Board Exam: ವಾರ್ಷಿಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಇಲ್ಲುಂಟು 8 ಟಿಪ್ಸ್‌, ಎಕ್ಸಾಂ ಕುರಿತು ಬೇಡ ಆತಂಕ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Board Exam: ವಾರ್ಷಿಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಇಲ್ಲುಂಟು 8 ಟಿಪ್ಸ್‌, ಎಕ್ಸಾಂ ಕುರಿತು ಬೇಡ ಆತಂಕ

Board Exam: ವಾರ್ಷಿಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಇಲ್ಲುಂಟು 8 ಟಿಪ್ಸ್‌, ಎಕ್ಸಾಂ ಕುರಿತು ಬೇಡ ಆತಂಕ

  • Board Exam Study Tips: ಸಿಬಿಎಸ್‌ಇ ಬೋರ್ಡ್‌ ಎಕ್ಸಾಂ ಆರಂಭವಾಗಿದೆ. ಐಸಿಎಸ್‌ಇ ಬೋರ್ಡ್‌ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದೆ. ಸ್ಟೇಟ್‌ ಸಿಲೇಬಸ್‌ ವಾರ್ಷಿಕ ಪರೀಕ್ಷೆಗಳು ಶೀಘ್ರದಲ್ಲಿ ಆರಂಭವಾಗಲಿದೆ. ಈ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಎಂಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. 

Board Exam Study Tips: ಸಿಬಿಎಸ್‌ಇ ಬೋರ್ಡ್‌ ಎಕ್ಸಾಂ ಆರಂಭವಾಗಿದೆ. ಐಸಿಎಸ್‌ಇ ಬೋರ್ಡ್‌ ಪರೀಕ್ಷೆಗೆ ಕ್ಷಣಗಣನೆ ಆರಂಭವಾಗಿದೆ. ಸ್ಟೇಟ್‌ ಸಿಲೇಬಸ್‌ ವಾರ್ಷಿಕ ಪರೀಕ್ಷೆಗಳು ಶೀಘ್ರದಲ್ಲಿ ಆರಂಭವಾಗಲಿದೆ. ಈ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವಂತಹ ಎಂಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ಇದು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಪ್ರತಿನಿತ್ಯ ಸೋಷಿಯಲ್‌ ಮೀಡಿಯಾದಲ್ಲಿ ನೀಡುತ್ತಿದ್ದ ಪರೀಕ್ಷಾ ಸಲಹೆಗಳ ಸಂಗ್ರಹವಾಗಿದೆ. 
icon

(1 / 9)

(Canva)

ವಾರ್ಷಿಕ ಪರೀಕ್ಷೆಯ  ಆತಂಕ ಬೇಡ: ವಾರ್ಷಿಕ ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಅನಗತ್ಯ ಆತಂಕಕ್ಕೆ ತುತ್ತಾಗುತ್ತಿದ್ದಾರೆ. ಮನೆಯವರ, ಶಾಲಾ ಶಿಕ್ಷಕರ ಒತ್ತಡದಿಂದ "ಕಡಿಮೆ ಅಂಕ ಬಂದು ಬಿಟ್ಟರೆ ಏನು ಗತಿ" ಎಂಬ ಆತಂಕ ಹೆಚ್ಚುತ್ತದೆ. ಇಂತಹ ಆತಂಕ ಬೇಡ. ಪರೀಕ್ಷೆಗೆ ಇನ್ನು ಇರುವಷ್ಟು ದಿನವನ್ನು ಸರಿಯಾಗಿ ಉಪಯೋಗಿಸಿ, ಟೈಂಟೇಬಲ್‌ ಮಾಡಿಕೊಂಡು ಓದಿ.
icon

(2 / 9)

ಅರ್ಥಮಾಡಿಕೊಳ್ಳಿ, ಕಂಠಪಾಠ ಬೇಡ: ಕಂಠಪಾಠ ಮಾಡುವುದು ಅಥವಾ ಉರು ಹೊಡೆಯುವುದರಿಂದ ಹೆಚ್ಚು ಪ್ರಯೋಜನವಿಲ್ಲ. ಪರೀಕ್ಷೆ ಬರೆಯುವ ಸಮಯದಲ್ಲಿ ಕಂಠಪಾಠ ಮಾಡಿದ ಒಂದು ಪದ ಅಥವಾ ವಾಕ್ಯ ಮರೆತರೆ ಪೂರ್ತಿ ಉತ್ತರವೇ ಮರೆತು ಹೋಗಬಹುದು. ಇದರ ಬದಲು, ಅರ್ಥಮಾಡಿಕೊಂಡು ಓದಿದರೆ ಪರೀಕ್ಷೆ ಸಮಯದಲ್ಲಿ ಸುಲಭವಾಗಿ ನೆನಪಿಗೆ ಬರುತ್ತದೆ. 
icon

(3 / 9)

ಓದಿಗೊಂದು ವೇಳಾಪಟ್ಟಿ ಇರಲಿ: ಪರೀಕ್ಷೆಗೆ ಸಿದ್ಧತೆ ನಡೆಸುವುದೆಂದರೆ, ದಿನವಿಡೀ ಓದುತ್ತಾ ಕುಳಿತುಕೊಳ್ಳುವುದಲ್ಲ. ಓದಿಗೊಂದು ವೇಳಾಪಟ್ಟಿ ರಚಿಸಿ, ಅದರಂತೆ ಮನಸಿಟ್ಟು ಅಭ್ಯಾಸ ನಡೆಸುವುದು ಜಾಣ ವಿದ್ಯಾರ್ಥಿಯ ಗುಣ.  10 ಬಾರಿ ಓದುವುದು 1 ಬಾರಿ ಬರೆದು ಅಭ್ಯಾಸ ಮಾಡುವುದಕ್ಕೆ ಸಮ. ಓದಿದ್ದನ್ನು  ನೆನಪಿಸಲು ಟಿಪ್ಪಣಿ ಮಾಡಿಕೊಳ್ಳಿ. 
icon

(4 / 9)

ಅಧ್ಯಾಯಗಳ ಸಾರಾಂಶ ಬರೆಯಿರಿ: ಪ್ರತಿಯೊಂದು ಅಧ್ಯಾಯಗಳ ಮೇಲೆ ಕಣ್ಣಾಡಿಸಿ. ಪ್ರತಿ ಅಧ್ಯಾಯದ ಸಾರಾಂಶ ಬರೆಯಿರಿ. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಪದಗಳಲ್ಲಿ ಸಾರಾಂಶ ಬರೆಯಿರಿ. ಇನ್ನೊಂದು ಬಾರಿ ನೀವು ಈ ಟಿಪ್ಪಣಿಗಳನ್ನು ಓದುವಾಗ ನಿಮಗೆ ಪೂರ್ತಿ ಅಧ್ಯಾಯವೇ ನೆನಪಿಗೆ ಬರಬೇಕು. ಇದು ನೆನಪಿನ ಶಕ್ತಿ ಹೆಚ್ಚಿಸುತ್ತದೆ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆಯಲು ನೆರವಾಗುತ್ತದೆ. 
icon

(5 / 9)

ಹಳೆಯ ಪ್ರಶ್ನೆಪತ್ರಿಕೆಗಳ ಅಭ್ಯಾಸ: ಬೋರ್ಡ್‌ ಎಕ್ಸಾಂಗೆ ಸಿದ್ಧತೆ ನಡೆಸುವವರು ಹಳೆಯ ಪ್ರಶ್ನೆಪತ್ರಿಕೆಗಳನ್ನು ನೋಡಿಕೊಂಡು ಅಭ್ಯಾಸ ಮಾಡಲು ಇದು ಸರಿಯಾದ ಸಮಯ. ನಾಲ್ಕೈದು ವರ್ಷಗಳ ಹಳೆಯ ಪ್ರಶ್ನೆಪತ್ರಿಕೆಗಳನ್ನು ನೋಡುವಾಗ ಪರೀಕ್ಷೆಯ ಮಾದರಿ ಅರ್ಥವಾಗುತ್ತದೆ. ಕೆಲವೊಂದು ಪ್ರಶ್ನೆಗಳು ಪ್ರತಿವರ್ಷ ಪುನರಾವರ್ತನೆಯಾಗುತ್ತದೆ. ಇಂತಹ ಪ್ರಶ್ನೆಗಳಿಗೆ ಹೆಚ್ಚಿನ ಗಮನ ನೀಡಿ.  
icon

(6 / 9)

ನಾಳೆಯಿಂದ ಬೇಡ, ಈಗಿನಿಂದ ಓದಿ: ನಾಳೆಯಿಂದ ಚೆನ್ನಾಗಿ ಓದುವೆ ಎಂದು "ಪರೀಕ್ಷೆ ತಯಾರಿ" ಮುಂದೂಡುತ್ತ ಹೋಗಬೇಡಿ. ಪ್ರತಿಯೊಂದು ವಿಷಯಗಳನ್ನು ಓದಿ, ಅರ್ಥ ಮಾಡಿಕೊಳ್ಳಿ, ಬಿಡುವಿನಲ್ಲಿ ಪುನರ್‌ಮನನ ಮಾಡಿಕೊಳ್ಳಿ. ಮ್ಯಾರಥನ್‌ ಓಟದಲ್ಲಿ ಗೆಲ್ಲಬೇಕಾದರೆ ಹಲವು ತಿಂಗಳ ಕಾಲ ಓಡಿ ಅಭ್ಯಾಸ ಮಾಡಬೇಕು. ಪರೀಕ್ಷೆಯಲ್ಲಿ ಯಶಸ್ಸು ಪಡೆಯಲೂ ಇದೇ ರೀತಿಯ ತಯಾರಿ ಅಗತ್ಯ.
icon

(7 / 9)

ಮೊಬೈಲ್‌, ಟಿವಿಯಿಂದ ದೂರ ಇರಿ: ಪರೀಕ್ಷೆ ಮುಗಿಯುವ ತನಕ ಮೊಬೈಲ್‌, ಟಿವಿಯಿಂದ ದೂರ ಇರಿ. ಇವು ಮನಸ್ಸನ್ನು ಚಂಚಲಗೊಳಿಸಿ ಓದಿನ ಕಡೆಗೆ ಗಮನ ನೀಡದಂತೆ ಮಾಡುತ್ತವೆ. ಏಕಾಗ್ರತೆ ಹೆಚ್ಚಿಸಲು ಧ್ಯಾನ ಮಾಡಿ. ಓದುವ ಮಕ್ಕಳ ಮುಂದೆ ಹೆತ್ತವರು ಕೂಡ ಮೊಬೈಲ್‌, ಟಿವಿ ಬಳಸಬೇಡಿ.
icon

(8 / 9)

ಈಗಾಗಲೇ ಪರೀಕ್ಷೆ ಆರಂಭವಾಗಿರುವ ವಿದ್ಯಾರ್ಥಿಗಳು ಒಂದು ವಿಷಯದ ಪರೀಕ್ಷೆ ಮಗಿಸಿ ಬಂದ ಬಳಿಕ ಆ ಪರೀಕ್ಷೆಯ ಕುರಿತು ಹೆಚ್ಚು ಚಿಂತೆ ಮಾಡಬೇಡಿ. ಮುಂದಿನ ಪರೀಕ್ಷೆಯ ಕುರಿತು ಗಮನ ನೀಡಿ. ಎಲ್ಲಾದರೂ ಈ ಹಿಂದಿನ ಪರೀಕ್ಷಯಲ್ಲಿ ಏನಾದರೂ ತಪ್ಪು ಮಾಡಿದ್ದೇನೆ ಎಂದು ಅನಿಸಿದರೆ ಆ ತಪ್ಪನ್ನು ಪುನಾರವರ್ತನೆ ಮಾಡಬೇಡಿ.
icon

(9 / 9)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು