ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇ ಓದೋ ಯೋಚನೆ ಇಲ್ವಾ? ನಿಮ್ಮ ಜೀವನಕ್ಕೆ ಪಿಯುಸಿ ಏಕೆ ಅಗತ್ಯ ಎಂದು ತಿಳಿಯಿರಿ
- ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಿದೆ. ಸಾಕಷ್ಟು ಜನರು ಪಿಯುಸಿ ಅಥವಾ ಇತರೆ ಕೋರ್ಸ್‌ಗಳಿಗೆ ಸೇರಬಹುದು. ಕೆಲವೊಂದು ಕಾರಣಗಳಿಂದ ಎಸ್‌ಎಸ್‌ಎಲ್‌ಸಿಗೆ ಶಿಕ್ಷಣ ಮೊಟಕುಗೊಳಿಸುವ ಯೋಚನೆಯಲ್ಲಿ ಒಂದಿಷ್ಟು ಜನರು ಇರಬಹುದು. ಪಿಯುಸಿ ಏಕೆ ಓದಬೇಕು? ಇದರ ಅಗತ್ಯಗಳೇನು? ತಿಳಿಯೋಣ.
- ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಬಂದಿದೆ. ಸಾಕಷ್ಟು ಜನರು ಪಿಯುಸಿ ಅಥವಾ ಇತರೆ ಕೋರ್ಸ್‌ಗಳಿಗೆ ಸೇರಬಹುದು. ಕೆಲವೊಂದು ಕಾರಣಗಳಿಂದ ಎಸ್‌ಎಸ್‌ಎಲ್‌ಸಿಗೆ ಶಿಕ್ಷಣ ಮೊಟಕುಗೊಳಿಸುವ ಯೋಚನೆಯಲ್ಲಿ ಒಂದಿಷ್ಟು ಜನರು ಇರಬಹುದು. ಪಿಯುಸಿ ಏಕೆ ಓದಬೇಕು? ಇದರ ಅಗತ್ಯಗಳೇನು? ತಿಳಿಯೋಣ.
(1 / 10)
ಬಡತನ, ಆರ್ಥಿಕ ಪರಿಸ್ಥಿತಿ, ಕುಟುಂಬದ ಸ್ಥಿತಿಗತಿ ಕಾರಣಗಳಿಂದ ಸಾಕಷ್ಟು ಜನರು ಎಸ್‌ಎಸ್‌ಎಲ್‌ಸಿಗೆ ಶಿಕ್ಷಣ ಮೊಟಕುಗೊಳಿಸುತ್ತಾರೆ. ಆದರೆ, ಇನ್ನೊಂದೆರಡು ವರ್ಷ ಕಷ್ಟಪಟ್ಟು ಓದಿದರೆ ತಮ್ಮ ಬದುಕನ್ನು ಬದಲಾಯಿಸಿಕೊಳ್ಳಬಹುದು. ಈಗ ಎಸ್‌ಎಸ್‌ಎಲ್‌ಸಿ ಎನ್ನುವುದು ಕನಿಷ್ಠ ವಿದ್ಯಾರ್ಹತೆ ಎನ್ನುವಂತಾಗಿದೆ. ಎಸ್‌ಎಸ್‌ಎಲ್‌ಸಿ ಮಾತ್ರ ಓದಿದ್ರೆ ಅವಕಾಶಗಳು ಸೀಮಿತವಾಗಿವೆ. ಪಿಯಸಿ, ಪದವಿ ಅಥವಾ ಉದ್ಯೋಗ ಕ್ಷೇತ್ರ ಬಯಸುವ ಯಾವುದಾದರೂ ಕೋರ್ಸ್‌ಗೆ ಸೇರುವ ಮೂಲಕ ಉತ್ತಮ ಅವಕಾಶ ಪಡೆದುಕೊಳ್ಳಬಹುದು. (Canva)
(2 / 10)
ಪಿಯುಸಿ ಓದಿದರೆ ಮುಂದೆ ಏನು ಓದಬೇಕೆಂಬ, ಯಾವ ಹುದ್ದೆ ಪಡೆಯಬೇಕೆಂಬ ಸ್ಪಷ್ಟ ಚಿತ್ರಣ ದೊರಕುತ್ತದೆ. ಉನ್ನತಶಿಕ್ಷಣ ಪಡೆಯಲು ಇದು ಮೊದಲ ಹೆಜ್ಜೆಯಾಗುತ್ತದೆ.
(3 / 10)
ಗಣಿತ, ವಿಜ್ಞಾನ, ಭಾಷೆ ಅಥವಾ ಸಾಮಾಜಿಕ ವಿಜ್ಞಾನ ಸೇರಿದಂತೆ ಕೋರ್ ಸಬ್ಜೆಕ್ಟ್‌ಗಳನ್ನು ಅರ್ಥ ಮಾಡಿಕೊಳ್ಳಲು ಪಿಯುಸಿ ಕಲಿಕೆ ಅತ್ಯಂತ ಅಗತ್ಯ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಆಸಕ್ತಿ, ವಿಶ್ಲೇಷಣಾತ್ಮಕ ಕೌಶಲ ಉತ್ತಮಗೊಳ್ಳುತ್ತದೆ.(HT PHOTO)
(4 / 10)
ಎಸ್‌ಎಸ್‌ಎಲ್‌ಸಿಗೆ ವಿದ್ಯಾಭ್ಯಾಸ ನಿಲ್ಲಿಸಿದರೆ ನಿಮಗೆ ದೊರಕುವ ಉದ್ಯೋಗಾವಕಾಶ ಸೀಮಿತವಾಗುತ್ತದೆ. ಪಿಯುಸಿ ಓದಿದರೆ ಮುಂದೆ ಯಾವ ಕ್ಷೇತ್ರ ಆಯ್ಕೆ ಮಾಡಬೇಕೆಂಬ ಸ್ಪಷ್ಟತೆ ಇರುತ್ತದೆ. ವಿಜ್ಞಾನ, ವಾಣಿಜ್ಯ, ಕಲೆ ಮುಂತಾದ ವಿಭಾಗಕ್ಕೆ ಹೋಗಿ ಭವಿಷ್ಯದಲ್ಲಿ ಉತ್ತಮ ಅವಕಾಶ ಪಡೆದುಕೊಳ್ಳಬಹುದು.
(5 / 10)
ವೈಯಕ್ತಿಕ ಪ್ರಗತಿಗೂ ಪಿಯು ಶಿಕ್ಷಣ ನೆರವಾಗುತ್ತದೆ. ಸಂವಹನ, ಸಮಯದ ನಿರ್ವಹಣೆ, ಸಮಸ್ಯೆ ನಿರ್ವಹಣೆ ಇತ್ಯಾದಿಗಳನ್ನೂ ತಿಳಿಯಬಹುದು. ಈಗ ಧೈರ್ಯ ಮಾಡಿ ಪಿಯುಸಿಗೆ ಸೇರಿದರೆ ಭವಿಷ್ಯದಲ್ಲಿ ನಿಮಗೆ ಕಾಲೇಜು ಅಥವಾ ಇತರೆ ಕೋರ್ಸ್‌ಗಳಿಗೆ ಸೇರುವ ಅವಕಾಶ ದೊರಕಬಹುದು. ಈಗಿನ ಬಡತನ, ಆರ್ಥಿಕ ತೊಂದರೆಗಳನ್ನು ಮೆಟ್ಟಿ ನಿಂತು ಮುಂದುವರೆಯಿರಿ. (Princess Ilvita)
(6 / 10)
ಈಗಿನ ಕಾಲದಲ್ಲಿ ಎಸ್‌ಎಸ್‌ಎಲ್‌ಸಿ ಶಿಕ್ಷಣ ಯಾವುದಕ್ಕೂ ಸಾಕಾಗುವುದಿಲ್ಲ. ಪಿಯುಸಿ, ಪದವಿ ಅಥವಾ ಉದ್ಯೋಗ ನೀಡುವಂತಹ ಯಾವುದಾದರೂ ಕೋರ್ಸ್‌ಗಳಿಗೆ ಸೇರಿ. ಎಸ್‌ಎಸ್‌ಎಲ್‌ಸಿ ಬಳಿಕ ಪಿಯುಸಿಗೆ ಸೇರಬೇಕೆಂದಿಲ್ಲ, ಅಲ್ಪಾವಧಿಯ ಕೋರ್ಸ್‌ಗಳಿಗೆ ಸೇರಬಹುದು.
(7 / 10)
ಪ್ಯಾರಾಮೆಡಿಕಲ್ ಕೋರ್ಸ್‌ಗಳನ್ನು ಕಲಿತು ಆಪ್ತಾಮೆಟ್ರಿಸ್ಟ್, ಲ್ಯಾಬ್ ಟೆಕ್ನಿಷಿಯನ್, ಡಯಾಲಿಸಿಸ್ ಟೆಕ್ನಿಷಿಯನ್ ಮುಂತಾದ ಹುದ್ದೆಗಳನ್ನು ಪಡೆಯಬಹುದು. ಐಟಿಐಗೆ ಸೇರಬಹುದು. ಒಟ್ಟಾರೆ, ಎಸ್‌ಎಸ್‌ಎಲ್‌ಸಿಗೆ ಶಿಕ್ಷಣ ಮೊಟಕುಗೊಳಿಸುವ ಯೋಜನೆಯನ್ನು ಬಿಟ್ಟು ಏನಾದರಾಗಲಿ ಮುಂದೆ ಓದಿಯೇ ಓದುತ್ತೇನೆ ಎಂಬ ದೃಢ ನಿರ್ಧಾರಕ್ಕೆ ಬನ್ನಿ.
(8 / 10)
ವಿವಿಧ ಕಾರಣಗಳಿಂದ ಎಸ್‌ಎಸ್‌ಎಲ್‌ಸಿ ಬಳಿಕ ಮುಂದೇ ಓದಲು ಸಾಧ್ಯವೇ ಇಲ್ಲ ಎಂದಾದರೆ ಲಭ್ಯವಿರುವ ವಿವಿಧ ಅವಕಾಶಗಳನ್ನು ಗಮನಿಸಿ. ಸ್ಕಾಲರ್‌ಶಿಪ್, ವಿವಿಧ ಸಂಘಸಂಸ್ಥೆಗಳ ನೆರವು ಪಡೆಯಬಹುದು. ಏನಾದರೂ ಸಾಧಿಸಿಯೇ ಸಾಧಿಸುವೆ ಎಂಬ ದೃಢ ನಿರ್ಧಾರ ನಿಮ್ಮಲ್ಲಿದ್ದಾರೆ ಖಂಡಿತವಾಗಿಯೂ ನಿಮಗೆ ಮುಂದೆ ಶಿಕ್ಷಣ ಪಡೆಯುವ ಅವಕಾಶ ದೊರಕಿಯೇ ದೊರಕುತ್ತದೆ.
(9 / 10)
ಕೆಲವೊಮ್ಮೆ ಎಸ್‌ಎಸ್‌ಎಲ್‌ಸಿ ಬಳಿಕ ಉದ್ಯೋಗಕ್ಕೆ ಸೇರಿದರೆ, ಕೈಗೆ ಒಂದಿಷ್ಟು ಹಣ ಬರುತ್ತದೆ. ಆ ಹಣ ನೀಡುವ ಖುಷಿಗೆ ಬಿದ್ದು ಮುಂದೆ ಓದುವ ಅವಕಾಶದಿಂದ ವಂಚಿತರಾಗಬೇಡಿ. ಉನ್ನತ ಶಿಕ್ಷಣ ಪಡೆಯಿರಿ, ಉನ್ನತ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಲು ಯತ್ನಿಸಿ. ಇಲ್ಲವಾದರೆ ಭವಿಷ್ಯದಲ್ಲಿ ಕೊರಗಬೇಕಾಗಬಹುದು.
ಇತರ ಗ್ಯಾಲರಿಗಳು