ಕನ್ನಡ ಸುದ್ದಿ  /  Photo Gallery  /  Delhi News Farmers Agitation Continued After Break Police Stopped In Haryana Punjab Border With Tear Gas Kub

Delhi farmers Protest: ದೆಹಲಿಯಲ್ಲಿ ನಿಲ್ಲದ ಅನ್ನದಾತರ ಹೋರಾಟ, ಗಡಿಯಲ್ಲಿ ಅಶ್ರುವಾಯು ಸಿಡಿಸಿ ತಡೆ, ಹೀಗಿತ್ತು ನೋಟ

  • ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಬದ್ದ ಮಾನ್ಯತೆ ಸೇರಿದಂತೆ ಹಲವಾರು ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರೈತರು ಬುಧವಾರ ಪ್ರತಿಭಟನೆ ಪುನರಾರಂಭಿಸಿದರು. ಹರಿಯಾಣದ ಗಡಿಯಲ್ಲಿ ಜಮಾಯಿಸಿದ್ದ ರೈತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ ಹರಸಾಹಸ ಪಡಬೇಕಾಯಿತು. ದೆಹಲಿಯ ಹಲವು ಕಡೆಗಳಲ್ಲೂ ಸಂಚಾರದ ವ್ಯತ್ಯಯವಾಯಿತು. ಈ ಕುರಿತು ಚಿತ್ರ ನೋಟ ಇಲ್ಲಿದೆ.

ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಬದ್ದ ಪ್ರಸ್ತಾವಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡಿಲ್ಲ. ಇದರಿಂದ  ಕೇಂದ್ರದ ಪ್ರಸ್ತಾವವನ್ನು ತಿರಸ್ಕರಿಸಿದ ಪ್ರತಿಭಟನಾ ನಿರತ ರೈತರು ಬುಧವಾರದಿಂದ ದೆಹಲಿ ಚಲೋ ಪ್ರತಿಭಟನೆಯನ್ನು ಮುಂದುವರಿಸಿದ್ಧಾರೆ. 
icon

(1 / 8)

ತಮ್ಮ ಬೇಡಿಕೆಗಳನ್ನೂ ಸಂಪೂರ್ಣವಾಗಿ ಒಪ್ಪಬೇಕು ಎನ್ನುವ ಬೇಡಿಕೆಯೊಂದಿಗೆ ರೈತರು ಹರಿಯಾಣ ಗಡಿಯಲ್ಲಿ ರಸ್ತ ತಡೆಗು ಬೃಹತ್‌ ಪ್ರತಿಭಟನೆಯನ್ನು ಪುನಾರಂಭಿಸಿದರು.
icon

(2 / 8)

ಪಂಜಾಬ್‌ ಹರಿಯಾಣದ ಗಡಿ ಭಾಗದಿಂದ ದೆಹಲಿ ಒಳಗೆ ನುಗ್ಗಲು ಪ್ರಯತ್ನಿಸಿದವರ ಮೇಲೆ ಪೊಲೀಸ್‌ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಸಿಡಿಸಿ ತಡೆದರು.
icon

(3 / 8)

ದೆಹಲಿ ಪ್ರವೇಶಿಸುವ ಟಿಕ್ರಿ ಮತ್ತು ಸಿಂಘು ಗಡಿಗಳನ್ನು ಬಂದ್‌ ಮಾಡಲಾಗಿದ್ದು, ಪೊಲೀಸರು ಮತ್ತು ಅರೆ ಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಜತೆಗೆ ಕಾಂಕ್ರೀಟ್‌ ಮತ್ತು ಕಬ್ಬಿಣದ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಭಾರೀ ಭದ್ರತೆ ಒದಗಿಸಲಾಗಿದೆ.
icon

(4 / 8)

ದೆಹಲಿ ಒಳ ಪ್ರವೇಶಿಸುವ ಹಲವು ಭಾಗಗಳಲ್ಲಿ ಕಾಂಕ್ರಿಟ್‌ ರಸ್ತೆ ವಿಭಜಕಗಳನ್ನು ಅಳವಡಿಸಿ ಒಳ ಬಾರದಂತೆ ಪೊಲೀಸರು ಹಲವಾರು ಸಂಚಾರ ಕ್ರಮಗಳನ್ನು ಕೈಗೊಂಡರು.
icon

(5 / 8)

ಪಂಜಾಬ್‌ ಗಡಿಯಲ್ಲಿ ರೈತರು ಸಾಕಷ್ಟು ಸಂಖ್ಯೆಯಲ್ಲಿ ಟ್ರಾಕ್ಟರ್‌ಗಳೊಂದಿಗೆ ಜಮಾವಣೆಗೊಂಡಿದ್ದಾರೆ. ಈ ಕಾರಣದಿಂದ ರಸ್ತೆಗಳನ್ನು ಸಂಪೂರ್ಣ ಬಂದ್‌ ಮಾಡಿ ಅರೆಸೇನಾ ಪಡೆಯ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.
icon

(6 / 8)

ರೈತರ ಹೋರಾಟದ ಹಿನ್ನೆಲೆಯಲ್ಲಿ ಪೊಲೀಸರು ದೆಹಲಿ ಕೆಲವು ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಹೇರಿದ್ದರಿಂದ ಹಲವು ಕಡೆ ಸಂಚಾರ ದಟ್ಟಣೆ, ವಾಹನ ಸಾಲುಗಟ್ಟಿ ನಿಂತಿರುವುದು ಕಂಡು ಬಂದಿತು.
icon

(7 / 8)

ದೆಹಲಿಯ ಪ್ರಮುಖ ಮೇಲ್ಸುತುವೆ ಮೇಲೆ ವಾಹನಗಳು ಸಾಲುಗಟ್ಟಿದ್ದವು. ರೈತರ ಪ್ರತಿಭಟನೆ ಕಾರಣದಿಂದ ಕೆಲ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಇರುವ ಕಾರಣಕ್ಕೆ ಬುಧವಾರದಿಂದ ಸಂಚಾರ ದಟ್ಟಣೆ ಕಂಡು ಬಂದಿತು.
icon

(8 / 8)

IPL_Entry_Point

ಇತರ ಗ್ಯಾಲರಿಗಳು