ಧಾರವಾಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಮಕ್ಕಳ ಸಂಭ್ರಮ ಸಡಗರದ ಚಿತ್ರನೋಟ
ಧಾರವಾಡದ ಶಿವಾಜಿ ಸರ್ಕಲ್ ಭಾರತ ಪ್ರೌಢಶಾಲೆಯಲ್ಲಿ ಇಂದು (ಡಿಸೆಂಬರ್ 24) ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ವೈಶುದೀಪ ಫೌಂಡೇಶನ್‍ನ ಅಧ್ಯಕ್ಷೆ, ಧಾರವಾಡ ಗ್ರಾಮೀಣ ಕ್ಷೇತ್ರ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಉದ್ಘಾಟಿಸಿದರು. ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಲ್ಲಿ ಮಕ್ಕಳ ಸಂಭ್ರಮ ಸಡಗರದ ಚಿತ್ರನೋಟ ಇಲ್ಲಿದೆ.
(1 / 9)
ಧಾರವಾಡ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಇಂದು ನಡೆಯಿತು,. ಅದದಲ್ಲಿ ಮಕ್ಕಳ ಸಂಭ್ರಮ ಸಡಗರದ ಚಿತ್ರನೋಟ ಇಲ್ಲಿದ್ದು, ಇದು ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಒಂದು ನೋಟ. ಧಾರವಾಡದ ಶಿವಾಜಿ ಸರ್ಕಲ್ ಭಾರತ ಪ್ರೌಢಶಾಲೆಯಲ್ಲಿ ಇಂದು (ಡಿಸೆಂಬರ್ 24) ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ವೈಶುದೀಪ ಫೌಂಡೇಶನ್‍ನ ಅಧ್ಯಕ್ಷೆ, ಧಾರವಾಡ ಗ್ರಾಮೀಣ ಕ್ಷೇತ್ರ ಶಾಸಕ ವಿನಯ್ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು.
(2 / 9)
ಪ್ರತಿಯೊಂದು ಮಗುವಿನಲ್ಲಿ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಆ ಪ್ರತಿಭೆ ಅನಾವರಣಗೊಳ್ಳುವ ಒಂದು ಉತ್ತಮವಾದ ವೇದಿಕೆ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ. ಪ್ರತಿಯೊಬ್ಬ ಸ್ಪರ್ಧಾಳು ಇದರ ಪ್ರಯೋಜನ ಪಡೆಯಬೇಕು.ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿಕೊಳ್ಳಬೇಕು ಎಂದು ಶಿವಲೀಲಾ ಕುಲಕರ್ಣಿ ಹೇಳಿದರು. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಲು ಉತ್ಸಾಹದಲ್ಲಿದ್ದ ಮಕ್ಕಳ ಚಿತ್ರ.
(3 / 9)
ಪ್ರತಿಭಾ ಕಾರಂಜಿಯಲ್ಲಿ ನಿರ್ಣಾಯಕರಾಗಿ ಭಾಗವಹಿಸಿದ ಎಲ್ಲರೂ ಯಾವುದೇ ಗೊಂದಲ ಹಾಗೂ ಸಂಶಯಗಳಿಗೆ ಎಡೆ ಮಾಡಿಕೊಡದೆ ನಿಷ್ಪಕ್ಷಪಾತವಾಗಿ ತೀರ್ಪು ನೀಡಬೇಕು. ನಮ್ಮ ಜಿಲ್ಲೆಯಿಂದ ಉತ್ತಮ ಸ್ಪರ್ಧಾಳುಗಳು ರಾಜ್ಯಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವಂತಾಗಬೇಕೆಂದು ಎಂದು ಶಿವಲೀಲಾ ಕುಲಕರ್ಣಿ ಹೇಳಿದರು.
(4 / 9)
ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯು ಮಗುವಿನಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಹಾಗೂ ಸೃಜಲಶೀಲತೆಯನ್ನು ಹೊರಗೆ ಎಳೆಯುವ ಒಂದು ಕಾರ್ಯಕ್ರಮ ಎಂಬುವುದನ್ನು ಸ್ಪಷ್ಟಪಡಿಸುತ್ತಾ ಕಾರ್ಯಕ್ರಮದ ಗುರಿ ಉದ್ದೇಶಗಳನ್ನು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್ ಎಸ್ ಕೆಳದಿ ಮಠ ವಿವರಿಸಿದರು. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲೋತ್ಸವದ ನೃತ್ಯದ ಒಂದು ನೋಟ.
(5 / 9)
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮರಾಠ ವಿದ್ಯಾ ಪ್ರಸಾರಕ ಮಂಡಳಿಯ ಕಾರ್ಯದರ್ಶಿ ರಾಜು ಬಿರ್ಜನ್ನವರ ಅವರು ಕಾರ್ಯಕ್ರಮದ ಮಹತ್ವ ವಿವರಿಸಿದರು. ಮರಾಠ ವಿದ್ಯಾ ಪ್ರಸಾರಕ ಮಂಡಳದ ನಿರ್ದೇಶಕ ಜು ಕುಳೆ, ಸುನಿಲ್ ಮೋರೆ, ಸುಭಾಷ್ ಪವಾರ್ ಶಿವಾಜಿ ಸೂರ್ಯವಂಶಿ ಅವರು ಭಾಗವಹಿಸಿದ್ದರು. ಮಕ್ಕಳ ನೃತ್ಯ ಸಂಭ್ರಮದ ನೋಟ.
(6 / 9)
ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಉಪನಿರ್ದೇಶಕರ ಕಚೇರಿಯ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಎಸ್.ಎಂ ಹುಡೇದಮನಿ, ವಿಷಯ ಪರೀಕ್ಷಕರಾದ ರೇಖಾ ಭಜಂತ್ರಿ, ಡಾ.ಗಿರಿಜಾ ಲಮಾಣಿ. ಡಾ.ಪ್ರಕಾಶ ಭೂತಾಳಿ. ಯಲ್ಲಪ್ಪ ಹುಬ್ಬಳ್ಳಿ ಭಾಗವಹಿಸಿದ್ದರು. ಶಾಲಾ ಮಕ್ಕಳ ನೃತ್ಯ ಸಂಭ್ರಮದ ಒಂದು ನೋಟ.
(7 / 9)
ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳಾದ ರಾಜಶೇಖರ ಹೊನ್ನಪ್ಪನವರ ಹಾಗೂ ನಾರಾಯಣ ಭಜಂತ್ರಿ, ಬಿ.ವಿ ಬಶೆಟ್ಟಿ ಅವರು ಭಾಗವಹಿಸಿದ್ದರು. ವಿಷಯ ಪರೀಕ್ಷಕ ರೇಣುಕಾ ಇಂಗಳಕಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಣಾಧಿಕಾರಿ ನಫೀಸಬಾನು ದಾವಲಸಾಬನವರ ವಂದನಾರ್ಪಣೆ ನೆರವೇರಿಸಿದರು. ಶಾಲಾ ಬಾಲಕಿಯರ ನೃತ್ಯ ವೈಭವದ ಒಂದು ನೋಟ.
ಇತರ ಗ್ಯಾಲರಿಗಳು