Devshayani Ekadashi: ಇಂದು ದೇವಶಯನಿ ಏಕಾದಶಿ; ವಿಷ್ಣುವನ್ನು ಪೂಜಿಸಿ ಆತನ ಕೃಪೆಗೆ ಪಾತ್ರರಾಗುವುದು ಹೇಗೆ, ಇಲ್ಲಿದೆ ಪೂಜಾ ವಿಧಾನದ ಮಾಹಿತಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Devshayani Ekadashi: ಇಂದು ದೇವಶಯನಿ ಏಕಾದಶಿ; ವಿಷ್ಣುವನ್ನು ಪೂಜಿಸಿ ಆತನ ಕೃಪೆಗೆ ಪಾತ್ರರಾಗುವುದು ಹೇಗೆ, ಇಲ್ಲಿದೆ ಪೂಜಾ ವಿಧಾನದ ಮಾಹಿತಿ

Devshayani Ekadashi: ಇಂದು ದೇವಶಯನಿ ಏಕಾದಶಿ; ವಿಷ್ಣುವನ್ನು ಪೂಜಿಸಿ ಆತನ ಕೃಪೆಗೆ ಪಾತ್ರರಾಗುವುದು ಹೇಗೆ, ಇಲ್ಲಿದೆ ಪೂಜಾ ವಿಧಾನದ ಮಾಹಿತಿ

  • ಇಂದು ದೇವಶಯನಿ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಅನೇಕ ಕಡೆ ಈ ವಿಶೇಷ ದಿನದಂದು ವಿಷ್ಣುವನ್ನು ಪೂಜಿಸುತ್ತಾರೆ. ವಿಷ್ಣುವಿನ ಪೂಜಾ ವಿಧಾನ ಹೇಗೆ, ಆತನ ಕೃಪೆಗೆ ಪಾತ್ರರಾಗುವುದು ಹೇಗೆ ಎಂಬುದರ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.

ದೇವಶಯನಿ ಏಕಾದಶಿ ಉಪವಾಸವನ್ನು ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿ ತಿಥಿಯಂದು ಆಚರಿಸಲಾಗುತ್ತದೆ. ಈ ಬಾರಿ ಇಂದು (ಜೂನ್ 29 ಗುರುವಾರ) ಈ ಶುಭ ದಿನವನ್ನು ಆಚರಿಸಲಾಗುತ್ತಿದೆ. ಈ ದಿನ ರವಿ ಎಂಬ ಶುಭ ಯೋಗ ಕೂಡಾ ರೂಪುಗೊಳ್ಳುತ್ತದೆ. ದೇವಶಯನಿ ಏಕಾದಶಿಯಿಂದ ಚಾತುರ್ಮಾಸ ಆರಂಭವಾಗುತ್ತದೆ. ದೇವಶಯನಿ ಏಕಾದಶಿಯ ಮಹತ್ವ, ಪೂಜಾ ವಿಧಾನ, ಶಯನ ಪೂಜಾ ವಿಧಾನ ಮತ್ತು ಮಂತ್ರವನ್ನು ತಿಳಿಯೋಣ.
icon

(1 / 6)

ದೇವಶಯನಿ ಏಕಾದಶಿ ವ್ರತವನ್ನು ಜೂನ್ 29 ರಂದು ಗುರುವಾರ ಆಚರಿಸಲಾಗುತ್ತದೆ. ಈ ಏಕಾದಶಿಯನ್ನು ಪ್ರತಿ ವರ್ಷ ಆಷಾಢ ಮಾಸದ ಶುಕ್ಲಪಕ್ಷದ ಏಕಾದಶಿ ತಿಥಿಯಂದು ಆಚರಿಸಲಾಗುತ್ತದೆ. ವಿಷ್ಣು ಪುರಾಣದ ಪ್ರಕಾರ, ಆಷಾಢ ಮಾಸದ ಏಕಾದಶಿಯ ದಿನದಂದು, ಭಗವಾನ್ ವಿಷ್ಣುವು ಕ್ಷೀರಸಾಗರದಲ್ಲಿ ಯೋಗ ನಿದ್ರಿಸಿದನು, ಆದ್ದರಿಂದ ಈ ತಿಥಿಯನ್ನು ದೇವಶಯನಿ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಏಕಾದಶಿಯ ನಾಲ್ಕು ತಿಂಗಳ ನಂತರ, ದೇವ ಪ್ರಬೋಧಿನಿ ಏಕಾದಶಿಯಂದು ಭಗವಾನ್ ವಿಷ್ಣುವು ಎಚ್ಚರಗೊಳ್ಳುತ್ತಾನೆ. ನಾಲ್ಕು ತಿಂಗಳ ಈ ಅವಧಿಯನ್ನು ಚಾತುರ್ಮಾಸ ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಯಾವುದೇ ಶುಭ ಸಮಾರಂಭಗಳನ್ನು ನಡೆಸುವುದಿಲ್ಲ. ದೇವಶಯನಿ ಏಕಾದಶಿಯ ಮಹತ್ವ, ಉಪವಾಸದ ವಿಧಾನ ತಿಳಿಯೋಣ.
icon

(2 / 6)

ದೇವಶಯನಿ ಏಕಾದಶಿಯನ್ನು ಹರಿಶಯನಿ ಏಕಾದಶಿ ಎಂದೂ ಕರೆಯುತ್ತಾರೆ. ಸೃಷ್ಟಿಯ ನಿಯಂತ್ರಕನಾದ ವಿಷ್ಣುವು ಈ ದಿನಾಂಕದಿಂದ ನಾಲ್ಕು ತಿಂಗಳ ಕಾಲ ಯೋಗ ನಿದ್ರೆಗೆ ಹೋಗುತ್ತಾನೆ. ದೇವಶಯನಿ ಏಕಾದಶಿಯು ಸೂರ್ಯ, ಚಂದ್ರ ಮತ್ತು ಪ್ರಕೃತಿಯ ವಿಕಿರಣ ಅಂಶವನ್ನು ಕಡಿಮೆ ಮಾಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ, ಇದರಿಂದಾಗಿ ಮಂಗಳ ಕಾರ್ಯಗಳು ಶುಭ ಫಲಿತಾಂಶಗಳನ್ನು ನೀಡುವುದಿಲ್ಲ. ಆದರೆ ಈ ಏಕಾದಶಿಯಂದು ಉಪವಾಸ ಮತ್ತು ವಿಷ್ಣುವನ್ನು ಆರಾಧಿಸುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಹಣ ಮತ್ತು ಧಾನ್ಯದ ಕೊರತೆ ಇರುವುದಿಲ್ಲ. ಅಲ್ಲದೆ, ಈ ಶುಭ ತಿಥಿಯಂದು ದಾನ ಧರ್ಮ ಮಾಡುವುದರಿಂದ ಎಲ್ಲಾ ರೀತಿಯ ಪಾಪಗಳು ದೂರವಾಗುತ್ತವೆ.
icon

(3 / 6)

ದೇವಶಯನಿ ಏಕಾದಶಿ ಪೂಜಾ ಸಮಯ: ದೇವಶಯನಿ ಏಕಾದಶಿ ತಿಥಿ ಜೂನ್ 29 ರಂದು ಪ್ರಾರಂಭವಾಗುತ್ತದೆ, ಸಂಜೆ 3.18 ರಿಂದ ಆರಂಭವಾಗಿ ಜೂನ್ 30 ರಂದು ಬೆಳಗ್ಗೆ 2:42  ರಂದು ಕೊನೆಗೊಳ್ಳುತ್ತದೆ.  
icon

(4 / 6)

ದೇವಶಯನಿ ಏಕಾದಶಿ ಉಪವಾಸದ ವಿಧಾನ: ದೇವಶಯನಿ ಏಕಾದಶಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಸ್ನಾನ, ಧ್ಯಾನ ಮಾಡಿ ಕೈಯಲ್ಲಿ ನೀರಿಟ್ಟು ಉಪವಾಸ ವ್ರತ ಕೈಗೊಳ್ಳಬೇಕು. ನಂತರ, ಕೆಂಪು ಅಥವಾ ಹಳದಿ ಬಟ್ಟೆಯಿಂದ ಹರಡಿದ ಚೌಕದ ಮೇಲೆ ವಿಷ್ಣುವಿನ ವಿಗ್ರಹ ಅಥವಾ ಚಿತ್ರವನ್ನು ಇರಿಸಿ. ಸುತ್ತಲೂ ಗಂಗಾಜಲವನ್ನು ಚಿಮುಕಿಸಿ, ನಂತರ ಶೋಢಶೋಪಚಾರ ವಿಧಾನದಲ್ಲಿ ವಿಷ್ಣುವನ್ನು ಪೂಜಿಸಿ. ಹಳದಿ ಬಣ್ಣವು ವಿಷ್ಣುವಿಗೆ ತುಂಬಾ ಪ್ರಿಯವಾಗಿದೆ ಆದ್ದರಿಂದ ಹಳದಿ ಹೂವುಗಳು, ಹಳದಿ ಹಣ್ಣುಗಳು ಇತ್ಯಾದಿಗಳನ್ನು ವಿಷ್ಣುವಿಗೆ ಅರ್ಪಿಸಿ. ಆ ನಂತರ ಧೂಪ ದೀಪ ಬೆಳಗಿಸಿ ಮಂತ್ರಗಳನ್ನು ಪಠಿಸಿ. ಪೂಜೆಯ ನಂತರ, ವಿಷ್ಣು ಮತ್ತು ತಾಯಿ ಲಕ್ಷ್ಮಿಗೆ ಆರತಿಯನ್ನು ಅರ್ಪಿಸಿ ಮತ್ತು ವಿಷ್ಣು ಸಹಸ್ರನಾಮವನ್ನು ಪಠಿಸಿ. ಭಗವಾನ್ ವಿಷ್ಣುವಿನ ಪೂಜೆಯ ನಂತರ ಅಶ್ವತ್ಥ ಮತ್ತು ಬಾಳೆ ಮರವನ್ನು ಪೂಜಿಸಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದಾನ ಮಾಡಿ. 
icon

(5 / 6)

ದೇವಶಯನಿ ಏಕಾದಶಿ ಶಯನ ಪೂಜೆ ವಿಧಾನ: ದೇವಶಯನಿ ಏಕಾದಶಿ ತಿಥಿಯಂದು ಸಂಜೆ ಕೂಡಾ ಪೂಜೆ ನಡೆಯುತ್ತದೆ. ಆ ಸಮಯದಲ್ಲಿ ಶಯನ ಮಂತ್ರವನ್ನು ಪಠಿಸಿ ಮತ್ತು ಶ್ರೀ ಹರಿ ವಿಷ್ಣುವನ್ನು ಮಲಗಿಸಿ.  ನೀವು ರಾತ್ರಿ ವೇಳೆ ಜಾಗರಣೆ ಮಾಡಬೇಕಾಗುತ್ತದೆ. 
icon

(6 / 6)

ಇತರ ಗ್ಯಾಲರಿಗಳು