ನಿಮ್ಮ ಆನ್‌ಲೈನ್‌ ಗೌಪ್ಯತೆ ಹೆಚ್ಚಿಸಿಕೊಳ್ಳಿ; ಈ 4 ಸಲಹೆಗಳನ್ನು ಪಾಲಿಸುವ ಮೂಲಕ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನಿಮ್ಮ ಆನ್‌ಲೈನ್‌ ಗೌಪ್ಯತೆ ಹೆಚ್ಚಿಸಿಕೊಳ್ಳಿ; ಈ 4 ಸಲಹೆಗಳನ್ನು ಪಾಲಿಸುವ ಮೂಲಕ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿ

ನಿಮ್ಮ ಆನ್‌ಲೈನ್‌ ಗೌಪ್ಯತೆ ಹೆಚ್ಚಿಸಿಕೊಳ್ಳಿ; ಈ 4 ಸಲಹೆಗಳನ್ನು ಪಾಲಿಸುವ ಮೂಲಕ ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಿ

Digital Scam Awareness: ಆನ್‌ಲೈನ್‌ ವಂಚನೆ ಈಗ ಹೆಚ್ಚಾಗುತ್ತಿದೆ. ಕಂಪ್ಯೂಟರ್‌, ಮೊಬೈಲ್‌ ಬಳಕೆ ಮಾಡುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು. ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿರಲು, ನಿಮ್ಮ ಪ್ರೈವೇಸಿ ಉತ್ತಮಪಡಿಸಲು ಈ ಮುಂದಿನ ನಾಲ್ಕು ಸಲಹೆಗಳನ್ನು ಅನುಸರಿಸಿ.

ಪಾಸ್‌ವರ್ಡ್‌: ಆನ್‌ಲೈನ್‌ ಗೌಪ್ಯತೆ ಹೆಚ್ಚಿಸಲು ನಿಮ್ಮ ಆನ್‌ಲೈನ್‌ ಖಾತೆಗಳಿಗೆ ಸ್ಟ್ರಾಂಗ್‌ ಪಾಸ್‌ವರ್ಡ್‌ ನೀಡಿ. ಪಾಸ್‌ವರ್ಡ್‌ಗಳು ಕನಿಷ್ಠ 12-16 ಅಕ್ಷರಗಳಷ್ಟು ಉದ್ದವಾಗಿ  ಇರಲಿ. ಆಲ್ಫಾನ್ಯೂಮೆರಿಕ್ ಕೋಡ್‌ಗಳು, ವಿಶೇಷ ಅಕ್ಷರಗಳನ್ನು ಬಳಸಿ ಪಾಸ್‌ವರ್ಡ್‌ ರಚಿಸಿ. ಆನ್‌ಲೈನ್‌ ಉಚಿತ ಪಾಸ್‌ವರ್ಡ್‌ ಜನರೇಟರ್‌ಗಳ ನೆರವು ಪಡೆದುಕೊಳ್ಳಬಹುದು. ನಿಯಮಿತವಾಗಿ ಪಾಸ್‌ವರ್ಡ್‌ ಬದಲಾಯಿಸುತ್ತ ಇರಿ.
icon

(1 / 7)

(Pixabay)

ಟು ಫ್ಯಾಕ್ಟರ್‌ ಅಥೆಂಟಿಕೇಷನ್‌ (ಎರಡು ಅಂಶಗಳ ದೃಢೀಕರಣ): ಈಗ ಪಾಸ್‌ವರ್ಡ್‌ ಇದ್ದರೆ ಸಾಲದು. ಆನ್‌ಲೈನ್‌ ಸುರಕ್ಷತೆಗೆ ಟು ಫ್ಯಾಕ್ಟರ್‌ ಅಥೆಂಟಿಕೇಷನ್‌ (2ಎಫ್ಎ) ಫೀಚರ್‌ಗಳನ್ನು ಬಳಸಿ. ಪಾಸ್‌ವರ್ಡ್‌ ನಮೂದಿಸಿದ ಬಳಿಕ ಮೊಬೈಲ್‌ ಅಥವಾ ಇಮೇಲ್‌ಗೆ ಬರುವ ಕೋಡ್‌ ನಮೋದಿಸಬೇಕಾಗುತ್ತದೆ. ಅಥೆಂಟಿಕೇನ್‌ ಅಪ್ಲಿಕೇಷನ್‌ಗಳ ಮೂಲಕವೂ ಸುರಕ್ಷತೆ ಹೆಚ್ಚಿಸಬಹುದು.
icon

(2 / 7)

ಎನೇಬಲ್‌ ಇನ್‌ಕ್ರಿಪ್ಷನ್‌ (ಗೂಢಲಿಪೀಕರಣ): ಕರೆಗಳು, ಪಠ್ಯಗಳು ಮತ್ತು ಇತರ ಡೇಟಾದಂತಹ ನಿಮ್ಮ ಆನ್‌ಲೈನ್‌ ಸಂವಹನವನ್ನು ಇನ್‌ಕ್ರಿಪ್ಷನ್‌ ಮೂಲಕ ಸುರಕ್ಷಿತವಾಗಿಸಿ. ವಾಟ್ಸಪ್‌ನಲ್ಲಿ ಮೆಟಾ ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ಮುಂತಾದವುಗಳನ್ನು ಬಳಸಿರಿ. 
icon

(3 / 7)

ಸಾರ್ವಜನಿಕ ವೈ-ಫೈ ಸಂಪರ್ಕಕ್ಕೆ ವಿಪಿಎನ್ ಬಳಕೆ: ಮೊದಲನೆಯದಾಗಿ ಸಾರ್ವಜನಿಕ ವೈ-ಫೈ ಸಂಪರ್ಕಗಳನ್ನು ಬಳಸುವುದನ್ನು ತಪ್ಪಿಸಿ. ಆನ್‌ಲೈನ್‌ ವಂಚಕರು ಪಬ್ಲಿಕ್‌ ವೈಫೈ ಮೂಲಕ ನಿಮ್ಮ ವೈಯಕ್ತಿಕ ಮಾಹಿತಿಗೆ ಕನ್ನ ಹಾಕಬಹುದು. ಸಾರ್ವಜನಿಕ ವೈ-ಫೈ ಬಳಸುವಾಗ ವಿಪಿಎನ್‌ ಬಳಸಿ. 
icon

(4 / 7)

(Pexels)

ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಂಕಿಂಗ್‌ ಇತ್ಯಾದಿಗಳಿಗೆ ಅಧಿಕೃತ ಆ್ಯಪ್‌ಗಳನ್ನೇ ಬಳಸಿ. ಎಲ್ಲಾ ಆ್ಯಪ್‌ಗಳಿಗೂ ಒಂದೇ ಪಾಸ್‌ವರ್ಡ್‌ ನೀಡಬೇಡಿ. ಜನರು ಸುಲಭವಾಗಿ ಊಹಿಸಬಹುದಾದ ಸರಳ ಪಾಸ್‌ವರ್ಡ್‌ ಬರೆಯಬೇಡಿ. ಅಂದರೆ, 1234, 4321, 0000, ನಿಮ್ಮಹೆಸರು123 ಇತ್ಯಾದಿ ಬರೆಯಬೇಡಿ. ಈ ರೀತಿಯ ಪಾಸ್ವರ್ಡ್‌ ಅನ್ನು ಯಾರು ಬೇಕಾದರೂ ಸುಲಭವಾಗಿ ಊಹಿಸಬಹುದು.
icon

(5 / 7)

ಫಿಷಿಂಗ್‌ ಎಂಬ ಜಾಲಕ್ಕೆ ಬೀಳದಿರಿ. ಕೆಲವೊಮ್ಮೆ ನಿಮ್ಮ ಬ್ಯಾಂಕ್‌ ವೆಬ್‌ಸೈಟ್‌ ಅನ್ನು ಹೋಲುವ ವೆಬ್‌ ಲಿಂಕ್‌ ಕಾಣಿಸಿಕೊಳ್ಳಬಹುದು. ಅಲ್ಲಿ ನೀವು ನಿಮ್ಮ ಪಾಸ್‌ವರ್ಡ್‌ ನೀಡುವಂತೆ ಹೇಳಬಹುದು. ಪಾಸ್‌ವರ್ಡ್‌ ನೀಡಿದರೆ ನಿಮ್ಮ ಖಾತೆಯಿಂದ ಹಣ ಗುಳುಂ ಆಗುವುದು ಗ್ಯಾರಂಟಿ. ಇದೇ ರೀತಿ, ನಿಮ್ಮ ಇನ್‌ಕಾಂ ಟ್ಯಾಕ್ಸ್‌ನಲ್ಲಿ ಬಾಕಿ ಉಳಿದ ಹಣವನ್ನು ಮರುಪಾವತಿಸುತ್ತೇವೆ ಎಂಬ ಲಿಂಕ್‌ಗಳೂ ಇಮೇಲ್‌ನಲ್ಲಿ, ಸಂದೇಶಗಳಲ್ಲಿ ಹರಿದಾಡಬಹುದು. ಇಲ್ಲೂ ಮೋಸ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.
icon

(6 / 7)

ಈ ವರ್ಷ ಆನ್‌ಲೈನ್‌ ವಂಚನೆಯಿದ ಪಾರಾಗಲು ಮೇಲೆ ತಿಳಿಸಿದ ಡಿಜಿಟಲ್‌ ಸುರಕ್ಷತಾ ಸಲಹೆಗಳನ್ನು ಅನುಸರಿಸಲು ಪ್ರಯತ್ನಿಸಿ.  ಈ ಮೂಲಕ ನಿಮ್ಮ ಆನ್‌ಲೈನ್‌ ಡೇಟಾವನ್ನು ಸುರಕ್ಷಿತವಾಗಿ, ಗೌಪ್ಯವಾಗಿ ಕಾಪಾಡಿಕೊಳ್ಳಿ
icon

(7 / 7)

ಇತರ ಗ್ಯಾಲರಿಗಳು