Dharmasthala Lakshadeepotsav 2024: ಬೆಂಗಳೂರಿನ ಭಕ್ತರ ಅಲಂಕಾರ ಸೇವೆ; ಧರ್ಮಸ್ಥಳದಲ್ಲಿ ಹಬ್ಬದ ವಾತಾವರಣದ ಹೀಗಿತ್ತು
- Dharmasthala Lakshadeepotsav 2024: ದಕ್ಷಿಣ ಕನ್ನಡದ ಪ್ರಮುಖ ಯಾತ್ರಾ ಸ್ಥಳ ಧರ್ಮಸ್ಥಳದಲ್ಲಿ ಈಗ ಲಕ್ಷದೀಪೋತ್ಸವದ ಸಡಗರ. ಶ್ರೀ ಕ್ಷೇತ್ರದಲ್ಲಿನ ಅಲಂಕಾರ, ಪೂಜೆ, ಸಾಂಸ್ಕೃತಿಕ ವೈಭವ ಮೆರಗು ತಂದಿವೆ.
- ಮಾಹಿತಿ: ಹರೀಶ ಮಾಂಬಾಡಿ. ಮಂಗಳೂರು
- Dharmasthala Lakshadeepotsav 2024: ದಕ್ಷಿಣ ಕನ್ನಡದ ಪ್ರಮುಖ ಯಾತ್ರಾ ಸ್ಥಳ ಧರ್ಮಸ್ಥಳದಲ್ಲಿ ಈಗ ಲಕ್ಷದೀಪೋತ್ಸವದ ಸಡಗರ. ಶ್ರೀ ಕ್ಷೇತ್ರದಲ್ಲಿನ ಅಲಂಕಾರ, ಪೂಜೆ, ಸಾಂಸ್ಕೃತಿಕ ವೈಭವ ಮೆರಗು ತಂದಿವೆ.
- ಮಾಹಿತಿ: ಹರೀಶ ಮಾಂಬಾಡಿ. ಮಂಗಳೂರು
(1 / 6)
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಭಕ್ತರು ದೇವಸ್ಥಾನದಲ್ಲಿ ಅಲಂಕಾರಸೇವೆ ಮಾಡಿದರು.
(2 / 6)
ಬೆಂಗಳೂರಿನ ಮಾರುಕಟ್ಟೆ ಹೂವಿನ ವ್ಯಾಪಾರಸ್ಥರು ಮತ್ತು ಡೆಕೊರೇಟರ್ಸ್ ಹೂವು, ಹಣ್ಣು, ತರಕಾರಿಗಳನ್ನು ಬಳಸಿ ದೇವಸ್ಥಾನ, ಬೀಡು, ಅನ್ನಛತ್ರ, ಮೊದಲಾದ ಕಟ್ಟಡಗಳಿಗೆ ಅಲಂಕಾರ ಸೇವೆ ಮಾಡಿದ್ದು ಗಮನ ಸೆಳೆಯಿತು.
(3 / 6)
ಅನಾನಸು, ಸೇಬು, ದ್ರಾಕ್ಷಿ, ತೆಂಗಿನಕಾಯಿ, ಕಲ್ಲಂಗಡಿ, ಕಬ್ಬು ಮೊದಲಾದವುಗಳನ್ನು ತಲಾ ಮುನ್ನೂರು ಕೆ.ಜಿ. ಬಳಸಲಾಗಿದೆ. ಲಿಲಿಯಂ, ಬಿ.ಒ.ಪಿ. ಆರ್ಕಿಡ್, ಗುಲಾಬಿ, ಗ್ಲಾಡಿಯೊ, ಕ್ಯೂಬ್‌ರೋಸ್ ಮೊದಲಾದ ಹೂವುಗಳನ್ನು ಬಳಸಲಾಗಿತ್ತು.ಸುಮಾರು ಮುನ್ನೂರು ಮಂದಿ ಶ್ರಮವಹಿಸಿ ಅಲಂಕಾರ ಸೇವೆ ಮಾಡಿದ್ದು, ಸುಮಾರು ಹತ್ತು ಲಕ್ಷ ರೂ. ವೆಚ್ಚವಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.
(4 / 6)
ಧರ್ಮಸ್ಥಳದಲ್ಲಿ ಶುಕ್ರವಾರ ರಾತ್ರಿ ಕಂಚಿಮಾರುಕಟ್ಟೆ ಉತ್ಸವ ನಡೆಯಿತು. ಇದರ ಅಂಗವಾಗಿ ನಾನಾ ಪೂಜಾ ವಿಧಿ ವಿಧಾನಗಳು ನೆರವೇರಿದವು,
(5 / 6)
ಲಕ್ಷದೀಪೋತ್ಸವ ಅಂಗವಾಗಿ ಧರ್ಮಸ್ಥಳದಲ್ಲಿ ನಾನಾ ಭಾಗಗಳಿಂದ ಆಗಮಿಸಿದ ಕಲಾವಿದರು ಕಾರ್ಯಕ್ರಮ ವೈವಿಧ್ಯದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಇತರ ಗ್ಯಾಲರಿಗಳು