ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆಗೆ ಮೆರುಗು ನೀಡಿದ ಪುಷ್ಪಾಲಂಕಾರ, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ, ಪಲ್ಲಕ್ಕಿ ಸೇವೆ, ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆಗೆ ಮೆರುಗು ನೀಡಿದ ಪುಷ್ಪಾಲಂಕಾರ, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ, ಪಲ್ಲಕ್ಕಿ ಸೇವೆ, ಚಿತ್ರನೋಟ

ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆಗೆ ಮೆರುಗು ನೀಡಿದ ಪುಷ್ಪಾಲಂಕಾರ, ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ, ಪಲ್ಲಕ್ಕಿ ಸೇವೆ, ಚಿತ್ರನೋಟ

New Year 2025: ಧರ್ಮಸ್ಥಳದಲ್ಲಿ ಹೊಸ ವರ್ಷಾಚರಣೆಗೆ ಮೆರುಗು ನೀಡಿದ್ದು ಪುಷ್ಪಾಲಂಕಾರ. ಹೊಸ ವರ್ಷಾಚರಣೆ ನಿಮಿತ್ತ ಬುಧವಾರ (ಜನವರಿ 1) ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ, ಪಲ್ಲಕ್ಕಿ ಸೇವೆ ಕೂಡ ನೆರವೇರಿತು. ಪುಷ್ಪಾಲಂಕಾರದ ಚಿತ್ರನೋಟ ಇಲ್ಲಿದೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)

ಧರ್ಮಸ್ಥಳದಲ್ಲಿ ಕೂಡ ಹೊಸ ವರ್ಷಾಚರಣೆ ನಡೆದಿದ್ದು, ಶ್ರೀ ಮಂಜುನಾಥ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ಹೊಸ ವರ್ಷಾಚರಣೆಗೆ ಮೆರುಗು ನೀಡಿದ್ದು ವಿಶೇಷ ಪುಪ್ಪಾಲಂಕಾರ. ದೇವರಿಗೆ ಪಲ್ಲಕ್ಕಿ ಸೇವೆ ಸೇರಿ ವಿಶೇಷ ಪೂಜೆಗಳು ಕೂಡ ನೆರವೇರಿದವು.
icon

(1 / 7)

ಬೆಂಗಳೂರಿನ ಟಿ.ವಿ.ಎಸ್. ಕಂಪೆನಿ ಉದ್ಯಮಿ ಗೋಪಾಲರಾವ್ ಮತ್ತು ಆನಂದಮೂರ್ತಿ ಬಳಗದವರು ಹೊಸವರ್ಷ ಆಚರಣೆ ಪ್ರಯುಕ್ತ ಬುಧವಾರ ಧರ್ಮಸ್ಥಳದಲ್ಲಿ ದೇವಸ್ಥಾನ, ಬೀಡು (ಹೆಗ್ಗಡೆಯವರ ನಿವಾಸ), ಅನ್ನಪೂರ್ಣ ಭೋಜನಾಲಯ, ಗೋಪುರ, ಮುಖಮಂಟಪ ಹಾಗೂ ವಿವಿಧ ಕಟ್ಟಡಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು.
icon

(2 / 7)

ಧರ್ಮಸ್ಥಳ ದೇವಸ್ಥಾನ ಮತ್ತು ಸುತ್ತಮುತ್ತಲಿನ ಕಟ್ಟಡ ಅಲಂಕಾರಕ್ಕೆ ವಿವಿಧ ಜಾತಿಯ ಹೂವುಗಳು, ಅಡಿಕೆ, ತೆಂಗು, ಭತ್ತದ ತೆನೆ, ಮುಸುಂಬಿ, ದಾಳಿಂಬೆ, ಕಬ್ಬು ಮೊದಲಾದ ಒಂದು ಟನ್ ಹಣ್ಣುಗಳನ್ನು ಬಳಸಿ ಅತ್ಯಾಕರ್ಷಕವಾಗಿ ಸಿಂಗರಿಸಿದ್ದರು.
icon

(3 / 7)

ಧರ್ಮಸ್ಥಳ ಪುಣ್ಯಕ್ಷೇತ್ರದ ಪುಷ್ಪಾಲಂಕಾರ ಮಾಡುವುದಕ್ಕೆ 80 ಜನರ ತಂಡ ಕೆಲಸ ಮಾಡಿತ್ತು. ಈ ತಂಡ ಪುಷ್ಪಾಲಂಕಾರ ಮಾಡುವುದರಲ್ಲಿ ಪರಿಣತಿ ಹೊಂದಿದ್ದು, ವಿವಿಧೆಡೆ ಪುಷ್ಪಾಲಂಕಾರ ಮಾಡಿ ಗಮನಸೆಳೆದಿದೆ. ವಿಶೇಷ ಪುಷ್ಪಾಲಂಕಾರದ ಕೆಲಸ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಶ್ರೀದೇವರಿಗೆ ವಿಶೇಷ ಪಲ್ಲಕ್ಕಿ ಸೇವೆಯೂ ನೆರವೇರಿತು.
icon

(4 / 7)

ವಿವಿಧ ಜಾತಿಯ ಹೂವುಗಳು, ಅಡಿಕೆ, ತೆಂಗು, ಭತ್ತದ ತೆನೆ, ಮುಸುಂಬಿ, ದಾಳಿಂಬೆ, ಕಬ್ಬು ಮೊದಲಾದ ಒಂದು ಟನ್ ಹಣ್ಣುಗಳನ್ನು ಬಳಸಿ ವಿಶೇಷ ಪುಷ್ಪಾಲಂಕಾರ ಮಾಡುವುದಕ್ಕೆ ಅಂದಾಜು 20 ಲಕ್ಷ ರೂಪಾಯಿ ವ್ಯಯಿಸಲಾಗಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿವೆ. ಮಂಜುನಾಥ ಸ್ವಾಮಿಗೆ ಬೆಳ್ಳಿ ತೇರು ಸೇವೆಯೂ ನೆರವೇರಿತು.
icon

(5 / 7)

ನಾಡಿನೆಲ್ಲೆಡೆಯಿಂದ ಅಧಿಕಸಂಖ್ಯೆಯಲ್ಲಿ ಭಕ್ತರು ಬಂದು ದೇವರ ದರ್ಶನ ಪಡೆದು, ಸೇವೆ ಮಾಡಿ ಧನ್ಯತೆಯನ್ನು ಹೊಂದಿದರು. ಬೀಡಿನಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. 
icon

(6 / 7)

ಧರ್ಮಸ್ಥಳದಲ್ಲಿ ಎಲ್ಲೆಲ್ಲೂ ಸಂಭ್ರಮ-ಸಡಗರ, ಹಬ್ಬದ ವಾತಾವರಣ. ಪರಿಚಿತರೂ, ಅಪರಿಚಿತರೂ ನಗುಮೊಗದಿಂದ ಪರಸ್ಪರ ಹೊಸವರ್ಷದ ಶುಭಾಶಯಗಳನ್ನು ಹಂಚಿಕೊಂಡು ಸಂಭ್ರಮಿಸಿದರು.
icon

(7 / 7)

ಇತರ ಗ್ಯಾಲರಿಗಳು