ಧಾರವಾಡದ ವರಸಿದ್ಧಿದಾಯಕ ಜಾಗೃತ ಶ್ರೀ ಲೈನ್‌ಬಜಾರ್‌ ಹನುಮಂತ ದೇವರ ಮಹಾ ರಥೋತ್ಸವ ಸಂಪನ್ನ- ಆಕರ್ಷಕ ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಧಾರವಾಡದ ವರಸಿದ್ಧಿದಾಯಕ ಜಾಗೃತ ಶ್ರೀ ಲೈನ್‌ಬಜಾರ್‌ ಹನುಮಂತ ದೇವರ ಮಹಾ ರಥೋತ್ಸವ ಸಂಪನ್ನ- ಆಕರ್ಷಕ ಚಿತ್ರನೋಟ

ಧಾರವಾಡದ ವರಸಿದ್ಧಿದಾಯಕ ಜಾಗೃತ ಶ್ರೀ ಲೈನ್‌ಬಜಾರ್‌ ಹನುಮಂತ ದೇವರ ಮಹಾ ರಥೋತ್ಸವ ಸಂಪನ್ನ- ಆಕರ್ಷಕ ಚಿತ್ರನೋಟ

ಧಾರವಾಡ ನಗರದ ಜಾಗೃತ ಶ್ರೀ ಲೈನ್‌ಬಜಾರ್‌ ಮಾರುತಿ ದೇವರ ದೇವಸ್ಥಾನದಲ್ಲಿ ಶನಿವಾರ ಶ್ರದ್ಧಾಭಕ್ತಿ ಪೂರ್ವಕವಾಗಿ ಹನುಮಾನ್ ಜಯಂತಿ ಕಾರ್ಯಕ್ರಮ ನೆರವೇರಿತು. ವರಸಿದ್ಧಿದಾಯಕ ಜಾಗೃತ ಶ್ರೀ ಲೈನ್‌ಬಜಾರ್‌ ಹನುಮಂತ ದೇವರ ರಥೋತ್ಸವದ ಆಕರ್ಷಕ ಚಿತ್ರನೋಟ ಇಲ್ಲಿದೆ.

ಜಾಗೃತ ಶ್ರೀ ಲೈನ್ ಬಜಾರ್ ಮಾರುತಿ ದೇವರ ದೇವಸ್ಥಾನದ 56ನೇ ವಾರ್ಷಿಕ ಮಹಾ ರಥೋತ್ಸವ ಆಚರಣೆ ಹನುಮಾನ್ ಜಯಂತಿ ದಿನವೇ (ಏಪ್ರಿಲ್ 12) ನೆರವೇರಿತು. ದೇವಸ್ಥಾನದ ವಿಶ್ವಸ್ಥ ಮಂಡಳಿ ಹನುಮಾನ್ ಜಯಂತಿ ಕಾರ್ಯಕ್ರಮವನ್ನೂ ಆಯೋಜಿಸಿತ್ತು.
icon

(1 / 9)

ಹನುಮ ಜಯಂತಿ ಅಂಗವಾಗಿ ಎಪ್ರಿಲ್ 12ರಂದು ಬೆಳಿಗ್ಗೆ 6.15ಕ್ಕೆ ಶ್ರೀ ಹನುಮಂತ ದೇವರ ತೊಟ್ಟಿಲೋತ್ಸವ, ವಿಶೇಷ ಪೂಜೆ, ಅಲಂಕಾರ ಸೇವೆ, ಪ್ರಸಾದ ವಿತರಣೆ ನಡೆಯಿತು. ಮಹಾ ರಥೋತ್ಸವ ಕೂಡ ನೆರವೇರಿತು.
icon

(2 / 9)

ವಾರ್ಷಿಕ ಮಹಾ ರಥೋತ್ಸವ ನಿಮಿತ್ತ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ರಕ್ತದಾನ ಶಿಬಿರ ಹಾಗೂ ಮಧ್ಯಾಹ್ನ 12 ರಿಂದ ಅನ್ನಸಂತರ್ಪಣೆ ನೆರವೇರಿತು.
icon

(3 / 9)

ಹನುಮಾನ್ ಜಯಂತಿ ಮತ್ತು ವಾರ್ಷಿಕ ಮಹಾ ರಥೋತ್ಸವದ ಆಕರ್ಷಣೆಯಾಗಿ ಜಾಝ್‌ ತಂಡ ತನ್ನ ಪ್ರದರ್ಶನ ನೀಡಿತು.
icon

(4 / 9)

ಧಾರವಾಡ ಲೈನ್ ಬಜಾರ್‌ ಶ್ರೀ ಹನುಮಂತ ದೇವರು ಜಾಗೃತ ಶ್ರೀ ಆಂಜನೇಯನಾಗಿದ್ದು, ಭಕ್ತರಿಗೆ ಬೇಡಿದ ವರನೀಡುವ ಕರುಣಾಮಯಿಯಾಗಿದ್ದಾನೆ. ಪ್ರತಿ ಶನಿವಾರ ಸೇರಿದಂತೆ ಇಲ್ಲಿ ನಿತ್ಯವೂ ಸಾವಿರಾರು ಜನ ಭಕ್ತರು ದರ್ಶನ ಪಡೆದು ಪುನೀತರಾಗುತ್ತಾರೆ ಎಂದು ವಿಶ್ವಸ್ಥ ಮಂಡಳಿ ಅಧ್ಯಕ್ಷ ಪ್ರವೀಣ ಲಾಂಡೆ ಹೇಳಿದರು.
icon

(5 / 9)

ಲೈನ್‌ಬಜಾರ್ ಹನುಮಂತ ದೇವರ ತೇರನ್ನು ಬೀದಿ ಬೀದಿಯಲ್ಲಿ ಎಳೆದು ಭಕ್ತರು ತಮ್ಮ ಭಕ್ತಿ ಭಾವ ಪ್ರದರ್ಶಿಸಿದರು.
icon

(6 / 9)

ಕೇಸರಿ ಶಾಲು ಕತ್ತಿಗೆ ಹಾಕಿ, ಪೇಟಾ ಧರಿಸಿ ಭಾರಿ ಗಾತ್ರದ ಕೇಸರಿ ಧ್ವಜ ಹಿಡಿದು ಭಕ್ತರು ಮಹಾ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಭಾವ ಪ್ರದರ್ಶಿಸಿದರು.
icon

(7 / 9)

ಲೈನ್‌ಬಜಾರ್‌ ಮಾರುತಿ ದೇವರ ದೇವಸ್ಥಾನದ ಮೇಲ್ಛಾವಣಿ ಮೇಲೆ ಬೃಹತ್ ಗಾತ್ರದ ಹನುಮಂತನ ಪ್ರತಿಮೆಯನ್ನು ಇದೇ ವೇಳೆ ಅನಾವರಣಗೊಳಿಸಲಾಗಿದೆ.
icon

(8 / 9)

ಧಾರವಾಡ ನಗರದ ಭಕ್ರರು ವರಸಿದ್ಧಿದಾಯಕ ಹನುಮಂತ ದೇವರ ದರ್ಶನ ಮಾಡಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥನೆ ಮಾಡಿಕೊಂಡರು.
icon

(9 / 9)

ಧಾರವಾಡ ನಗರದ ಭಕ್ರರು ವರಸಿದ್ಧಿದಾಯಕ ಹನುಮಂತ ದೇವರ ದರ್ಶನ ಮಾಡಿ ಇಷ್ಟಾರ್ಥಗಳನ್ನು ಈಡೇರಿಸುವಂತೆ ಪ್ರಾರ್ಥನೆ ಮಾಡಿಕೊಂಡರು.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು