ಕನ್ನಡ ಸುದ್ದಿ  /  Photo Gallery  /  Earthquake Death Toll Across Turkey-syria Crosses 34,000

Turkey-Syria Earthquake: ಟರ್ಕಿ-ಸಿರಿಯಾ ಭೂಕಂಪ: ಮೃತರ ಸಂಖ್ಯೆ 34,000ಕ್ಕೆ ಏರಿಕೆ.. ಪವಾಡವೆಂಬಂತೆ ಬದುಕುಳಿದ ಕಂದಮ್ಮಗಳು

  • ಭೂಕಂಪದಲ್ಲಿ ತತ್ತರಿಸಿರುವ ಟರ್ಕಿ -ಸಿರಿಯಾದಲ್ಲಿ ಮೃತರ ಸಂಖ್ಯೆ 34,000ಕ್ಕೆ ಏರಿಕೆಯಾಗಿದೆ. ಟರ್ಕಿಯಲ್ಲೇ 29,605 ಜನರು ಬಲಿಯಾಗಿದ್ದಾರೆ. ಸಿರಿಯಾದಲ್ಲಿ 4, 574 ಮಂದಿ ಸಾವನ್ನಪ್ಪಿದ್ದಾರೆ. ಆರು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಅವಶೇಷಗಳಡಿ ಇನ್ನೂ ಸಾವಿರಾರು ಮಂದಿ ಸಿಲುಕಿದ್ದು, ಬದುಕುಳಿದವರನ್ನು ರಕ್ಷಿಸುವ ಹಾಗೂ ಮೃತದೇಹಗಳನ್ನು ಹೊರಕ್ಕೆ ತೆಗೆಯುವ ಕಾರ್ಯ ನಡೆಯುತ್ತಿದೆ.

ಭೀಕರ ಭೂಕಂಪಕ್ಕೆ ಟರ್ಕಿ ಮತ್ತು ಸಿರಿಯಾ ರಾಷ್ಟ್ರಗಳು ಅಕ್ಷರಶಃ ನಲುಗಿವೆ. ಕಟ್ಟಡಗಳು ನೆಲಕಚ್ಚಿವೆ. ದಿನದಿನಕ್ಕೂ ಸಾವಿರಾರು ಮೃತದೇಹಗಳು ಅವಶೇಷಗಳಡಿ ಸಿಗುತ್ತಿವೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹಾಗೂ ಅಧಿಕಾರಿಗಳ ತಂಡವು ಸಿರಿಯಾದ ಅಲೆಪ್ಪೊಗೆ ಬಂದಿದ್ದು, ಶೀಘ್ರದಲ್ಲೇ ಬಂಡುಕೋರರ ಹಿಡಿತದಲ್ಲಿರುವ ಭೂಕಂಪ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. 
icon

(1 / 5)

ಈವರೆಗೆ 34,000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಟರ್ಕಿಯಲ್ಲೇ 29,605 ಜನರು ಬಲಿಯಾಗಿದ್ದಾರೆ. ಸಿರಿಯಾದಲ್ಲಿ 4, 574 ಮಂದಿ ಸಾವನ್ನಪ್ಪಿದ್ದಾರೆ. ಈ ಪೈಕಿ ಬಂಡುಕೋರರ ಹಿಡಿತದಲ್ಲಿರುವ ಸಿರಿಯಾದ ಪ್ರದೇಶದಲ್ಲಿ 3,160 ಹಾಗೂ ಸರ್ಕಾರದ ಆಡಳಿತವಿರುವ ಪ್ರದೇಶದಲ್ಲಿ 1,414 ಮಂದಿ ಮೃತಪಟ್ಟಿದ್ದಾರೆ.   
icon

(2 / 5)

ಪ್ರತಿಕೂಲ ವಾತಾವರಣದ ನಡುವೆಯೂ ಆರು ದಿನಗಳಿಂದ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬದುಕುಳಿದವರನ್ನು ರಕ್ಷಿಸುವ ಹಾಗೂ ಮೃತದೇಹಗಳನ್ನು ಹೊರಕ್ಕೆ ತೆಗೆಯುವ ಕಾರ್ಯ ನಡೆಯುತ್ತಿದೆ. 
icon

(3 / 5)

ಪವಾಡವೇ ಎಂಬಂತೆ ಅವಶೇಷಗಳಡಿ ಸಿಲುಕಿ, ಊಟ-ನೀರು ಇಲ್ಲದೆಯೇ ಪುಟ್ಟ ಕಂದಮ್ಮಗಳು ಬದುಕುಳಿದಿವೆ. ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗುತ್ತಿವೆ. 
icon

(4 / 5)

ಟರ್ಕಿಗೆ ಭೇಟಿ ನೀಡಿರುವ ವಿಶ್ವಸಂಸ್ಥೆಯ (ಯುಎನ್) ಮಾನವೀಯ ನೆರವು ವಿಭಾಗದ ಮುಖ್ಯಸ್ಥ ಮಾರ್ಟಿನ್ ಗ್ರಿಫಿತ್ಸ್‌ ಅವರು, ಸಾವಿನ ಸಂಖ್ಯೆ 50,000 ಗಡಿ ದಾಟುವ ಸಾಧ್ಯತೆಯಿದೆ. ಖಂಡಿತವಾಗಿಯೂ ಸಾವಿನ ಸಂಖ್ಯೆ ದ್ವಿಗುಣಗೊಳ್ಳುತ್ತದೆ ಅಥವಾ ಅದಕ್ಕಿಂತಲೂ ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ. 
icon

(5 / 5)

IPL_Entry_Point

ಇತರ ಗ್ಯಾಲರಿಗಳು