ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ; ಕೃಷಿ ವಿಭಾಗದಲ್ಲಿ ಅಕ್ಷಯ್ ಹೆಗ್ಡೆ ಪ್ರಥಮ, ಟಾಪ್-10 ರ‍್ಯಾಂಕ್ ಪಡೆದವರಿವರು!
ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ ವಿಜ್ಞಾನ ವಿಭಾಗ ಸೇರಿ ವಿವಿಧ ವೃತ್ತಿಪರ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿ ನಡೆದಿದ್ದ ಕೆ-ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಈ ಪೈಕಿ ಕೃಷಿ ವಿಭಾಗದಲ್ಲಿ ಟಾಪ್-10 ಶ್ರೇಯಾಂಕ ಪಡೆದವರ ಪಟ್ಟಿ ಇಲ್ಲಿದೆ.
(1 / 10)
1. ಅಕ್ಷಯ್ ಎಂ ಹೆಗ್ಡೆ: ಕೃಷಿ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜಿನ ಅಕ್ಷಯ್ ಶೇ 98.08 ಅಂಕ ಪಡೆದಿದ್ದಾರೆ.
(2 / 10)
2. ಶೇಷ್ ಶ್ರವಣ್ ಪಂಡಿತ್: ಕೃಷಿ ವಿಭಾಗದಲ್ಲಿ ಶೇ 97.92 ಅಂಕ ಗಳಿಸಿರುವ ಮಂಗಳೂರಿನ ಎಕ್ಸ್ಫರ್ಟ್ ಪಿಯು ಕಾಲೇಜಿನ ಪಂಡಿತ್ 2ನೇ ಶ್ರೇಯಾಂಕ ಪಡೆದಿದ್ದಾರೆ.
(3 / 10)
3. ಸುಚಿತ್ ಪಿ ಪ್ರಸಾದ್: ಕೃಷಿ ವಿಭಾಗದಲ್ಲಿ ಶೇ 97.92 ಅಂಕ ಗಳಿಸಿರುವ ಮಂಗಳೂರಿನ ಎಕ್ಸ್ಫರ್ಟ್ ಪಿಯು ಕಾಲೇಜಿನ ಸುಚಿತ್ ಅವರು 3ನೇ ರ್ಯಾಂಕ್ ಪಡೆದಿದ್ದಾರೆ.
(4 / 10)
4. ಸುಮಂತಗೌಡ ಎಸ್ ದಾನಪ್ಪಗೌಡ: ಕಾರ್ಕಳದ ಕ್ರಿಯೇಟಿವ್ ಪಿಯು ಕಾಲೇಜಿನ ಸುಮಂತಗೌಡ ಅವರು ಶೇ 97.58ರಷ್ಟು ಅಂಕ ಪಡೆದಿದ್ದು, 4ನೇ ಶ್ರೇಯಾಂಕ ಪಡೆದಿದ್ದಾರೆ.
(5 / 10)
5. ಸ್ನೇಹ ಯರಗಣವಿ: ಮಂಗಳೂರಿನ ಎಕ್ಸ್ಫರ್ಟ್ ಪಿಯು ಕಾಲೇಜಿನ ಪಂಡಿತ್ 5ನೇ ರ‍್ಯಾಂಕ್ ಗಳಿಸಿದ್ದಾರೆ. ಇವರು ಶೇ 97.33 ಅಂಕ ಪಡೆದಿದ್ದಾರೆ.
(6 / 10)
6. ಹರೀಶ್ ರಾಜ್ ಡಿವಿ: ಯಲಹಂಕದ ನಾರಾಯಣ ಇ-ಟೆಕ್ನೋ ಸ್ಕೂಲ್ನ ಹರೀಶ್ರಾಜ್ ಶೇ 97.29 ಅಂಕ ಪಡೆಯುವುದರೊಂದಿಗೆ 6ನೇ ಸ್ಥಾನ ಪಡೆದಿದ್ದಾರೆ.
(7 / 10)
7. ಸಿದ್ದೇಶ್ ಬಿ ದಮ್ಮಳ್ಳಿ: ಶೇ 97 ಅಂಕ ಪಡೆದಿರುವ ಸಿದ್ಧೇಶ್ ಕೂಡ ಓದಿರುವುದು ಮಂಗಳೂರಿನ ಎಕ್ಸ್ಫರ್ಟ್ ಪಿಯು ಕಾಲೇಜಿನಲ್ಲಿ.
ಇತರ ಗ್ಯಾಲರಿಗಳು