ಕನ್ನಡ ಸುದ್ದಿ  /  Photo Gallery  /  Delhi Capitals Face Major Blow As Ishant Sharma Limps Off The Field Due To Twist In Ankle During Pbks Vs Dc Ipl 2024 Jra

ಸೋಲಿನ ನಡುವೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮತ್ತೊಂದು ಆಘಾತ, ಗಂಭೀರ ಗಾಯಗೊಂಡು ಮೈದಾನದಿಂದ ಹೊರನಡೆದ ಇಶಾಂತ್‌ ಶರ್ಮಾ

  • ಐಪಿಎಲ್‌ 2024ರ ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಎರಡೆರಡು ಆಘಾತ ಎದುರಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ ಸೋಲು ಒಂದೆಡೆಯಾದರೆ, ಅನುಭವಿ ವೇಗಿ ಇಶಾಂತ್‌ ಶರ್ಮಾ ಗಾಯಗೊಂಡು ಹೊರಬಿದ್ದಿರುವುದು ಎರಡನೇ ಆಘಾತವಾಗಿದೆ. 

ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆವೃತ್ತಿಯಲ್ಲಿ ಮೊದಲ ಪಂದ್ಯ ಆಡಿದ ಡೆಲ್ಲಿ ಕ್ಯಾಪಿಟಲ್ಸ್, ಭಾರಿ ಹಿನ್ನಡೆ ಅನುಭವಿಸಿದೆ. ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಅನುಭವಿ ವೇಗದ ಬೌಲರ್ ಇಶಾಂತ್ ಶರ್ಮಾ ಪಾದಕ್ಕೆ ಗಂಭೀರ ಗಾಯ ಮಾಡಿಕೊಂಡಿದ್ದಾರೆ.
icon

(1 / 5)

ಡೆಲ್ಲಿ ಕ್ಯಾಪಿಟಲ್ಸ್‌ ನೀಡಿದ 175 ರನ್‌ಗಳ ಗುರಿ ಬೆನ್ನಟ್ಟಲು ಇಳಿದ ಪಂಜಾಬ್ ಕಿಂಗ್ಸ್, ಪಂದ್ಯದಲ್ಲಿ ಗೆದ್ದು ಬೀಗಿತು. ಆದರೆ ಪಂಜಾಬ್‌ ಇನ್ನಿಂಗ್ಸ್‌ನ ಪವರ್‌ಪ್ಲೇನ ಕೊನೆಯ ಓವರ್‌ ವೇಳೆ ಈ ಘಟನೆ ನಡೆದಿದೆ. ಮಿಚೆಲ್ ಮಾರ್ಷ್ ಎಸೆದ ನಿಧಾನಗತಿಯ ಎಸೆತವನ್ನು ಪ್ರಭ್‌ಸಿಮ್ರಾನ್‌ ಸಿಂಗ್ ಮಿಡ್‌ ವಿಕೆಟ್ ಕಡೆಗೆ ಫ್ಲಿಕ್‌ ಮಾಡಿದರು. ಇಶಾಂತ್ ಶರ್ಮಾ ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಚೆಂಡನ್ನು ಸಂಗ್ರಹಿಸಿ ವಿಕೆಟ್ ಕೀಪರ್‌ಗೆ ಎಸೆಯುವಾಗ, ಅವರ ಬಲ ಪಾದವು ತಿರುಚಿದಂತಾಯ್ತು.
icon

(2 / 5)

ಗಾಯವು ಗಂಭೀರವಾಗಿರುವಂತೆ ಕಂಡುಬಂದಿದೆ. ನೆಲಕ್ಕೆ ಕುಸಿದ ಇಶಾಂತ್ ತಮ್ಮ ಪಾದವನ್ನು ಹಿಡಿದುಕೊಂಡರು. ಈ ವೇಳೆ ಮೈದಾನಕ್ಕೆ ಧಾವಿಸಿದ ಫಿಸಿಯೋ, ಪ್ರಥಮ ಚಿಕಿತ್ಸೆ ನೀಡಿದರು. ಕೊನೆಗೆ ಫಿಸಿಯೋ ಮತ್ತು ಸಹಾಯಕ ಸಿಬ್ಬಂದಿಯ ಹೆಗಲ ಮೇಲೆ ಕೈಇಟ್ಟು ಕುಂಟುತ್ತಾ ಮೈದಾನ ತೊರೆದರು.  
icon

(3 / 5)

ಇಶಾಂತ್ ಬದಲಿಗೆ ಪ್ರವೀಣ್ ದುಬೆ ಬದಲಿ ಆಟಗಾರನಾಗಿ ಮೈದಾನಕ್ಕೆ ಬಂದರು. ಸದ್ಯ ಇಶಾಂತ್‌ ಗಾಯದ ತೀವ್ರತೆ ಬಗ್ಗೆ ಮಾಹಿತಿ ಇಲ್ಲ. ಡೆಲ್ಲಿ ತಂಡಕ್ಕೆ ಇದರಿಂದ ಆಘಾತವಾಗಿದೆ. ನಾಯಕ ರಿಷಭ್ ಪಂತ್ ಬಳಿ ಬೌಲಿಂಗ್‌ ಆಯ್ಕೆ ಕಡಿಮೆ ಇದೆ. ಒಂದು ವೇಳೆ ಇಶಾಂತ್ ಮುಂದಿನ ಪಂದ್ಯಗಳಿಂದ ಹೊರಬಿದ್ದರೆ, ತಂಡದ ಒತ್ತಡ ಹೆಚ್ಚಾಗುತ್ತದೆ.
icon

(4 / 5)

ಮೈದಾನದಿಂದ ಹೊರಹೋಗುವುದಕ್ಕೂ ಮುನ್ನ, ಇಶಾಂತ್ ಅದಾಗಲೇ ಶಿಖರ್ ಧವನ್ ವಿಕೆಟ್‌ ಪಡೆದಿದ್ದರು. ಅಲ್ಲದೆ ಜಾನಿ ಬೇರ್‌ಸ್ಟೋ ರನೌಟ್‌ ಮಾಡಿದರು.
icon

(5 / 5)

ಇತರ ಗ್ಯಾಲರಿಗಳು