ಹಳೆಯ ಮಾದರಿಗೆ ಮರಳಲಿದೆ ದುಲೀಪ್ ಟ್ರೋಫಿ; ಮಹಿಳಾ ಏಕದಿನ ವಿಶ್ವಕಪ್ಗೆ ಸ್ಥಳಗಳು ಅಂತಿಮ
- Duleep Trophy: ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯನ್ನು ಮತ್ತೆ ಸಾಂಪ್ರದಾಯಿಕ ವಲಯವಾರು ಮಾದರಿಗೆ ಬದಲಾಯಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನಿಸಿದೆ.
- Duleep Trophy: ದುಲೀಪ್ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯನ್ನು ಮತ್ತೆ ಸಾಂಪ್ರದಾಯಿಕ ವಲಯವಾರು ಮಾದರಿಗೆ ಬದಲಾಯಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತೀರ್ಮಾನಿಸಿದೆ.
(1 / 5)
ದುಲೀಪ್ ಟ್ರೋಫಿ ಹಳೆಯ ವ್ಯವಸ್ಥೆಗೆ ಮರಳಲಿದೆ. ಭಾರತೀಯ ಕ್ರಿಕೆಟ್ನ ಈ ಸಾಂಪ್ರದಾಯಿಕ ಸ್ಪರ್ಧೆಯು ಮೊದಲಿನಂತೆ ಅಂತರ-ವಲಯ ಸ್ವರೂಪದಲ್ಲಿ ಆರು ತಂಡಗಳೊಂದಿಗೆ ನಡೆಯಲಿದೆ. ಈ ವರ್ಷದ ಸೆಪ್ಟೆಂಬರ್ನಲ್ಲಿ ಬೆಂಗಳೂರಿನಲ್ಲಿ ಟೂರ್ನಿ ಆರಂಭವಾಗಲಿದೆ. ಪ್ರಸ್ತುತ 4 ತಂಡಗಳ ನಡುವೆ ಮಾತ್ರ ಈ ಸ್ಪರ್ಧೆ ನಡೆಯುತ್ತಿತ್ತು. ಈ ಬಗ್ಗೆ ರಾಜ್ಯ ಸಂಘಗಳು ಅತೃಪ್ತಿ ವ್ಯಕ್ತಪಡಿಸಿದ್ದವು.
(2 / 5)
ಈ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ದುಲೀಪ್ ಟ್ರೋಫಿಯಲ್ಲಿ ಒಟ್ಟು ಆರು ತಂಡಗಳು ಆಡಲಿವೆ. ಉತ್ತರ ವಲಯ, ಪೂರ್ವ ವಲಯ, ಪಶ್ಚಿಮ ವಲಯ, ದಕ್ಷಿಣ ವಲಯ, ಕೇಂದ್ರ ವಲಯ ಮತ್ತು ಈಶಾನ್ಯ ವಲಯ ತಂಡಗಳು ಈ ಸಲ ಭಾಗವಹಿಸಲಿವೆ. ಕಳೆದ ವರ್ಷ 4 ತಂಡಗಳೊಂದಿಗೆ ಸ್ಪರ್ಧೆ ನಡೆದಿತ್ತು. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹೊರತುಪಡಿಸಿ ಭಾರತ ತಂಡದ ಎಲ್ಲಾ ಸ್ಟಾರ್ ಕ್ರಿಕೆಟಿಗರು ಅಲ್ಲಿ ಆಡಿದ್ದರು.
(3 / 5)
ಮಯಾಂಕ್ ಅಗರ್ವಾಲ್ ನೇತೃತ್ವದ ಭಾರತ ಎ ತಂಡವು 2024 ರ ದುಲೀಪ್ ಟ್ರೋಫಿಯ ಚಾಂಪಿಯನ್ ಆಯಿತು. ಶಶತ್ ರಾವತ್ ಅವರ ಶತಕ ಮತ್ತು ಅಕಿಬ್ ಖಾನ್ ಅವರ ವೇಗದ ಬೌಲಿಂಗ್‌ನಿಂದ ಭಾರತ ಎ ತಂಡವು ಋತುರಾಜ್ ಗಾಯಕ್ವಾಡ್ ಮತ್ತು ಇಶಾನ್ ಕಿಶನ್ ಅವರ ಭಾರತ ಸಿ ತಂಡದ ವಿರುದ್ಧ ಗೆದ್ದು ಬೀಗಿತ್ತು.
(4 / 5)
ಭಾರತ ತಂಡದಲ್ಲೇ ನಡೆಯಲಿರುವ ಮಹಿಳಾ ವಿಶ್ವಕಪ್ಗೂ ಬಿಸಿಸಿಐ ಸ್ಥಳಗಳನ್ನು ಶಾರ್ಟ್ಲಿಸ್ಟ್ ಮಾಡಿದೆ. ಈ ವರ್ಷದ ಸೆಪ್ಟೆಂಬರ್ನಲ್ಲಿ ಭಾರತದಲ್ಲಿ ವಿಶ್ವಕಪ್ ನಡೆಯಲಿದೆ. ಎಂಟು ತಂಡಗಳ ನಡುವಿನ ಸ್ಪರ್ಧೆ ನವೆಂಬರ್ ಮೊದಲ ವಾರದ ತನಕ ಜರುಗಲಿದೆ.
(REUTERS)(5 / 5)
ಕ್ರಿಕ್ಬಝ್ ವರದಿಯ ಪ್ರಕಾರ, ಮಹಿಳಾ ವಿಶ್ವಕಪ್ ಐದು ಸ್ಥಳಗಳಲ್ಲಿ ನಡೆಯಲಿದೆ. ಅವುಗಳೆಂದರೆ ಇಂದೋರ್, ವಿಶಾಖಪಟ್ಟಣಂ, ತಿರುವನಂತಪುರಂ, ಗುವಾಹಟಿ ಮತ್ತು ಮುಲ್ಲನ್ಪುರ್. ಪಾಕಿಸ್ತಾನ ಮಹಿಳಾ ತಂಡವು ಪಂದ್ಯಾವಳಿಗೆ ಅರ್ಹತೆ ಪಡೆದರೆ, 6ನೇ ಸ್ಥಳವನ್ನು ಆಯ್ಕೆ ಮಾಡಲಾಗುತ್ತದೆ. ಆ ಸಂದರ್ಭದಲ್ಲಿ ಪಾಕಿಸ್ತಾನದ ಪಂದ್ಯವು ತಟಸ್ಥ ಸ್ಥಳದಲ್ಲಿ ನಡೆಯಲಿದೆ. ಮಹಿಳಾ ವಿಶ್ವಕಪ್ ಪಂದ್ಯದ ಹೊರತಾಗಿ, ಈ ವರ್ಷ ಗುವಾಹಟಿಯಲ್ಲಿ ಮೊದಲ ಟೆಸ್ಟ್ ಪಂದ್ಯವೂ ನಡೆಯಲಿದ್ದು, ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು ಮುಖಾಮುಖಿಯಾಗಲಿವೆ.
(AP)ಇತರ ಗ್ಯಾಲರಿಗಳು