ಪ್ರತಿದಿನ ಆ ಒಂದು ಅಭ್ಯಾಸ ನನಗಿತ್ತು, 625ಕ್ಕೆ 625 ಅಂಕ ಪಡೆಯಲು ಸಾಧ್ಯವಾಯಿತು; ಎಸ್‌ಎಸ್‌ಎಲ್‌ಸಿ ಟಾಪರ್‌ ನಮಿತಾ ಸಾಧನೆಯ ಗುಟ್ಟು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪ್ರತಿದಿನ ಆ ಒಂದು ಅಭ್ಯಾಸ ನನಗಿತ್ತು, 625ಕ್ಕೆ 625 ಅಂಕ ಪಡೆಯಲು ಸಾಧ್ಯವಾಯಿತು; ಎಸ್‌ಎಸ್‌ಎಲ್‌ಸಿ ಟಾಪರ್‌ ನಮಿತಾ ಸಾಧನೆಯ ಗುಟ್ಟು

ಪ್ರತಿದಿನ ಆ ಒಂದು ಅಭ್ಯಾಸ ನನಗಿತ್ತು, 625ಕ್ಕೆ 625 ಅಂಕ ಪಡೆಯಲು ಸಾಧ್ಯವಾಯಿತು; ಎಸ್‌ಎಸ್‌ಎಲ್‌ಸಿ ಟಾಪರ್‌ ನಮಿತಾ ಸಾಧನೆಯ ಗುಟ್ಟು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ವರ್ಷ 22 ಜನರು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಇವರಲ್ಲಿ ಬೆಂಗಳೂರು ದಕ್ಷಿಣದ ಕಲ್ಯಾಣ ನಗರದಲ್ಲಿರುವ ಮಾತಾ ನ್ಯಾಷನಲ್‌ ಹೈಸ್ಕೂಲ್‌ ವಿದ್ಯಾರ್ಥಿನಿ ನಮಿತಾ ಕೂಡ ಒಬ್ಬರು. ಇವರ ಪ್ರತಿದಿನದ ಒಂದು ಅಭ್ಯಾಸ ಯಶಸ್ಸಿಗೆ ಪ್ರಮುಖ ಕಾರಣವಂತೆ.

ಎಸ್‌ಎಸ್‌ಎಲ್‌ಸಿಯಲ್ಲಿ ಟಾಪರ್‌ ಆಗುವುದು ಹೇಗೆ ಎಂದು ಸಾಕಷ್ಟು ವಿದ್ಯಾರ್ಥಿಗಳು ಆಲೋಚಿಸುತ್ತಿರಬಹುದು. ಬೆಂಗಳೂರು ದಕ್ಷಿಣದ ಕಲ್ಯಾಣ ನಗರದಲ್ಲಿರುವ ಮಾತಾ ನ್ಯಾಷನಲ್‌ ಹೈಸ್ಕೂಲ್‌ ವಿದ್ಯಾರ್ಥಿನಿ ನಮಿತಾ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ. ಈಕೆ ಹೇಗೆ ಸಾಧನೆ ಮಾಡುತ್ತಿದ್ದಳು, ಪ್ರತಿನಿತ್ಯ ಹೇಗೆ ಓದುತ್ತಿದ್ದಳು ಎಂದು ತಿಳಿದುಕೊಂಡರೆ ನಿಮಗೂ ಯಶಸ್ಸು ದೊರಕಬಹುದು.
icon

(1 / 11)

ಕಂಠಪಾಠ ಮಾಡಿಲ್ಲ: "ನಾನು ಎಲ್ಲಾ ವಿಷಯಗಳ ಎಲ್ಲಾ ಕಾನ್ಸೆಪ್ಟ್‌ಗಳನ್ನು ಅರ್ಥಮಾಡಿಕೊಂಡು ಓದುತ್ತಿದ್ದೆ. ಯಾವುದೇ ವಿಷಯವನ್ನು ಬೈಹರ್ಟ್‌ ಅಥವಾ ಕಂಠಪಾಠ ಮಾಡಿಲ್ಲ. ಶಾಲೆಯಲ್ಲಿ ಪ್ರತಿದಿನ ಏನು ಪಾಠ ಮಾಡುತ್ತಾರೋ ಅದನ್ನು ಅರ್ಥಮಾಡಿಕೊಳ್ಳುತ್ತಿದ್ದೆ. ಮನೆಗೆ ಬಂದು ಅದನ್ನೇ ಓದುತ್ತಿದ್ದೆ. ನಾನು ಹೆಚ್ಚು ಪಠ್ಯ ಪುಸ್ತಕವನ್ನೇ ಓದಿದ್ದೇನೆ. ಗೈಡ್‌ ಯಾವುದನ್ನೂ ರೆಫರ್‌ ಮಾಡಿಲ್ಲ. ಟ್ಯೂಷನ್‌ಗೆ ಹೋಗಿದ್ದೇನೆ. ಆರಂಭದಿಂದಲೇ ಟ್ಯೂಷನ್‌ ಪಡೆಯುತ್ತಿದ್ದೆ. ಬೆಳಗ್ಗೆ 5.30 ಗಂಟೆಯಿಂದ 7.30 ಗಂಟೆಯವರೆಗೆ ಓದುತ್ತಿದ್ದೆ" ಎಂದು ನಮಿತಾ ಹೇಳಿದ್ದಾರೆ.
icon

(2 / 11)

"ನಮ್ಮ ಹತ್ತನೇ ತರಗತಿ ಸಿಲೇಬಸ್‌ ಬೇಗ ಮುಗಿಸಿದ್ದರು. ಸುಮಾರು ಆರೇಳು ಬಾರಿ ರಿವಿಷನ್‌ ಮಾಡಲು ಅವಕಾಶ ದೊರಕಿತು. ಶಾಲೆಯಲ್ಲಿ ಹೆಚ್ಚು ರಿವಿಷನ್‌ ಮಾಡಿಸಿದ್ದಕ್ಕೆ ನನಗೆ ಎಕ್ಸಾಂ ಉತ್ತಮವಾಗಿ ಬರೆಯಲು ಸಹಾಯವಾಯಿತು" ಎಂದರು.
icon

(3 / 11)

"ಮಾತಾ ನ್ಯಾಷನಲ್‌ ಹೈಸ್ಕೂಲ್‌ನ ಟೀಚರ್ಸ್‌ ಸಪೋರ್ಟ್‌ ಉತ್ತಮವಾಗಿತ್ತು. ನಾನು ಡಿಮೋಟಿವೇಟ್‌ ಆದ್ರೆ - ನಿನ್ನಿಂದ ಆಗುತ್ತೆ, ಮಾಡುʼ ಎಂದು ಸ್ಪೂರ್ತಿ ತುಂಬುತ್ತಿದ್ದರು. ಏನು ಡೌಟ್‌ ಇದ್ರೂ, ಎಷ್ಟು ಬಾರಿ ಕೇಳಿದ್ರೂ ಪ್ರೀತಿಯಿಂದ ಸಾವಧಾನವಾಗಿ ಹೇಳಿಕೊಡುತ್ತಿದ್ದರು. ಇದು ಕೂಡ ನನ್ನ ಯಶಸ್ಸಿಗೆ ಕಾರಣವಾಯಿತು" ಎಂದು ನಮಿತಾ ಹೇಳಿದ್ದಾರೆ.
icon

(4 / 11)

"ಮನೆಯಲ್ಲಿಯೂ ನನಗೆ ಪರೀಕ್ಷೆ ಉತ್ತಮವಾಗಿ ಬರೆಯಲು ಹೆತ್ತವರ ಭಾವನಾತ್ಮಕ ಬೆಂಬಲ ಕಾರಣವಾಯಿತು. ನನಗೆ ಎಂದಿಗೂ ಓದು ಓದು ಎಂದು ಒತ್ತಡ ಹಾಕಲಿಲ್ಲ. ನಿನ್ನ ಕೈಯಲ್ಲಿ ಎಷ್ಟಾಗುತ್ತೆ ಅಷ್ಟು ಮಾಡು ಎನ್ನುತ್ತಿದ್ದರು" ಎಂದು ತಂದೆ ಬಸವಂತ ರಾವ್‌ ಮತ್ತು ಅಮ್ಮ ಸೀಮಾ ಎಲ್‌ಬಿ ಬೆಂಬಲವನ್ನೂ ನಮಿತಾ ನೆನಪಿಸಿಕೊಂಡರು. ಇವರ ತಾಯಿ ಸೀಮಾ ಎಲ್‌ಬಿ ಅವರು ಅಸಿಸ್ಟೆಂಟ್‌ ಟೀಚರ್‌ ಮತ್ತು ತಂದೆ ಬೆಸ್ಕಾಂನಲ್ಲಿ ಜೆಇ ಆಗಿದ್ದಾರೆ.
icon

(5 / 11)

"ಶಾಲೆಯಲ್ಲಿ ಸಾಕಷ್ಟು ಬಾರಿ ಮಾಕ್‌ ಟೆಸ್ಟ್‌ ಮಾಡಿಸಿದ್ರು. ಟೆಸ್ಟ್‌ ಪರೀಕ್ಷೆ ಬರೆಸಿದ್ರು. ಹಲವು ಬಾರಿ ಪ್ರಿಪರೇಟರಿ ಬರೆಸಿದ್ರು. ಇವೆಲ್ಲ ನನಗೆ ಪರೀಕ್ಷೆಯಲ್ಲಿ ಟಾಪರ್‌ ಆಗಲು ನೆರವಾಯಿತು. ನನಗೆ 625ಕ್ಕೆ 625 ಅಂಕ ಪಡೆಯುವ ಕುರಿತು ನಿರೀಕ್ಷೆ ಇತ್ತು. ಎಲ್ಲೋ ಒಂದೆರಡು ಅಂಕ ಕಡಿಮೆಯಾಗಬಹುದೋ ಎಂಬ ಆತಂಕವೂ ಇತ್ತು. ನಾನು ಎಲ್ಲವನ್ನೂ ಸರಿಯಾಗಿಯೇ ಬರೆದಿದ್ದೆ. ಆದರೂ ಮನಸ್ಸಿನಲ್ಲಿ ಭಯ ಇತ್ತು. ಆದರೆ, ಔಟ್‌ ಆಫ್‌ ಔಟ್‌ ಅಂಕ ಬಂದಾಗ ಖುಷಿಯಾಯ್ತು"  ಎಂದು  ನಮಿತಾ ಹೇಳಿದ್ದಾರೆ.
icon

(6 / 11)

"ಪರೀಕ್ಷೆ ಹತ್ತಿರವಿದ್ದಾಗ ರಿವಿಷನ್‌ ಮಾಡುತ್ತ ಇದ್ದೆ. ಆರಂಭದಿಂದಲೇ ಓದುತ್ತಾ ಇದ್ದರಿಂದ ನನಗೆ ಕೊನೆಯ ಕ್ಷಣದಲ್ಲಿ ಯಾವುದೇ ಒತ್ತಡ ಇರಲಿಲ್ಲ. ನಾನು ಯೂಟ್ಯೂಬ್‌, ಗೂಗಲ್‌ ಇತ್ಯಾದಿಗಳನ್ನು ಕಲಿಕೆಗೆ ಬಳಸಿಲ್ಲ. ಏಕೆಂದರೆ, ಓದಿನ ವಿಷಯದಲ್ಲಿ ಏನೇ ಸಂದೇಹವಿದ್ದರೂ ಶಾಲೆಯಲ್ಲಿ ಟೀಚರ್ಸ್‌ ಕ್ಲಿಯರ್‌ ಮಾಡುತ್ತಿದ್ದರು" ಎಂದು ನಮಿತಾ ತನ್ನ ಓದಿನ ಕ್ರಮದ ಕುರಿತು ವಿವರಿಸಿದ್ದಾರೆ.
icon

(7 / 11)

ಇದರೊಂದಿಗೆ ಈಕೆ ಪ್ರತಿನಿತ್ಯ ಅನುಸರಿಸುತ್ತಿದ್ದ ಒಂದು ಕ್ರಮ ಈಕೆಯ ಯಶಸ್ಸಿಗೆ ಪ್ರಮುಖ ಕಾರಣವಂತೆ. ಪ್ರತಿದಿನ ಆ ಒಂದು ಅಭ್ಯಾಸ ನನಗಿತ್ತು ಎಂದು ಈಕೆ ಹೇಳಿದ್ದಾರೆ. ಅದೇನೆಂದು ತಿಳಿಯೋಣ.
icon

(8 / 11)

"ಪ್ರತಿನಿತ್ಯ ಟೈಂಟೇಬಲ್‌ ಹಾಕಿಕೊಂಡು ಓದುವ ಅಭ್ಯಾಸ ಹೊಂದಿಲ್ಲ. ಆದರೆ, ಪ್ರತಿದಿನ ಎರಡು ಗಂಟೆ ಓದುವ ಅಭ್ಯಾಸವನ್ನು ಹತ್ತನೇ ತರಗತಿ ಆರಂಭದಿಂದಲೂ ಬೆಳೆಸಿಕೊಂಡು ಬಂದಿದ್ದೇನೆ. ಯಾವಾಗ ಸಮಯ ಸಿಗುತ್ತದೆಯೋ ಅವಾಗ ಓದುತ್ತಿದ್ದೆ. ದಿನ ಒಂದರಿಂದ ನಾನು ಪ್ರಿಪೇರ್‌ ಆಗುತ್ತಾ ಬಂದಿರುವುದಕ್ಕೆ ನನಗೆ ಪರೀಕ್ಷೆ ಸಮಯದಲ್ಲಿ ಯಾವುದೇ ಹೊರೆ, ಬರ್ಡನ್‌ ಆಗಲಿಲ್ಲ" ಎಂದು ನಮಿತಾ ಹೇಳಿದ್ದಾರೆ. ಈ ಮೂಲಕ ಪರೀಕ್ಷೆ ಹತ್ತಿರವಿರುವಾಗ ಓದುವ ಬದಲು ಶಾಲೆಯ ಆರಂಭದ ದಿನದಿಂದಲೂ ಓದುತ್ತಾ ಬನ್ನಿ, ಯಶಸ್ಸು ನಿಮ್ಮದಾಗುತ್ತದೆ ಎಂದು ನಮಿತಾ ಹೇಳಿದ್ದಾರೆ. ಈ ಓದುವ ಕ್ರಮವನ್ನು ಹೆಚ್ಚು ಅಂಕ ಪಡೆಯಲು ಬಯಸುವ ವಿದ್ಯಾರ್ಥಿಗಳು ಫಾಲೋ ಮಾಡಬಹುದು.
icon

(9 / 11)

ಭವಿಷ್ಯದಲ್ಲಿ ಕಾಮರ್ಸ್‌ ಓದಿ ಕಂಪೆನಿ ಸೆಕ್ರೆಟರಿ ಆಗಬೇಕೆಂದುಕೊಂಡಿದ್ದೇನೆ. ಇದು ಮುಂಚಿನಿಂದಲೂ ಇದ್ದ ಕನಸು. ಎಲ್ಲರೂ ಡಾಕ್ಟರ್‌, ಎಂಜಿನಿಯರ್‌, ಸಿಎ ಆಗಲು ಬಯಸುತ್ತಾರೆ. ಆದರೆ, ನನ್ನಲ್ಲಿ ಮೊದಲಿನಿಂದಲೂ ಕಂಪೆನಿ ಸೆಕ್ರೆಟರಿಯಾಗಬೇಕೆಂಬ ಆಸೆ ಇದೆ. ಇದಕ್ಕೆ ತಕ್ಕಂತೆ ಓದು ಮುಂದುವರೆಸುವೆ" ಎಂದು ತನ್ನ ಭವಿಷ್ಯದ ಕನಸನ್ನು ಹಂಚಿಕೊಂಡಿದ್ದಾರೆ.
icon

(10 / 11)

ಪರೀಕ್ಷೆ ಬರೆಯಬೇಕಲ್ವ ಎಂದು ಮನಸ್ಸಿಲ್ಲದೆ ಓದಬಾರದು. ಪರೀಕ್ಷೆಗೆ ಓದುವುದು ಎಂದು ಮನಸ್ಸಿಗೆ ಒತ್ತಡ ಹಾಕಬಾರದು. ಓದುವುದನ್ನು ಎಂಜಾಯ್‌ ಮಾಡಬೇಕು. ಅರ್ಥ ಮಾಡಿಕೊಂಡು ಓದಿದರೆ ಹೆಚ್ಚು ಸಮಯ ನೆನಪಿನಲ್ಲಿ ಉಳಿಯುತ್ತದೆ. ಕಂಠಪಾಠಕ್ಕಿಂತ ಅರ್ಥ ಮಾಡಿಕೊಂಡು ಓದುವುದು ಮುಖ್ಯವಾಗಿದೆ ಎಂದು ನಮಿತಾ ಸಲಹೆ ನೀಡಿದ್ದಾರೆ.
icon

(11 / 11)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು