ಕೋಚಿಂಗ್ ಪಡೆಯದೆ 2ನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್; ಐಪಿಎಸ್ ಅಂಶಿಕಾ ವರ್ಮಾ ಯಶಸ್ಸಿನ ಕಥೆ
- ಐಪಿಎಸ್ ಅಧಿಕಾರಿ ಅಂಶಿಕಾ ವರ್ಮಾ ಅವರ ಯಶಸ್ಸಿನ ಕಥೆ ಇದು. ಯಾವುದೇ ಕೋಚಿಂಗ್ ತೆಗೆದುಕೊಳ್ಳದೆ ಯುಪಿಎಸ್‌ಸಿ ಪರೀಕ್ಷೆ ಬರೆದು, ತಮ್ಮ ಎರಡನೇ ಪ್ರಯತ್ನದಲ್ಲಿ ನಾಗರಿಕ ಸೇವೆಗಳ ಪರೀಕ್ಷೆ ಬರೆದು 2020ರಲ್ಲಿ ಭಾರತದಲ್ಲಿ 136ನೇ ರ‍್ಯಾಂಕ್ ಗಳಿಸಿದ್ದಾರೆ. ಐಪಿಎಸ್ ಅಂಶಿಕಾ ವರ್ಮಾ ಅವರ ಸ್ಪೂರ್ತಿದಾಯಕ ಕಥೆಯನ್ನು ತಿಳಿಯಿರಿ.
- ಐಪಿಎಸ್ ಅಧಿಕಾರಿ ಅಂಶಿಕಾ ವರ್ಮಾ ಅವರ ಯಶಸ್ಸಿನ ಕಥೆ ಇದು. ಯಾವುದೇ ಕೋಚಿಂಗ್ ತೆಗೆದುಕೊಳ್ಳದೆ ಯುಪಿಎಸ್‌ಸಿ ಪರೀಕ್ಷೆ ಬರೆದು, ತಮ್ಮ ಎರಡನೇ ಪ್ರಯತ್ನದಲ್ಲಿ ನಾಗರಿಕ ಸೇವೆಗಳ ಪರೀಕ್ಷೆ ಬರೆದು 2020ರಲ್ಲಿ ಭಾರತದಲ್ಲಿ 136ನೇ ರ‍್ಯಾಂಕ್ ಗಳಿಸಿದ್ದಾರೆ. ಐಪಿಎಸ್ ಅಂಶಿಕಾ ವರ್ಮಾ ಅವರ ಸ್ಪೂರ್ತಿದಾಯಕ ಕಥೆಯನ್ನು ತಿಳಿಯಿರಿ.
(1 / 7)
ಐಪಿಎಸ್ ಅಂಶಿಕಾ ವರ್ಮಾ: ಯಶಸ್ಸು ಒಂದೇ ದಿನದಲ್ಲಿ ಸಿಗುವ ಸ್ವತ್ತು ಅಲ್ಲ. ಆದರೆ ದೃಢನಿಶ್ಚಯವಿದ್ದರೆ ಮುಂದೊಂದು ದಿನ ಖಂಡಿತಾ ಸಿಗುತ್ತದೆ." ಇದು ಅಂಶಿಕಾ ಅವರ ಮಾತು. ಯುಪಿಎಸ್‌ಸಿ ಪರೀಕ್ಷೆ ನಮ್ಮ ದೇಶದ ಅತ್ಯಂತ ದೊಡ್ಡ ಮತ್ತು ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ತುಂಬಾ ಕಷ್ಟ. ಅನೇಕ ಜನರು, ಒಮ್ಮೆ ಪ್ರಯತ್ನಿಸಿ ವಿಫಲರಾದಾಗ ಧೈರ್ಯ ಕಳೆದುಕೊಳ್ಳುತ್ತಾರೆ. ಎರಡನೇ ಬಾರಿಗೆ ಪ್ರಯತ್ನ ಮಾಡದೆ ತಮ್ಮ ಕನಸನ್ನು ಅಪೂರ್ಣವಾಗಿ ಬಿಡುತ್ತಾರೆ. ಆದರೆ ಕೊನೆಯವರೆಗೂ ದೃಢವಾಗಿ ನಿಲ್ಲುವವನು ಮಾತ್ರ ಗೆಲುವು ಕಾಣುತ್ತಾನೆ.
(Instagram Pic Credit- anshikaverma.ips)(2 / 7)
ಯುಪಿಎಸ್‌ಸಿ 2020: ಅಖಿಲ ಭಾರತಕ್ಕೆ 136ನೇ ರ‍್ಯಾಂಕ್: ಐಪಿಎಸ್ ಅಂಶಿಕಾ ವರ್ಮಾ ಉತ್ತರ ಪ್ರದೇಶದ ಪ್ರಯಾಗರಾಜ್ ನಿವಾಸಿ. ಅವರು ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2020ರಲ್ಲಿ ಅಖಿಲ ಭಾರತ ಮಟ್ಟದಲ್ಲಿ 136 ನೇ ರ‍್ಯಾಂಕ್ ಗಳಿಸಿದರು.
(Instagram Pic Credit- anshikaverma.ips)(3 / 7)
ಐಪಿಎಸ್ ಅಂಶಿಕಾ ವರ್ಮಾ ಪ್ರಸ್ತುತ ಬರೇಲಿ ದಕ್ಷಿಣದ ಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
(Instagram Pic Credit- anshikaverma.ips)(4 / 7)
ಪೋಷಕರ ಬೆಂಬಲ: ಅಂಶಿಕಾ ವರ್ಮಾ 1996 ರಲ್ಲಿ ಜನಿಸಿದರು. ಅವರ ತಂದೆ ಉತ್ತರ ಪ್ರದೇಶ ವಿದ್ಯುತ್ ನಿಗಮ ಲಿಮಿಟೆಡ್ (ಯುಪಿಇಎಲ್) ನಿವೃತ್ತ ಅಧಿಕಾರಿ. ತಾಯಿ ಗೃಹಿಣಿ. ಯುಪಿಎಸ್‌ಸಿಗೆ ತಯಾರಿ ನಡೆಸುವಾಗ ಅವನ ಹೆತ್ತವರು ನಿರಂತರವಾಗಿ ಬೆಂಬಲ ನೀಡಿ ಪ್ರೋತ್ಸಾಹಿಸಿದ್ದರಂತೆ.
(Instagram Pic Credit- anshikaverma.ips)(5 / 7)
ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್: ಅಂಶಿಕಾ ವರ್ಮಾ ತಮ್ಮ ಶಾಲಾ ಶಿಕ್ಷಣವನ್ನು ನೋಯ್ಡಾದಲ್ಲಿ ಪೂರ್ಣಗೊಳಿಸಿದ್ದಾರೆ. 2014ರಿಂದ 2018 ರವರೆಗೆ ನೋಯ್ಡಾದ ಗಾಲ್ಗೋಟಿಯಾಸ್ ಕಾಲೇಜ್ ಆಫ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದರು.
(Instagram Pic Credit- anshikaverma.ips)(6 / 7)
ಎರಡನೇ ಪ್ರಯತ್ನದಲ್ಲಿ ಉತ್ತೀರ್ಣ: ಐಪಿಎಸ್ ಅಂಶಿಕಾ ವರ್ಮಾ ಬಿ.ಟೆಕ್ ಮುಗಿದ ತಕ್ಷಣ ಯುಪಿಎಸ್‌ಸಿಗೆ ತಯಾರಿ ಆರಂಭಿಸಿದರು. ಯಾವುದೇ ತರಬೇತಿ ಇಲ್ಲದೆ ಅವರು ಯುಪಿಎಸ್‌ಸಿಗೆ ತಯಾರಿ ನಡೆಸಿದ್ದರು. 2019ರಲ್ಲಿ, ಅವರು ಮೊದಲ ಪ್ರಯತ್ನ ಮಾಡಿ ವಿಫಲರಾದರು. ಹಾಗಂತಾ ಹಿಂದೆ ಸರಿಯಲಿಲ್ಲ. 2020ರಲ್ಲಿ ಮತ್ತೆ ಪರೀಕ್ಷೆ ಬರೆದು 136 ನೇ ಶ್ರೇಯಾಂಕ ಪಡೆದರು.
(Instagram Pic Credit- anshikaverma.ips)ಇತರ ಗ್ಯಾಲರಿಗಳು