Reading Habit: ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಬೇಕಾ? ಈ ಟಿಪ್ಸ್ ಫಾಲೋ ಮಾಡಿ; ನೀವು ಬಿಟ್ರೂ ಓದಿನ ಹವ್ಯಾಸ ನಿಮ್ಮನ್ನು ಬಿಡಲ್ಲ
ನಿಮಗೂ ಪುಸ್ತಕ ಓದಬೇಕು, ಯಾವಾಗಲೂ ಅದರಲ್ಲೇ ಮುಳುಗಿರಬೇಕು, ಹೊಸ ಹೊಸ ಪುಸ್ತಕ ಓದಿ ತುಂಬಾ ತಿಳಿದುಕೊಳ್ಳಬೇಕು ಎಂಬ ಆಸೆ ಇದ್ದರೆ ಈ ಟಿಪ್ಸ್ ಫಾಲೋ ಮಾಡಿ. ನೀವು ಬಿಟ್ರೂ ಓದಿನ ಹವ್ಯಾಸ ನಿಮ್ಮನ್ನು ಬಿಡಲ್ಲ
(1 / 9)
ಸ್ಮಾರ್ಟ್ ಫೋನ್‌ಗಳಲ್ಲಿ ಜಾಗತಿಕ ಮತ್ತು ಸ್ಥಳೀಯ ಘಟನೆಗಳ ವೀಡಿಯೊಗಳನ್ನು ನಾವು ನಿರಂತರವಾಗಿ ನೋಡುತ್ತಿರುತ್ತೇವೆ. ಆದರೂ ಪ್ರಾಯೋಗಿಕವಾಗಿ ಕೈಯ್ಯಲ್ಲಿ ಪುಸ್ತಕಗಳನ್ನು ಹಿಡಿದು ಓದಿ ವಿಷಯ ತಿಳಿದುಕೊಳ್ಳುವ ವಿಧಾನವೇ ಬೇರೆ.
(2 / 9)
ತುಂಬಾ ಜನರಿಗೆ ನಾನು ಸಹ ಪುಸ್ತಕ ಓದಬೇಕು ಎಂಬ ಇಚ್ಛೆ ಮನಸಲ್ಲಿ ಅಡಗಿರುತ್ತದೆ. ಗ್ರಂಥಾಲಯ ಅಥವಾ ಪುಸ್ತಕ ಎಂದರೆ, ಇಷ್ಟದ ತಿನಿಸು ಕಂಡಾಗ ಖುಷಿಕೊಡುವಷ್ಟು ಖುಷಿ ನೀಡಬೇಕು ಎಂಬೆಲ್ಲ ಆಸೆ ಇರುತ್ತದೆ. ಆದರೆ ಓದಲು ಕುಳಿತಾಗ ಮಾತ್ರ ಆ ಆಸೆ ನಿರಾಸೆ ಆಗುತ್ತದೆ.
(3 / 9)
ಹೀಗಿರುವಾಗ ನೀವು ಓದಲು ಆರಂಭಿಸುವಾಗ ತುಂಬಾ ಸರಳವಾದ ಪುಸ್ತಕವನ್ನು ಆಯ್ಕೆ ಮಾಡಿಕೊಳ್ಳಬೇಕು. ಓದಲು ಕಠಿಣ ಎಂದು ನಿಮ್ಮ ಮನಸಿಗೆ ಒಮ್ಮೆ ಅನಿಸಿಬಿಟ್ಟರೆ ಬೇರೆನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ಸರಳ ಪುಸ್ತಕ ಆಯ್ಕೆ ಮಾಡಿಕೊಳ್ಳಿ.
(4 / 9)
ಓದಲು ತುಂಬಾ ಸುಲಭವಾಗುವ ರೀತಿ ನಿಮ್ಮ ಕಣ್ಣಿಗೆ ಹಿತವೆನಿಸುವ ಅಕ್ಷರದ ಗಾತ್ರ ಇರುವ ಪುಸ್ತಕ ಆಯ್ಕೆ ಮಾಡಿಕೊಳ್ಳಿ. ತುಂಬಾ ದೊಡ್ಡನೆಯ ಅಕ್ಷರ ಇದ್ದರೆ ಪುಟಗಳು ಬೇಗ ಮುಗಿಯುತ್ತವೆ.. ಆಗ ನಿಮಗೆ ನಾನು ಓದುತ್ತಿದ್ದೇನೆ ಎಂಬ ಭರಸವೆ ಮೂಡುತ್ತದೆ.
(5 / 9)
ನೀವು ಯಾವ ವಾತಾವರಣದಲ್ಲಿ ಓದುತ್ತಿದ್ದೀರಿ ಎಂಬುದೂ ಮುಖ್ಯವಾಗುತ್ತದೆ. ಇಲ್ಲವಾದರೆ ಓದುವ ಮನಸ್ಥಿತಿ ಇರುವುದಿಲ್ಲ.
(6 / 9)
ನಿಮಗೆ ಇಷ್ಟವಾಗುವ ಶೈಲಿಯ ಪುಸ್ತಕವನ್ನೇ ಆಯ್ಕೆ ಮಾಡಿಕೊಳ್ಳಿ. ಅಂದರೆ, ಹಾಸ್ಯ, ಕಥನ, ಲಹರಿ, ಸತ್ಯಾಧಾರಿತ, ಐತಿಹಾಸಿಕ, ಮಾಂತ್ರಿಕ, ಹೀಗೆ ಯಾವ ವಿಷಯ ಇಷ್ಟವಾಗುತ್ತದೆಯೋ ಅದನ್ನೇ ಆಯ್ಕೆ ಮಾಡಿಕೊಳ್ಳಿ.
(7 / 9)
ನೀವು ದೂರದರ್ಶನದಲ್ಲಿ ಅಥವಾ ಮೊಬೈಲ್‌ನಲ್ಲಿ ನೋಡುವ ಸಿನಿಮಾಗಳಿಗೆ ಬೇರೆ ಡೈರೆಕ್ಟರ್ ಇರುತ್ತಾರೆ. ಅವರು ತೋರಿಸಿದಂತೆ ನೀವು ಸಿನಿಮಾ ನೋಡಬಹುದು. ಆದರೆ ನೀವೇ ಕಥೆ ಓದಿದಾಗ ನಿಮ್ಮ ಮೆದುಳಲ್ಲಿ ನೀವು ನಿಮಗೆ ಬೇಕಾದ ಕಲ್ಪನೆಯನ್ನು ತಂದುಕೊಳ್ಳಬಹುದು.
(8 / 9)
ಇನ್ನು ನಿಮ್ಮ ಮಕ್ಕಳು ಚಿಕ್ಕವರಿದ್ದಾಗ ಅವರಿಗೆ ಮೊಬೈಲ್ ಕೊಡುವುದಕ್ಕಿಂತ ಹೆಚ್ಚಾಗಿ ಪುಸ್ತಕ ನೀಡಿ. ಆಗ ತನ್ನಿಂದ ತಾನೇ ಪುಸ್ತಕ ಓದುವ ಹವ್ಯಾಸ ಬೆಳೆಯುತ್ತದೆ.
ಇತರ ಗ್ಯಾಲರಿಗಳು