ಬಿಸಿ ನೀರಿನೊಂದಿಗೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ? ಆಯುರ್ವೇದ ಏನು ಹೇಳುತ್ತೆ ನೋಡಿ
Drinking honey mixed with hot water: ಬಿಸಿ ನೀರಿನೊಂದಿಗೆ ಜೇನುತುಪ್ಪವನ್ನು ಸೇವಿಸುವುದರಿಂದ ಉಂಟಾಗುವ ಅಡ್ಡಪರಿಣಾಮಗಳು ಏನು ಎಂಬುದನ್ನು ನಾವಿಲ್ಲಿ ತಿಳಿಯೋಣ
(1 / 9)
ಜೇನುತುಪ್ಪವನ್ನು ಬಿಸಿ ಮಾಡುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಇಲ್ಲಿದೆ ಗಮನಿಸಿ. ಇಷ್ಟು ದಿನ ನೀವು ಅಂದುಕೊಂಡಿದ್ದು ಸರಿಯೇ? ಅಥವಾ ತಪ್ಪೇ? ಇಲ್ಲಿದೆ ಉತ್ತರ. (shutterstock)
(2 / 9)
ಆಯುರ್ವೇದ ಏನು ಹೇಳುತ್ತದೆ? - ಬಿಸಿ ನೀರಿನೊಂದಿಗೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ? ಅಥವಾ ಪ್ರಯೋಜನ ಆಗುತ್ತಾ ಎಂದು ಪರಿಶೀಲಿಸಲು ನೀವು ಸಂಪೂರ್ಣ ಓದಿ. ಆಯುರ್ವೇದದ ಪ್ರಕಾರ, ಜೇನುತುಪ್ಪವನ್ನು ಬಿಸಿ ಪದಾರ್ಥಗಳೊಂದಿಗೆ ಬೆರೆಸಿ ಅಥವಾ ಬಿಸಿ ಮಾಡಿದ ನಂತರ ತಿನ್ನುವುದು ಸ್ಲೋ ಪಾಯ್ಸನ್ ಇದ್ದಂತೆ(shutterstock)
(3 / 9)
ಬಿಸಿ ನೀರಿನೊಂದಿಗೆ ಜೇನುತುಪ್ಪವನ್ನು ಸೇವಿಸುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು: ಜೇನುತುಪ್ಪವು ವಿಟಮಿನ್‌ಗಳು, ಖನಿಜಗಳು, ಕಿಣ್ವಗಳು ಇವುಗಳೆಲ್ಲವನ್ನೂ ಹೊಂದಿರುತ್ತದೆ. ಅಮೈನೋ ಆಮ್ಲಗಳು, ಫ್ಲೇವನಾಯ್ಡ್‌ಗಳು ಮುಂತಾದ ಅನೇಕ ಗುಣಗಳನ್ನು ಹೊಂದಿದೆ, ಇದು ಬಿಸಿ ಪದಾರ್ಥಗಳೊಂದಿಗೆ ಬೆರೆಸಿದಾಗ ಅದರ ಪೋಷಕಾಂಶಗಳನ್ನು ಕಡಿಮೆ ಆಗುತ್ತದೆ. (shutterstock)
(4 / 9)
ಜೇನುತುಪ್ಪವನ್ನು ಬಿಸಿ ಮಾಡಿದಾಗ ಪೋಷಕಾಂಶಗಳು ಕಡಿಮೆಯಾಗುತ್ತವೆ. ನ್ಯಾಷನಲ್ ಸೆಂಟರ್ ಆಫ್ ಬಯೋಟೆಕ್ನಾಲಜಿ ಮಾಹಿತಿಯ ವರದಿಯ ಪ್ರಕಾರ, ಜೇನುತುಪ್ಪವನ್ನು 60 ರಿಂದ 140 ಡಿಗ್ರಿ ಸೆಲ್ಸಿಯಸ್ ನಡುವೆ ಬಿಸಿಮಾಡಿದರೆ, ಅದು ಕಂದು ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ,(shutterstock)
(5 / 9)
ನ್ಯಾಷನಲ್ ಸೆಂಟರ್ ಆಫ್ ಬಯೋಟೆಕ್ನಾಲಜಿ ಮಾಹಿತಿಯ ವರದಿಯ ಪ್ರಕಾರ ಜೇನುತುಪ್ಪವನ್ನು ಬಿಸಿ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. (shutterstock)
(6 / 9)
ಜೇನುತುಪ್ಪವನ್ನು 60 ಡಿಗ್ರಿ ಮತ್ತು 140 ಡಿಗ್ರಿಗಳಲ್ಲಿ ಬಿಸಿ ಮಾಡಿದಾಗ ಫರ್ಫುರಾಲ್ಡಿಹೈಡ್ ಎಂಬ ಸಂಯುಕ್ತ ಅಧಿಕವಾಗಿ ಕಂಡುಬರುತ್ತದೆ. (shutterstock)
(7 / 9)
ತುಪ್ಪ ಮತ್ತು ಜೇನುತುಪ್ಪವನ್ನು ಸಮಾನ ಪ್ರಮಾಣದಲ್ಲಿ ಸೇವಿಸುವುದರಿಂದ ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಎಂಬ ವಸ್ತುವು ದೇಹದಲ್ಲಿ ವೇಗವಾಗಿ ಹರಡಲು ಕಾರಣವಾಗುತ್ತದೆ, ಇದರಿಂದಾಗಿ ವ್ಯಕ್ತಿಯು ಉಸಿರಾಟದ ತೊಂದರೆ ಮತ್ತು ಹೊಟ್ಟೆ ನೋವು ಬರಬಹುದು. (shutterstock)
(8 / 9)
ಜೇನುತುಪ್ಪವನ್ನು ತಿನ್ನಲು ಸರಿಯಾದ ಮಾರ್ಗ ಯಾವುದು? - ಸಿನೀರನ್ನು ಸ್ವಲ್ಪ ಉಗುರುಬೆಚ್ಚಗಾಗಿಸಿ ಅದಕ್ಕೆ ಜೇನುತುಪ್ಪ ಸೇರಿಸಿ ಕುಡಿಯಬಹುದು. ಸಾಮಾನ್ಯವಾಗಿ, 70 ಕೆಜಿ ತೂಕದ ವ್ಯಕ್ತಿಯು ದಿನಕ್ಕೆ ಗರಿಷ್ಠ 30 ರಿಂದ 45 ಗ್ರಾಂ ಜೇನುತುಪ್ಪವನ್ನು ಸೇವಿಸಬೇಕು. (shutterstock)
ಇತರ ಗ್ಯಾಲರಿಗಳು