Bharat Ratna: ನಾಲ್ವರು ಸಾಧಕರಿಗೆ ಮರಣೋತ್ತರ ಭಾರತ ರತ್ನ ಪ್ರದಾನ, ಮನೆಯಲ್ಲೇ ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಲ್ ಕೆ ಅಡ್ವಾಣಿ photos
- ಭಾರತದ ಇತಿಹಾಸದಲ್ಲಿರಾಜಕೀಯ, ಸಾಮಾಜಿಕ ನ್ಯಾಯ, ಕೃಷಿ, ಆಹಾರ ಸಂಸ್ಕರಣೆ, ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿ ತಮ್ಮದೇ ಛಾಪು ಮುಡಿಸಿರುವ ಐವರಿಗೆ ಭಾರತರತ್ನ ಘೋಷಿಸಲಾಗಿದ್ದು, ನಾಲ್ವರಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ಎಲ್.ಕೆ.ಅಡ್ವಾಣಿ ಅವರು ಭಾನುವಾರ ಪ್ರಶಸ್ತಿ ಸ್ವೀಕರಿಸುವರು. ಈ ಸಮಾರಂಭದ ಕ್ಷಣಗಳು ಹೀಗಿದ್ದವು
- ಭಾರತದ ಇತಿಹಾಸದಲ್ಲಿರಾಜಕೀಯ, ಸಾಮಾಜಿಕ ನ್ಯಾಯ, ಕೃಷಿ, ಆಹಾರ ಸಂಸ್ಕರಣೆ, ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿ ತಮ್ಮದೇ ಛಾಪು ಮುಡಿಸಿರುವ ಐವರಿಗೆ ಭಾರತರತ್ನ ಘೋಷಿಸಲಾಗಿದ್ದು, ನಾಲ್ವರಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಯಿತು. ಎಲ್.ಕೆ.ಅಡ್ವಾಣಿ ಅವರು ಭಾನುವಾರ ಪ್ರಶಸ್ತಿ ಸ್ವೀಕರಿಸುವರು. ಈ ಸಮಾರಂಭದ ಕ್ಷಣಗಳು ಹೀಗಿದ್ದವು
(1 / 9)
ಬಿಹಾರದ ಮುಖ್ಯಮಂತ್ರಿಯಾಗಿ ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ನೀಡಿದ ಹಾಗೂ ದಮನಿತರ ಪರವಾಗಿ ಹೋರಾಟ ಮಾಡಿದ ಕರ್ಪೂರಿ ಠಾಕೂರ್ ಅವರಿಗೆ ಶತಮಾನೋತ್ಸವದ ನೆನಪಿನಲ್ಲಿ ಭಾರತ ರತ್ನ ಘೋಷಿಸಲಾಗಿದೆ.,
(2 / 9)
ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕರ್ಪೂರಿ ಠಾಕೂರ್ ಅವರ ಪುತ್ರ ರಾಮನಾಥ್ ಠಾಕೂರ್ ಅವರು ಭಾರತರತ್ನ ಪ್ರಶಸ್ತಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪಡೆದುಕೊಂಡರು.
(3 / 9)
ಕೃಷಿ ಕ್ರಾಂತಿಯ ಮೂಲಕ ಭಾರತದಲ್ಲಿ ಗಮನ ಸೆಳೆದ ಚೌಧರಿ ಚರಣ್ ಸಿಂಗ್ ಅವರಿಗೂ ಈ ಬಾರಿ ಭಾರತ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
(4 / 9)
ಚರಣ್ ಸಿಂಗ್ ಅವರ ಮೊಮ್ಮಗ ಜಯಂತ್ ಸಿಂಗ್ ಅವರು ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತರತ್ನ ಪ್ರಶಸ್ತಿ ಪಡೆದುಕೊಂಡರು.
(5 / 9)
ಭಾರತದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಸ್ಥಾನ ಪಡೆದಿರುವ, ಭಾರತ ಆರ್ಥಿಕ ಕ್ರಾಂತಿಗೆ ನಾಂದಿ ಹಾಡಿದ ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೂ ಭಾರತ ರತ್ನ ಘೋಷಿಸಲಾಗಿದೆ.
(6 / 9)
ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಪುತ್ರ ಪಿ.ವಿ. ಪ್ರಭಾಕರರಾವ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತ ರತ್ನವನ್ನು ಸ್ವೀಕರಿಸಿದರು.
(7 / 9)
ಕೃಷಿ ಹಾಗೂ ಆಹಾರ ಕ್ಷೇತ್ರದಲ್ಲಿ ಗಣನೀಯ ಕೆಲಸ ಮಾಡಿ ಹಸಿರು ಕ್ರಾಂತಿಯ ಹರಿಕಾರ ಎಂದು ಬಿರುದು ಪಡೆದ ಡಾ.ಎಂ.ಎಸ್.ಸ್ವಾಮಿನಾಥನ್ ಅವರು ಕಳೆದ ವರ್ಷ ನಿಧನರಾಗಿದ್ದರು. ಅವರಿಗೂ ಭಾರತ ರತ್ನ ಘೋಷಿಸಲಾಗಿತ್ತು.
(8 / 9)
ಡಾ.ಎಂ.ಎಸ್.ಸ್ವಾಮಿನಾಥನ್ ಅವರ ಪುತ್ರಿ ಡಾ.ನಿತ್ಯರಾವ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಿದರು.
ಇತರ ಗ್ಯಾಲರಿಗಳು