ಕನ್ನಡ ಸುದ್ದಿ  /  Photo Gallery  /  Delhi Capitals Strongest Predicted Playing Xi Against Punjab Kings Ahead Of Ipl 2024 Dc Vs Pbks Rishabh Pant Prs

449 ದಿನಗಳ ನಂತರ ಕ್ರಿಕೆಟ್ ಆಡಲಿರುವ ರಿಷಭ್ ಪಂತ್ ಮುಂದಿವೆ ಹಲವು ಸವಾಲು; ತಂಡ ಕಟ್ಟುವುದೇ ದೊಡ್ಡ ಚಿಂತೆ

  • Delhi Capitals: ಒಂದು ವರ್ಷಕ್ಕೂ ಅಧಿಕ ದಿನಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿರುವ ರಿಷಭ್ ಪಂತ್​ ಅವರ ಮುಂದೆ ಹಲವು ಸವಾಲುಗಳಿವೆ. ಅದರಲ್ಲೂ ತಂಡವನ್ನು ಕಟ್ಟುವುದೇ ದೊಡ್ಡ ಚಿಂತೆಯಾಗಿದೆ.

2022ರ ಡಿಸೆಂಬರ್ 30ರಂದು ಭೀಕರ ಕಾರು ಅಪಘಾತದಿಂದ ಚೇತರಿಸಿಕೊಂಡ ನಂತರ ರಿಷಭ್ ಪಂತ್ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ್ದಾರೆ. ಐಪಿಎಲ್​ಗೆ ಕಂಬ್ಯಾಕ್ ಮಾಡಿರುವ ಪಂತ್, ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇದು ಈ ಐಪಿಎಲ್​ನ ದೊಡ್ಡ ಚರ್ಚೆಯ ವಿಷಯವಾಗಿದೆ. 2020ರಲ್ಲಿ ರನ್ನರ್ಸ್​ಅಪ್ ಆಗಿದ್ದ ಡೆಲ್ಲಿ, 2021ರಲ್ಲಿ ಮೊದಲ ತಂಡವಾಗಿ ಪ್ಲೇಆಫ್​ಗೆ ಪ್ರವೇಶಿಸಿತು ಆದರೆ ಫೈನಲ್ ಪ್ರವೇಶಿಸಲು ವಿಫಲವಾಯಿತು. ಕಳೆದ ಎರಡು ಅಭಿಯಾನಗಳಲ್ಲಿ ಡೆಲ್ಲಿ ಪ್ಲೇಆಫ್​​ಗೆ ಅರ್ಹತೆ ಪಡೆಯಲು ವಿಫಲರಾಗಿದೆ.
icon

(1 / 7)

ವೈಯಕ್ತಿಕ ಕಾರಣಗಳಿಂದಾಗಿ ಹ್ಯಾರಿ ಬ್ರೂಕ್ ಪಂದ್ಯಾವಳಿಯಿಂದ ಹಿಂದೆ ಸರಿದರೂ ಡೆಲ್ಲಿ ಕ್ಯಾಪಿಟಲ್ಸ್ ಬಲವಾದ ಬ್ಯಾಟಿಂಗ್ ಲೈನ್ಅಪ್ ಹೊಂದಿದೆ. ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಅವರಂತಹ ವಿದೇಶಿ ಆಟಗಾರರ ಜೊತೆಗೆ ರಿಷಭ್ ಪಂತ್, ಪೃಥ್ವಿ ಶಾ ಮತ್ತು ಅಕ್ಷರ್ ಪಟೇಲ್ ಅವರಂತಹ ಭಾರತೀಯ ತಾರೆಗಳು ತಂಡದ ಬಲ ಹೆಚ್ಚಿಸಿದ್ದಾರೆ. ಕುಮಾರ್ ಕುಶಾಗ್ರ, ರಿಕಿ ಭುಯಿ ಮತ್ತು ಅಭಿಷೇಕ್ ಪೊರೆಲ್ ಅವರಂತಹ ಭರವಸೆಯ ಪ್ರತಿಭೆಗಳು ಮತ್ತು ವಿದೇಶಿ ಬ್ಯಾಕಪ್​​ಗಳಾದ ಶಾಯ್ ಹೋಪ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಕೂಡ ತಂಡದಲ್ಲಿದ್ದಾರೆ.
icon

(2 / 7)

ಆದರೆ ಪಂತ್ ಅವರ ಫಾರ್ಮ್​ ಟೀಮ್ ಮ್ಯಾನೇಜ್​ಮೆಂಟ್ ಚಿಂತೆ ಹೆಚ್ಚಿಸಿದೆ. ಒಂದು ವರ್ಷಕ್ಕೂ ಹೆಚ್ಚು ಸಮಯದ ನಂತರ ಸ್ಪರ್ಧಾತ್ಮಕ ಕ್ರಿಕೆಟ್​ಗೆ ಮರಳಿದ ಪಂತ್​ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಗಾಯದಿಂದ ಚೇತರಿಸಿಕೊಂಡ ನಂತರ ಸ್ಪರ್ಧಾತ್ಮಕ ಕ್ರಿಕೆಟ್​​​ ಆಡದ ವಿಕೆಟ್ ಕೀಪರ್ ಬ್ಯಾಟರ್​, ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
icon

(3 / 7)

ನಾಯಕನಾಗಿ ಅವರ ಪಾತ್ರ ಹೇಗಿರಲಿದೆ? ಎದುರಾಳಿಯನ್ನು ಕಟ್ಟಿಹಾಕುವ ಸಾಮರ್ಥ್ಯ, ಆಲೋಚನೆಗಳು, ತಂತ್ರಗಳು, ಗೇಮ್​ ಪ್ಲಾನ್ಸ್ ಹೇಗೆ ಇರಲಿವೆ ಎಂಬುದು ಕುತೂಹಲ ಮೂಡಿಸಿದೆ. ಬ್ಯಾಟಿಂಗ್​ ವಿಭಾಗ ಬಲಿಷ್ಠವಾಗಿದ್ದರೂ ವೇಗದ ಬೌಲಿಂಗ್ ವಿಭಾಗದಲ್ಲಿ ತಂಡವು ದುರ್ಬಲವಾಗಿದೆ. ಅನ್ರಿಚ್ ನೋಕಿಯಾ ಲಭ್ಯತೆ ಮತ್ತು ಫಿಟ್ನೆಸ್ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಇದು ಇಬ್ಬರು ವೇಗಿಗಳಾದ ಮುಕೇಶ್ ಕುಮಾರ್ ಮತ್ತು ಖಲೀಲ್ ಅಹ್ಮದ್ ಅವರ ಮೇಲೆ ಒತ್ತಡ ಹೆಚ್ಚಿಸಿದರೂ ಅಚ್ಚರಿ ಇಲ್ಲ. ಆದರೆ ಬೌಲಿಂಗ್​ ವಿಭಾಗವನ್ನು ಹೇಗೆ ಬಲಿಷ್ಠಗೊಳಿಸಲಿದ್ದಾರೆ ಎಂಬುದು ಸಹ ಕುತೂಹಲ ಮೂಡಿಸಿದೆ. 
icon

(4 / 7)

ಪೃಥ್ವಿ ಶಾ, ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಡೆಲ್ಲಿ ಅಗ್ರ ಕ್ರಮಾಂಕದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಆದರೆ ಫಾರ್ಮ್​ನಲ್ಲಿರುವ ವಾರ್ನರ್​ರನ್ನು ಕೈಬಿಡಲು ಮ್ಯಾನೇಜ್​ಮೆಂಟ್ ಚಿಂತಿಸಿದೆ. ಅವರ ಬದಲಿಗೆ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ರಿಷಭ್ ಪಂತ್ ಮಧ್ಯಮ ಕ್ರಮಾಂಕದ ಜೊತೆಗೆ ವಿಕೆಟ್ ಕೀಪರ್ ಮತ್ತು ನಾಯಕನಾಗಿ ತಂಡದ ಆತ್ಮವಿಶ್ವಾಸ ಹೆಚ್ಚಿಸಲಿದ್ದಾರೆ. ಹ್ಯಾರಿ ಬ್ರೂಕ್, ಅಕ್ಷರ್ ಪಟೇಲ್, ಲಲಿತ್ ಯಾದವ್ ಡೆಲ್ಲಿ ಮಧ್ಯಮ ಕ್ರಮಾಂಕಕ್ಕೆ ಜೀವ ತುಂಬಬೇಕಿದೆ.
icon

(5 / 7)

ಬೌಲಿಂಗ್ ವಿಭಾಗದಲ್ಲಿ ಕುಲ್ದೀಪ್ ಯಾದವ್ ಅವರ ಸ್ಪಿನ್ ಕೌಶಲ್ಯದ ಬಗ್ಗೆ ಚರ್ಚೆ ನಡೆಸುವ ಅಗತ್ಯವೇ ಇಲ್ಲ. ಇದಲ್ಲದೆ ಅವರು ಉತ್ತಮ ಲಯದಲ್ಲಿದ್ದಾರೆ. ಮುಕೇಶ್ ಕುಮಾರ್ ಕೂಡ ಚೆಂಡಿನೊಂದಿಗೆ ಪ್ರಮುಖ ಪಾತ್ರವಹಿಸುವ ಸಾಧ್ಯತೆ ಇದೆ. ಗಾಯದಿಂದ ಅನ್ರಿಚ್ ನೋಕಿಯಾ ಆಡಲು ಸಾಧ್ಯವಾಗದಿದ್ದರೆ, ಜೇ ರಿಚರ್ಡ್ಸನ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಖಲೀಲ್ ಅಹ್ಮದ್​​ನಲ್ಲಿ ಪ್ರಮುಖ ಪಾತ್ರವಹಿಸಬೇಕಿದೆ.
icon

(6 / 7)

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ತಂಡ: ಪೃಥ್ವಿ ಶಾ, ಡೇವಿಡ್ ವಾರ್ನರ್/ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್​), ಹ್ಯಾರಿ ಬ್ರೂಕ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಕುಲ್ದೀಪ್ ಯಾದವ್, ಮುಕೇಶ್ ಕುಮಾರ್, ಆನ್ರಿಚ್​ ನೋಕಿಯಾ.
icon

(7 / 7)

IPL_Entry_Point

ಇತರ ಗ್ಯಾಲರಿಗಳು