ಕನ್ನಡ ಸುದ್ದಿ  /  Photo Gallery  /  Drink These Juices To Control Hair Fall And Get Thick Hair

Hair Fall: ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಜ್ಯೂಸ್​​ ಕುಡಿಯಿರಿ

ಅನೇಕ ಜನರು ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಹಾಗೂ ಪ್ರತಿಯೊಬ್ಬರೂ ತಮ್ಮ ಕೂದಲು ದಪ್ಪವಾಗಿರಬೇಕು ಎಂದು ಬಯಸುತ್ತಾರೆ. ಆರೋಗ್ಯಕರ ಕೂದಲಿಗೆ ಪೋಷಣೆ ಮುಖ್ಯ. ಕೂದಲಿಗೆ ಪೋಷಣೆ ನೀಡಲು ಹಣ್ಣಿನ ರಸಗಳು ಸಹಾಯ ಮಾಡುತ್ತವೆ. ಕೆಲವೊಂದು ಜ್ಯೂಸ್​ಗಳನ್ನು ನೀವು ಕುಡಿಯುವುದರಿಂದ, ಹಣ್ಣಿನ ರಸವನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು.

ಕೂದಲು ಉದುರುವುದು ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಕೂದಲು ಉದುರುವಿಕೆಯನ್ನು ತಡೆಯಲು ದುಬಾರಿ ಉತ್ಪನ್ನಗಳು ಸಹಾಯಕ್ಕೆ ಬರುವುದಿಲ್ಲ. ಎಷ್ಟೇ ದುಬಾರಿ ರಾಸಾಯನಿಕ ಉತ್ಪನ್ನಗಳಿದ್ದರೂ ಅವು ನಿಮ್ಮ ಕೂದಲಿಗೆ ಹಾನಿಯನ್ನುಂಟು ಮಾಡುತ್ತವೆ ಆದರೆ ಏನೂ ಪ್ರಯೋಜನವಾಗುವುದಿಲ್ಲ. ಹೀಗಾಗಿ ಕೂದಲು ಉದುರುವಿಕೆ ತಡೆಗಟ್ಟಲು ಮನೆಮದ್ದೇ ಎಷ್ಟೋ ಸಹಾಯಕ.
icon

(1 / 7)

ಅನೇಕ ಹಣ್ಣಿನ ರಸಗಳು ಕೂದಲಿನ ಬೆಳವಣಿಗೆಗೆ ತುಂಬಾ ಉಪಯುಕ್ತವೆಂದು ಹೇಳಲಾಗುತ್ತದೆ. ವಿವಿಧ ಪೋಷಕಾಂಶಗಳುಳ್ಳ ಹಣ್ಣುಗಳ ಜ್ಯೂಸ್​ ಕುಡಿಯುವುದರಿಂದ, ಹಣ್ಣಿನ ರಸವನ್ನು ತಲೆಗೆ ಹಚ್ಚುವುದರಿಂದ ನಿಮ್ಮ ಕೂದಲಿಗೆ ಪೋಷಣೆ ನೀಡಬಹುದಾಗಿದೆ.
icon

(2 / 7)

ಕ್ಯಾರೆಟ್ ಜ್ಯೂಸ್ - ಕ್ಯಾರೆಟ್ ವಿಟಮಿನ್ ಎ ಅನ್ನು ಹೊಂದಿರುತ್ತದೆ. ಇದು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ. ಅಕಾಲಿಕ ಬಿಳಿ ಕೂದಲನ್ನು ತಡೆಯುತ್ತದೆ. ಕೂದಲಿನ ಬೆಳವಣಿಗೆಗೆ ನೀವು ಪ್ರತಿದಿನ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯಬಹುದು.
icon

(3 / 7)

ಕಿವಿ ಜ್ಯೂಸ್ - ಕಿವಿ ಹಣ್ಣು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಕೂದಲು ಉತ್ತಮಗೊಳಿಸಲು ಕಿವಿ ತುಂಬಾ ಒಳ್ಳೆಯದು. ಮಲಬದ್ಧತೆಯಿಂದ ಅನೇಕ ಸಮಸ್ಯೆಗಳನ್ನು ನಿವಾರಿಸುವ ಗುಣಗಳೂ ಕಿವಿಯಲ್ಲಿದೆ. ಈ ಹಣ್ಣಿನ ರಸವನ್ನು ತಲೆಗೆ ಹಚ್ಚುವುದರಿಂದ ಕಪ್ಪು ಹಾಗೂ ದಟ್ಟನೆಯ ಕೂದಲು ನಿಮ್ಮದಾಗುತ್ತದೆ.
icon

(4 / 7)

ಕಿವಿ ಜ್ಯೂಸ್ - ಕಿವಿ ಹಣ್ಣು ಅನೇಕ ಆರೋಗ್ಯಕರ ಗುಣಗಳನ್ನು ಹೊಂದಿದೆ. ಕೂದಲು ಉತ್ತಮಗೊಳಿಸಲು ಕಿವಿ ತುಂಬಾ ಒಳ್ಳೆಯದು. ಮಲಬದ್ಧತೆಯಿಂದ ಅನೇಕ ಸಮಸ್ಯೆಗಳನ್ನು ನಿವಾರಿಸುವ ಗುಣಗಳೂ ಕಿವಿಯಲ್ಲಿದೆ. ಈ ಹಣ್ಣಿನ ರಸವನ್ನು ತಲೆಗೆ ಹಚ್ಚುವುದರಿಂದ ಕಪ್ಪು ಹಾಗೂ ದಟ್ಟನೆಯ ಕೂದಲು ನಿಮ್ಮದಾಗುತ್ತದೆ.(REUTERS)

ಅಲೋವೆರಾ - ಅಲೋವೆರಾ ಜೆಲ್ ಚರ್ಮ ಮತ್ತು ಕೂದಲಿಗೆ ಒಳ್ಳೆಯದು. ಅದರಲ್ಲಿರುವ ವಿಟಮಿನ್‌ಗಳು ಕೂದಲನ್ನು ಗಟ್ಟಿಯಾಗಿಸುತ್ತದೆ. ಇದು ಕೂದಲು ಉದುರುವಿಕೆಯ ಸಮಸ್ಯೆಯನ್ನು ಪರಿಹರಿಸುತ್ತದೆ. ಅಲ್ಲದೆ ತಲೆಹೊಟ್ಟು ಸಮಸ್ಯೆಯೂ ದೂರವಾಗುತ್ತದೆ. ತಾಜಾ ಅಲೋವೆರಾವನ್ನು ಕೂದಲಿಗೆ ಹಚ್ಚುವುದು ತುಂಬಾ ಪ್ರಯೋಜನಕಾರಿ.
icon

(5 / 7)

ನೆಲ್ಲಿಕಾಯಿ ಜ್ಯೂಸ್ - ಕೂದಲು ದಪ್ಪವಾಗಲು ನೆಲ್ಲಿಕಾಯಿ ಜ್ಯೂಸ್ ತುಂಬಾ ಸಹಕಾರಿ. ವಿಟಮಿನ್ ಸಿ ಸಮೃದ್ಧವಾಗಿರುವ ಈ ರಸವನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಹಾಗೆಯೇ ಎಣ್ಣೆಯಲ್ಲಿ ಕೆಲವು ಹನಿ ರಸವನ್ನು ನೆಲ್ಲಿಕಾಯಿ ಬೆರೆಸಿ ಕೂದಲಿಗೆ ಹಚ್ಚಿ. ಹೀಗೆ ಮಾಡುವುದರಿಂದ ಕೂದಲು ಸುಂದರವಾಗುತ್ತದೆ.
icon

(6 / 7)

ಪೇರಲೆ ರಸ - ಪೇರಲೆ ಹಣ್ಣು ಕ್ಯಾಲ್ಸಿಯಂ, ಕಬ್ಬಿಣ, ಫೋಲಿಕ್ ಆಮ್ಲದಂತಹ ವಿವಿಧ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ತಿನ್ನುವುದರಿಂದ ದೇಹದ ಆರೋಗ್ಯ ಸುಧಾರಿಸುತ್ತದೆ ಮತ್ತು ಕೂದಲು ಉದುರುವುದು ನಿಲ್ಲುತ್ತದೆ.
icon

(7 / 7)

IPL_Entry_Point

ಇತರ ಗ್ಯಾಲರಿಗಳು