ದ್ವಿತೀಯ ಪಿಯುಸಿ ಪಾಸಾದವರಿಂದ ಜಿಆರ್ಟಿ ಜ್ಯುವೆಲರ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ; ಟೈಮಿಲ್ಲ ಈಗ್ಲೇ ಅಪ್ಲೈ ಮಾಡಿ!
ದ್ವಿತೀಯ ಪಿಯುಸಿ ಪಾಸಾದವರಿಂದ ಜಿಆರ್ಟಿ ಜ್ಯುವೆಲರ್ಸ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ಆಹ್ವಾನಿಸಲಾಗಿದೆ. ಮೇ 31 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅರ್ಹತೆಗಳ ವಿವರ ಇಂತಿದೆ.
(1 / 5)
ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಜಿಆರ್ಟಿ ಜ್ಯುವೆಲರ್ಸ್ 2025ರ ಶೈಕ್ಷಣಿಕ ವರ್ಷಕ್ಕೆ ಜಿಆರ್ಟಿ ಎಂಡೋಮೆಂಟ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಿದೆ. ಇದು ದ್ವಿತೀಯ ಪಿಯುಸಿ ಪಾಸಾದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಬಲೀಕರಣಕ್ಕಾಗಿ ಕೈಗೊಂಡ ಉಪಕ್ರಮವಾಗಿದೆ.
(2 / 5)
ದ್ವಿತೀಯ ಪಿಯುಸಿಯಲ್ಲಿ ಶೇಕಡಾ 70 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಪ್ರತಿ ವರ್ಷ ಜಿಆರ್ಟಿ ಜ್ಯುವೆಲರ್ಸ್ ವಿದ್ಯಾರ್ಥಿ ವೇತನ ಘೋಷಣೆ ಮಾಡುತ್ತಿದೆ.
(3 / 5)
ಇದೀಗ 2025ರ ಸಾಲಿನಲ್ಲಿ ಪಾಸಾಗಿರುವ ಪಿಯುಸಿ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೂ ಅರ್ಜಿದಾರರು ಪ್ರತಿ ವಿಷಯದಲ್ಲೂ ಕನಿಷ್ಠ ಶೇ 70 ಅಂಕ ಗಳಿಸಿರಬೇಕು. ಆಗ ಮಾತ್ರ ವಿದ್ಯಾರ್ಥಿ ವೇತನ ಸಿಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅರ್ಜಿ ಹಾಕುವುದು ಉತ್ತಮ.
(4 / 5)
ಸಂಪರ್ಕ ಮತ್ತು ಅರ್ಜಿ ವಿವರಗಳು: ದೂರವಾಣಿ +91 9150110384, ಇಮೇಲ್: grtendowment@grtjewels.com ಮೂಲಕ ಸಹಾಯ ಪಡೆದು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿದೆ ವೆಬ್ಸೈಟ್ ಲಿಂಕ್ www.grtendowment.com
ಇತರ ಗ್ಯಾಲರಿಗಳು