ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಫೈನಲ್; ಉಭಯ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ? ಇಲ್ಲಿದೆ ವಿವರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಫೈನಲ್; ಉಭಯ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ? ಇಲ್ಲಿದೆ ವಿವರ

ಆರ್​ಸಿಬಿ-ಡೆಲ್ಲಿ ಕ್ಯಾಪಿಟಲ್ಸ್ ಫೈನಲ್; ಉಭಯ ತಂಡಗಳ ಮುಖಾಮುಖಿ ದಾಖಲೆ ಹೇಗಿದೆ? ಇಲ್ಲಿದೆ ವಿವರ

  • WPL 2024 : ವುಮೆನ್ಸ್ ಪ್ರೀಮಿಯರ್ ಲೀಗ್-2024 ಫೈನಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳ ಮುಖಾಮುಖಿಯ ದಾಖಲೆ ಹೇಗಿದೆ? ಇಲ್ಲಿದೆ ವಿವರ

ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್​ ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಟ ನಡೆಸಲಿವೆ. ಈ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ದೆಹಲಿಯ ಅರುಣ್ ಜೇಟ್ಲಿ ಮೈದಾನ ಆತಿಥ್ಯ ವಹಿಸಲಿದೆ.
icon

(1 / 6)

ಡೆಲ್ಲಿ ಮತ್ತು ಆರ್​ಸಿಬಿ ತಂಡಗಳು 4 ಬಾರಿ ಮುಖಾಮುಖಿಯಾಗಿವೆ. ಉಭಯ ಆವೃತ್ತಿಗಳಲ್ಲಿ ತಲಾ 2 ಸಲ ಪರಸ್ಪರ ಮುಖಾಮುಖಿಯಾಗಿವೆ. ಈಗ ಫೈನಲ್​​ ಮೂಲಕ ಐದನೇ ಬಾರಿಗೆ ಎದುರಾಗುತ್ತಿವೆ.ಆದರೆ ಆರ್​ಸಿಬಿ ಎದುರು ಡೆಲ್ಲಿ ಅಜೇಯ ದಾಖಲೆ ಹೊಂದಿದೆ.
icon

(2 / 6)

ಆರ್​ಸಿಬಿ ಎದುರಾದ ನಾಲ್ಕು ಪಂದ್ಯಗಳಲ್ಲೂ ಮೆಗ್​ ಲ್ಯಾನಿಂಗ್ ಪಡೆ ಗೆಲುವಿನ ನಗೆ ಬೀರಿದೆ. ಸ್ಮೃತಿ ಮಂಧಾನ ಪಡೆ ಡೆಲ್ಲಿ ವಿರುದ್ಧ ಇನ್ನೂ ಗೆಲುವಿನ ಖಾತೆ ತೆರೆದಿಲ್ಲ. ಹಾಗಾಗಿ ಫೈನಲ್​​ನಲ್ಲೂ ಅಜೇಯ ಓಟಕ್ಕೆ ಬ್ರೇಕ್ ಹಾಕಲು ಸಜ್ಜಾಗಿದೆ.
icon

(3 / 6)

(PTI)

ಪ್ರಸಕ್ತ ಟೂರ್ನಿಯ ಲೀಗ್​​ನಲ್ಲಿ ಉಭಯ ತಂಡಗಳ ನಡುವೆ ಮುಖಾಮುಖಿಯಾದ ಮೊದಲ ಪಂದ್ಯದಲ್ಲಿ ಮಂಧಾನ ಪಡೆಯ ವಿರುದ್ಧ ಡೆಲ್ಲಿ 25 ರನ್​ಗಳ ಭರ್ಜರಿ ಗೆಲುವು ಸಾಧಿಸಿತ್ತು.
icon

(4 / 6)

(WPL-X)

ಲೀಗ್​ನ ಎರಡನೇ ಪಂದ್ಯದಲ್ಲಿ ಆರ್​ಸಿಬಿ ಕೇವಲ 1 ರನ್ ಅಂತರದಿಂದ ಸೋಲು ಕಂಡಿತ್ತು. ಕಳೆದ ಆವೃತ್ತಿಯಲ್ಲೂ ಡೆಲ್ಲಿ ವಿರುದ್ಧ ಆರ್​ಸಿಬಿ ಎರಡೂ ಪಂದ್ಯಗಳಲ್ಲೂ ಶರಣಾಗಿತ್ತು. ಇದೀಗ ತಿರುಗೇಟು ನೀಡಲು ರೆಡ್ ಆರ್ಮಿ ಸಜ್ಜಾಗಿದೆ.
icon

(5 / 6)

(Women's Premier League Twitter)

ಡಬ್ಲ್ಯುಪಿಎಲ್​ನ ಎಲಿಮಿನೇಟರ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದು ಫೈನಲ್​ಗೇರಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ನೇರವಾಗಿ ಫೈನಲ್​ಗೆ ಲಗ್ಗೆ ಇಟ್ಟಿದೆ.
icon

(6 / 6)

ಇತರ ಗ್ಯಾಲರಿಗಳು