್‌ ಮಾಡಿ ಆ ಹಿಟ್ಟನ್ನು ಎಣ್ಣೆಯಲ್ಲಿ ಕರಿದ ಕಜ್ಜಾಯವನ್ನು ತಿನ್ನುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ದೀಪಾವಳಿಗೆ ಕರ್ನಾಟಕದ ಬಹುತೇಕ ಮನೆಗಳಲ್ಲಿ ಕಜ್ಜಾಯ ತಯಾರಿಸಲಾಗುತ್ತದೆ. 
icon

(8 / 8)

ಕಜ್ಜಾಯ: ಕರ್ನಾಟಕದ ಸಾಂಪ್ರದಾಯಿಕ ಸಿಹಿತಿಂಡಿ ಕಜ್ಜಾಯ. ಅಕ್ಕಿಹಿಟ್ಟನ್ನು ಬೆಲ್ಲದ ಪಾಕದೊಂದಿಗೆ ಮಿಕ್ಸ್‌ ಮಾಡಿ ಆ ಹಿಟ್ಟನ್ನು ಎಣ್ಣೆಯಲ್ಲಿ ಕರಿದ ಕಜ್ಜಾಯವನ್ನು ತಿನ್ನುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ದೀಪಾವಳಿಗೆ ಕರ್ನಾಟಕದ ಬಹುತೇಕ ಮನೆಗಳಲ್ಲಿ ಕಜ್ಜಾಯ ತಯಾರಿಸಲಾಗುತ್ತದೆ. 


ಇತರ ಗ್ಯಾಲರಿಗಳು