ಬೆಳಕಿನ ಹಬ್ಬಕ್ಕೆ ರಂಗೋಲಿಗಳ ಮೂಲಕ ಶುಭಾಶಯ ಕೋರಿ; ಇಲ್ಲಿದೆ ಟ್ರೆಂಡಿಂಗ್ ದೀಪಾವಳಿ ರಂಗೋಲಿ ಡಿಸೈನ್‌ಗಳು
Diwali rangoli design: ದೀಪಾವಳಿ ಹಬ್ಬದಲ್ಲಿ ದೀಪಗಳ ಜೊತೆ ರಂಗೋಲಿಯು ವಿಶೇಷ. ರಂಗೋಲಿ ಇಲ್ಲ ಎಂದರೆ ಬೆಳಕಿನ ಹಬ್ಬ ಸಂಪೂರ್ಣವಾಗುವುದಿಲ್ಲ. ದೀಪಾವಳಿ ಹಬ್ಬಕ್ಕೆ ನೀವು ವಿವಿಧ ಬಣ್ಣಗಳ ರಂಗೋಲಿ ಬಿಡಿಸುವ ಮೂಲಕ ದೀಪಾವಳಿ ಶುಭಾಶಯ ಕೋರಬೇಕು ಅಂತಿದ್ದರೆ ಈ ಚಿತ್ತಾರಗಳು ನಿಮಗೆ ಇಷ್ಟವಾಗಬಹುದು ನೋಡಿ.
(1 / 8)
ದೀಪಾವಳಿ ಶುಭಾಶಯ ಕೋರಲು ನಾನಾ ಮಾರ್ಗಗಳಿವೆ. ಈ ವರ್ಷ ದೀಪಾವಳಿಗೆ ನೀವು ರಂಗೋಲಿ ಚಿತ್ತಾರದ ಮೂಲಕ ಶುಭ ಕೋರಬಹುದು. ಸುಂದರ ಬಣ್ಣದ ರಂಗೋಲಿ ಬಿಡಿಸಿ ಅದರಲ್ಲೇ ದೀಪಾವಳಿ ಶುಭಾಶಯ ಬರೆದು ವಿಭಿನ್ನವಾಗಿ ಬೆಳಕಿನ ಹಬ್ಬ ಆಚರಿಸಬಹುದು. ಈ ಬಣ್ಣದ ರಂಗೋಲಿಗಳು ಕಣ್ಮನ ಸೆಳೆಯುವಂತಿದ್ದು ಇದನ್ನು ಬಿಡಿಸುವುದು ಸುಲಭ. ಕಾಮನಬಿಲ್ಲಿನ ಬಣ್ಣಗಳ ಸಮ್ಮಿಲನ ಈ ರಂಗೋಲಿಗಳಲ್ಲಿ ಕಾಣಬಹುದು.
(2 / 8)
ದೀಪಾವಳಿಯಂದು ದೀಪಗಳಿಗೆ ವಿಶೇಷ ಮಹತ್ವವಿದೆ. ಹಾಗಾದರೆ ರಂಗೋಲಿಗೆ ದೀಪಗಳ ಸ್ಪರ್ಶವನ್ನು ಏಕೆ ಸೇರಿಸಬಾರದು. ಈ ವಿನ್ಯಾಸವು ತುಂಬಾ ಸುಂದರವಾಗಿ ಕಾಣುತ್ತದೆ ಮತ್ತು ಮಾಡಲು ಕಷ್ಟವೇನಲ್ಲ. ಈ ದೀಪಾವಳಿಯಲ್ಲಿ ನಿಮ್ಮ ಅಂಗಳವನ್ನು ಅಲಂಕರಿಸಲು ಈ ಸೂಪರ್ ರಂಗೋಲಿ ಡಿಸೈನ್ ಆಯ್ಕೆ ಮಾಡಿಕೊಳ್ಳಬಹುದು.
(3 / 8)
ನೀವು ರಂಗೋಲಿ ಬಿಡಿಸುವಲ್ಲಿ ಪರಿಣತರಾಗಿದ್ದರೆ ಈ ವಿನ್ಯಾಸವು ನಿಮಗೆ ಉತ್ತಮವಾಗಿರುತ್ತದೆ. ಇದು ನೋಡಲು ತುಂಬಾ ಸುಂದರ, ವಿಶಿಷ್ಟವಾಗಿದೆ. ಇದನ್ನು ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ಸಂಪೂರ್ಣ ರಂಗೋಲಿ ಸಿದ್ಧವಾದಾಗ ಅದನ್ನು ನೋಡಲು ಎರಡು ಕಣ್ಣುಗಳೇ ಸಾಲುವುದಿಲ್ಲ.
(4 / 8)
ನವಿಲಿನ ಚಿತ್ರ ಮೂಡಿಸಿ ಅದರಲ್ಲಿ ದೀಪಗಳು ಬರುವಂತೆ ಸುಂದರವಾದ ರಂಗೋಲಿ ಚಿತ್ತಾರವನ್ನು ನೀವು ದೇವೆರ ಕೋಣೆಯ ಮುಂದೆ ಬಿಡಿಸಬಹುದು. ಇದರಲ್ಲಿ ಕೆಳಗಡೆ ದೀಪಾವಳಿ ಹಬ್ಬದ ಶುಭಾಶಯ ಎಂದು ಬರೆಯಬಹುದು. ಈ ವಿನ್ಯಾಸ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ.
(5 / 8)
ಚುಕ್ಕಿಗಳು ಹಾಗೂ ಬಣ್ಣಗಳಿಂದ ಅತ್ಯದ್ಭುತ ರಂಗೋಲಿ ವಿನ್ಯಾಸ ಮೂಡಿಸಬೇಕು ಅಂತಿದ್ದರೆ ಈ ಡಿಸೈನ್ ನಿಮಗೆ ಸಖತ್ ಇಷ್ಟವಾಗುತ್ತದೆ. ಇದು ಕೂಡ ಕಾಮನಬಿಲ್ಲಿನ ಎಲ್ಲಾ ಬಣ್ಣಗಳು ಸೇರಿರುವ ವಿನ್ಯಾಸವಾಗಿದ್ದು, ಇದರಲ್ಲಿ ಕೂಡ ದೀಪಾವಳಿ ಶುಭಾಶಯ ಕೋರಬಹುದು.
(6 / 8)
ದೀಪಾವಳಿ ಹಬ್ಬಕ್ಕೆ ಕೊಂಚ ಭಿನ್ನವಾಗಿ ರಂಗೋಲಿ ಬಿಡಿಸೋಣ ಅಂದುಕೊಳ್ಳುತ್ತಿದ್ದರೆ ಈ ಚಿತ್ತಾರ ನಿಮಗೆ ಇಷ್ಟವಾಗಬಹುದು. ಇದನ್ನ ಬಿಡಿಸುವುದು ಕೂಡ ಸುಲಭವಾಗಿದ್ದು, ಸುಂದರವಾಗಿ ಕಾಣುತ್ತದೆ.
(7 / 8)
ರಂಗೋಲಿ ವಿನ್ಯಾಸವನ್ನು ಸುಲಭವಾಗಿ ತಯಾರಿಸಬಹುದಾಗಿದ್ದು, ನೋಡಲು ತುಂಬಾ ಭವ್ಯವಾಗಿ ಮತ್ತು ಸುಂದರವಾಗಿ ಕಾಣಿಸವಂತಿರಬೇಕು ಎಂದರೆ ಈ ವಿನ್ಯಾಸ ಆಯ್ಕೆ ಮಾಡಿ. ಇದು ನೋಡಲು ಆಕರ್ಷಕ ಮತ್ತು ಭವ್ಯವಾದ, ತಯಾರಿಸಲು ಅಷ್ಟೇ ಸುಲಭ.
ಇತರ ಗ್ಯಾಲರಿಗಳು