ಕನಸಲ್ಲಿ ಆನೆ ಬಂತಾ, ಎಷ್ಟು ಆನೆಗಳಿದ್ದವು, ಹೇಗಿದ್ದವು, ಆ ಕನಸಿನ ಅರ್ಥ ಏನು- ವಾಸ್ತು ತಜ್ಞ ಮುಕುಲ್ ರಸ್ತೋಗಿ ವಿವರಣೆ ಹೀಗಿದೆ ನೋಡಿ
ಮಲಗಿ ನಿದ್ದೆ ಮಾಡುವಾಗ ಕನಸು ಬೀಳೋದು ಸಹಜ. ಹಾಗೆ ಕನಸು ಬೀಳುವಾಗ ಬಹುತೇಕ ಒಳ್ಳೆಯ ಕನಸುಗಳೇ ಬೀಳುತ್ತವೆ. ಕೆಲವೊಮ್ಮೆ ಕೆಟ್ಟ ಕನಸು ಕೂಡ ಕಾಣಬಹುದು. ಕನಸಿನ ವಿಜ್ಞಾನದ ಪ್ರಕಾರ, ಪ್ರತಿ ಕನಸಿಗೂ ಒಂದೊಂದು ಅರ್ಥವಿರುತ್ತದೆ. ಆನೆ ಕನಸಲ್ಲಿ ಕಂಡರೆ ಅದು ಶುಭವೋ ಅಶುಭವೋ? ಸಂದೇಹ ಸಹಜ. ವಾಸ್ತು ತಜ್ಞ ಮುಕುಲ್ ರಸ್ತೋಗಿ ಅವರು ಕೊಟ್ಟಿರುವ ವಿವರಣೆ ಹೀಗಿದೆ.
(1 / 6)
ಕನಸು ಯಾರಿಗೆ ಬೀಳಲ್ಲ ಹೇಳಿ. ಬಹುತೇಕ ಎಲ್ಲರಿಗೂ ಒಂದಿಲ್ಲೊಂದು ಕನಸು ಬಿದ್ದೇ ಬೀಳುತ್ತೆ. ಅದರಲ್ಲೂ ಆನೆ ಕನಸು ಬಿದ್ದರೆ, ಮಕ್ಕಳಂತೂ ಬಹಳ ಕುತೂಹಲಕಾರಿಯಾಗಿ ಅದರ ಕಥೆಯನ್ನು ಖಂಡಿತ ಹೇಳಿಯೇ ಹೇಳುತ್ತಾರೆ. ಇರಲಿ ಆನೆ ಕನಸು ನಿಮಗೂ ಏನಾರ ಬಿತ್ತಾ? ಹಾಗೆ ಆನೆ ಕನಸು ಕಂಡರೆ ಅದರ ಅರ್ಥ ಏನು? ಎಂಬ ಕುತೂಹಲ ಕಾಡಿಯೇ ಕಾಡುತ್ತೆ.(Meta AI Image)
(2 / 6)
ನಿದ್ದೆ ಮಾಡ್ತಾ ಇರುವಾಗ ಬಿದ್ದ ಕನಸಿನಲ್ಲಿ ಆನೆ ತೂಗಾಡ್ತಾ ನಿಂತಿರುವ ದೃಶ್ಯ ಕಾಣಸಿಕ್ಕಿತಾ? ಸರಿಯಾಗಿ ನೆನಪಿಸಿಕೊಳ್ಳಿ. ಹಾಗೇನಾದರೂ ಆದರೆ, ಅದು ಧನ ಸಂಪತ್ತು ಹೆಚ್ಚಾಗುವುದರ ಸಂಕೇತ. ಅಂತಹ ಕನಸು ಜೀವನದಲ್ಲಿ ಹಣಕಾಸಿನ ಒಳಹರಿವು ಹೆಚ್ಚಾಗುವುದರ ಸೂಚನೆ ಎನ್ನುತ್ತಾರೆ ವಾಸ್ತು ತಜ್ಞ ಮುಕುಲ್ ರಸ್ತೋಗಿ. (Meta AI Image)
(3 / 6)
ಗರ್ಭಿಣಿ ಮಹಿಳೆ ತನ್ನ ಕನಸಿನಲ್ಲಿ ಆನೆಯನ್ನು ನೋಡಿದರೆ, ಮುಂದೆ ಹುಟ್ಟಲಿರುವ ಮಗು ಅದೃಷ್ಟಶಾಲಿಯಾಗಿರುತ್ತದೆ. ಕನಸಿನಲ್ಲಿ ಆನೆಯನ್ನು ನೋಡಿದರೆ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ.(Meta AI Image)
(4 / 6)
ಕನಸಿನಲ್ಲಿ ಐರಾವತ ಆನೆ ಕಂಡರೆ ದೊಡ್ಡ ಸಾಧನೆ ಅಥವಾ ಗೌರವ ಸಿಗುವ ಸಾಧ್ಯತೆ ಇದೆ. ಜೋಡಿ ಆನೆ ಮತ್ತು ಹೆಣ್ಣು ಆನೆ ಕಂಡರೆ ದಾಂಪತ್ಯ ಸುಖ ಹೆಚ್ಚುತ್ತದೆ.(Meta AI Image)
(5 / 6)
ಆಚಾರ್ಯ ಮುಕುಲ್ ರಸ್ತೋಗಿ ಅವರ ಪ್ರಕಾರ, ನೀವು ಆನೆಯ ಮೇಲೆ ಸವಾರಿ ಮಾಡುವುದನ್ನು ನೋಡಿದರೆ, ನೀವು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುತ್ತೀರಿ. ಜೀವನದಲ್ಲಿ ಸಂತೋಷ ಬರುತ್ತದೆ.(Meta AI Image)
ಇತರ ಗ್ಯಾಲರಿಗಳು