ಕಾರ್ತಿಕ ಮಾಸದಲ್ಲಿ ದೇವರಿಗೆ ತುಳಸಿ ಅರ್ಪಿಸುವುದರಿಂದ ಏನೆಲ್ಲಾ ಲಾಭಗಳಿವೆ? ಪೂಜೆಯ ಮಹತ್ವ ಹೀಗಿರುತ್ತೆ
- ತುಳಸಿ ಗಿಡವು ಸನಾತನ ಧರ್ಮದಲ್ಲಿ ನಂಬಿಕೆಯ ಕೇಂದ್ರಬಿಂದುವಾಗಿದೆ. ಕಾರ್ತಿಕ ಮಾಸದಲ್ಲಿ, ಭಗವಾನ್ ವಿಷ್ಣುವಿನ ಆರಾಧನೆಯಲ್ಲಿ ತುಳಸಿಯನ್ನು ಅರ್ಪಿಸುವುದರ ಫಲವನ್ನು 10 ಸಾವಿರ ಗೋದಾನಗಳಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ದೇವರಿಗೆ ತುಳಸಿ ಅರ್ಪಿಸುವುದರಿಂದ ಸಿಗುವ ಪ್ರಯೋಜನಗಳನ್ನು ತಿಳಿಯೋಣ.
- ತುಳಸಿ ಗಿಡವು ಸನಾತನ ಧರ್ಮದಲ್ಲಿ ನಂಬಿಕೆಯ ಕೇಂದ್ರಬಿಂದುವಾಗಿದೆ. ಕಾರ್ತಿಕ ಮಾಸದಲ್ಲಿ, ಭಗವಾನ್ ವಿಷ್ಣುವಿನ ಆರಾಧನೆಯಲ್ಲಿ ತುಳಸಿಯನ್ನು ಅರ್ಪಿಸುವುದರ ಫಲವನ್ನು 10 ಸಾವಿರ ಗೋದಾನಗಳಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ದೇವರಿಗೆ ತುಳಸಿ ಅರ್ಪಿಸುವುದರಿಂದ ಸಿಗುವ ಪ್ರಯೋಜನಗಳನ್ನು ತಿಳಿಯೋಣ.
(1 / 8)
ಕಾರ್ತಿಕ ಮಾಸದ ಸ್ನಾನಕ್ಕೆ ಅನಂತ ಫಲ ಸಿಗುತ್ತದೆ. ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷ ಮಹತ್ವವಿದೆ. ಅಕ್ಟೋಬರ್ 18ರ ಶುಕ್ರವಾರದಿಂದ ಕಾರ್ತಿಕ ಮಾಸ ಪ್ರಾರಂಭವಾಗಿದೆ. ಈ ಸಮಯದಲ್ಲಿ, ಸ್ನಾನ, ದಾನ, ಉಪವಾಸ ಹಾಗೂ ಪೂಜೆಗೆ ವಿಶೇಷ ಮಹತ್ವವನ್ನು ನೀಡಲಾಗುತ್ತದೆ
(2 / 8)
ಈ ಪವಿತ್ರ ಮಾಸದಲ್ಲಿ ಪ್ರತಿಯೊಬ್ಬರು ತುಳಸಿ ಗಿಡಕ್ಕೆ ಪೂಜೆ ಮಾಡುತ್ತಾರೆ. ಅದರ ಎಲೆಗಳನ್ನು ಪೂಜೆಗೆ ಬಳಸುತ್ತಾರೆ. ವಿಶೇಷವಾಗಿ ಕಾರ್ತಿಕ ಮಾಸದಲ್ಲಿ ತುಳಸಿಯ ಪ್ರಾಮುಖ್ಯ ಹೆಚ್ಚಾಗುತ್ತದೆ. ಈ ಪವಿತ್ರ ತಿಂಗಳಲ್ಲಿ ಗಂಗಾದಲ್ಲಿ ಸ್ನಾನ ಮಾಡುವುದರಿಂದ ಅಥವಾ ಯಾವುದೇ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ವ್ಯಕ್ತಿಯು ಅನಂತ ಫಲವನ್ನು ಪಡೆಯುತ್ತಾನೆ.
(3 / 8)
ಕಾರ್ತಿಕ ಮಾಸದಲ್ಲಿ ಮಾಡುವ ಧಾರ್ಮಿಕ ಕಾರ್ಯಗಳ ಫಲ ಅನೇಕ ಪಟ್ಟು ಹೆಚ್ಚಾಗುತ್ತದೆ. ಪಂಡಿತ್ ಸೂರ್ಯಮಣಿ ಪಾಂಡೆ ಹೇಳುವ ಪ್ರಕಾರ, ಕಾರ್ತಿಕ ಮಾಸವನ್ನು ವಿಷ್ಣು ಮತ್ತು ಶಿವನನ್ನು ಪೂಜಿಸಲು ವಿಶೇಷ ಸಮಯವೆಂದು ಪರಿಗಣಿಸಲಾಗಿದೆ.
(4 / 8)
ತುಳಸಿ ಗಿಡವು ಯಾವಾಗಲೂ ಸನಾತನ ಧರ್ಮದಲ್ಲಿ ನಂಬಿಕೆಯ ಕೇಂದ್ರವಾಗಿದೆ. ಕಾರ್ತಿಕ ಮಾಸದಲ್ಲಿ, ಭಗವಾನ್ ವಿಷ್ಣುವಿನ ಆರಾಧನೆಯಲ್ಲಿ ತುಳಸಿಯನ್ನು ಅರ್ಪಿಸುವ ಫಲವನ್ನು 10 ಸಾವಿರ ಗೋದಾನಗಳಿಗೆ ಸಮಾನವೆಂದು ಪರಿಗಣಿಸಲಾಗುತ್ತದೆ.
(5 / 8)
ಕಾರ್ತಿಕ ಮಾಸದಲ್ಲಿ ತುಳಸಿಯ ಮುಂದೆ ದೀಪವನ್ನು ಬೆಳಗಿಸಬೇಕು, ಆದರೆ ಕೆಲವು ಕಾರಣಗಳಿಂದಾಗಿ ದೀಪವನ್ನು ಬೆಳಗಿಸಲು ಆಗದಿದ್ದರೆ, ಕಾರ್ತಿಕ ಪೂರ್ಣಿಮಾ ದಿನದಂದು ಒಬ್ಬರು 31 ದೀಪಗಳನ್ನು ಬೆಳಗಿಸಬೇಕು. ಇದು ವ್ಯಕ್ತಿಯೊಬ್ಬರ ಜೀವನದಲ್ಲಿ ಹೆಚ್ಚಿನ ಆಶೀರ್ವಾದಗಳನ್ನು ತರುತ್ತದೆ.
(6 / 8)
ಕಾರ್ತಿಕ ಮಾಸದಲ್ಲಿ ಭಕ್ತರು ಬೆಳಿಗ್ಗೆ ದೇವರ ಸೇವೆಯ ಭಾಗವಾಗಿ ತುಳಸಿ ಪೂಜೆ ಮತ್ತು ಮಂತ್ರಗಳನ್ನು ಪಠಿಸಬೇಕು. ಇಲ್ಲವೇ ಸಂಜೆ ತುಳಸಿಯ ಮುಂದೆ ದೀಪಗಳನ್ನು ದಾನ ಮಾಡುವ ಮೂಲಕ ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ ಎಂದು ರಾಧಾದಾಮೋದರ್ ದೇವಾಲಯದ ಸೇವಕರಾದ ಕೃಷ್ಣಬಲರಾಮ್ ಗೋಸ್ವಾಮಿ ತಿಳಿಸಿದ್ದಾರೆ.
(7 / 8)
ತುಳಸಿ ಪೂಜೆಗಳಿಗೆ ಮಾತ್ರ ಸಮೀತವಾಗಿರದೆ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಉತ್ಕರ್ಷಣ ನಿರೋಧಕವನ್ನು ಹೊಂದಿದ್ದು, ದೇಹವನ್ನು ಸೋಂಕುಗಳಿಂದ ದೂರವಿಡಲು ಸಹಾಯ ಮಾಡುತ್ತದೆ.
ಇತರ ಗ್ಯಾಲರಿಗಳು