ಪರೀಕ್ಷಾ ಪೇ ಚರ್ಚಾ: ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ನೀಡಿದ ಯಶಸ್ಸಿನ 5 ಸೂತ್ರಗಳಿವು
ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಹಲವು ಸಲಹೆಗಳನ್ನು ನೀಡಿದ್ದು, ಧೈರ್ಯದಿಂದ ಪರೀಕ್ಷೆ ಎದುರಿಸುವುದು ಹೇಗೆ ಅನ್ನೋದನ್ನು ತಿಳಿಸಿಕೊಟ್ಟಿದ್ದಾರೆ.
(1 / 9)
ದೆಹಲಿಯ ‘ಭಾರತ್ ಮಂಟಪಂ’ ನಲ್ಲಿ ಆಯೋಜಿಸಿದ್ದ 7ನೇ ಆವೃತ್ತಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ಅಗತ್ಯ ಸಲಹೆಗಳನ್ನು ನೀಡಿದರು. ವಿದ್ಯಾರ್ಥಿಗಳೊಂದಿಗೆ ಈ ಸಂವಾದಲ್ಲಿ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.(PTI)
(2 / 9)
ದೆಹಲಿಯಲ್ಲಿ ನಡೆದ ಪರೀಕ್ಷಾ ಪೇ ಚರ್ಚಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳಿಗೆ ನೀಡಿರುವ ಕೆಲವು ಯಶಸ್ಸಿನ ಸಲಹೆಗಳನ್ನು ಇಲ್ಲಿ ನೀಡಲಾಗಿದೆ. (PTI)
(3 / 9)
ಯಾವುದೇ ರೀತಿಯ ಒತ್ತಡವನ್ನು ನಿಭಾಯಿಸಲು ನಮ್ಮನ್ನು ನಾವು ರೂಪಿಸಿಕೊಳ್ಳಬೇಕು. ಇಚ್ಛಾಶಕ್ತಿಯಿಂದ ಒತ್ತಡದ ನಡುವೆಯೂ ನಾವು ಯಶಸ್ಸನ್ನು ಸಾಧಿಸಬೇಕು. ಅವಸರದಲ್ಲಿ ಅಲ್ಲ, ಒತ್ತಡವನ್ನು ನಿಭಾಯಿಸುವ ಕಲೆಯನ್ನು ಕ್ರಮೇಣ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.(PTI)
(4 / 9)
ಒತ್ತಡವನ್ನು ನಿಭಾಯಿಸಿಕೊಳ್ಳುವುದು ಕೇವಲ ವಿದ್ಯಾರ್ಥಿಗಳ ಕೆಲಸವಲ್ಲ, ಪ್ರಕ್ರಿಯೆಯನ್ನು ಸುಲಭಗೊಳಿಸುವ ಜವಾಬ್ದಾರಿ ಮನೆಯಲ್ಲಿರುವ ಪೋಷಕರು ಹಾಗೂ ಶಿಕ್ಷಕರ ಮೇಲೆಯೂ ಇದೆ - ನರೇಂದ್ರ ಮೋದಿ(PTI)
(5 / 9)
ಮಕ್ಕಳನ್ನು ಮನೆಯ ಸುತ್ತಮುತ್ತಲಿನ ಇತರೆ ಮಕ್ಕಳೊಂದಿಗೆ ಹೋಲಿಸಬಾರದು. ಬಾಲ್ಯದಿಂದಲೂ ಕುಟುಂಬದವರು ಇತರರೊಂದಿಗೆ ಹೋಲಿಕೆ ಮಾಡುತ್ತಾರೆಂಬುದು ಮಕ್ಕಳ ಮನಸ್ಸಿನಲ್ಲಿ ಬೇರೂರಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಹೋಲಿಕೆ ಮಾಡಬಾರದೆಂದು ಪೋಷಕರಲ್ಲಿ ಕೋರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.(PTI)
(6 / 9)
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಂತಹ ಇತ್ತೀಚಿನ ತಂತ್ರಜ್ಞಾನಗಳು ಸೇರಿದಂತೆ ವಿವಿಧ ವಲಯಗಳಲ್ಲಿ ಅದ್ಭುತ ಯೋಜನೆಗಳಲ್ಲಿ ಕೆಲಸ ಮಾಡಿದ ವಿದ್ಯಾರ್ಥಿಗಳ ಪ್ರದರ್ಶನವನ್ನು ಪರಿಶೀಲಿಸುವ ಭಾಗ್ಯ ನನಗೆ ಸಿಕ್ಕಿತ್ತು. ಇಂತಹ ಅದ್ಭುತ ವಸ್ತು ಪ್ರದರ್ಶನವನ್ನು ಏರ್ಪಡಿಸಿದ್ದಕ್ಕಾಗಿ ಮತ್ತು ಹೊಸ ಪೀಳಿಗೆಯ ಅಭಿಪ್ರಾಯಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ನಾನು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಅಭಿನಂದಿಸಲೇಬೇಕು ಎಂದಿದ್ದಾರೆ. (PTI)
(7 / 9)
ಮಹತ್ವಾಕಾಂಕ್ಷೆ ಇರುವಂತಹ ಸ್ನೇಹಿತರನ್ನು ಹೊಂದುವುದು ಒಳ್ಳೆಯದು. ಅವರ ಸಾಧನೆಗಳ ಬಗ್ಗೆ ಚಿಂತಿಸದೆ ನಿಮ್ಮ ಪ್ರಗತಿಗೆ ಶ್ರಮಿಸಬೇಕು. ದುರ್ಬಲವಾಗಿರುವ ವಿಷಯಗಳಲ್ಲಿ ಸುಧಾರಣೆ ಮತ್ತು ಯಶಸ್ಸಿನ ಹಾದಿಯಲ್ಲಿ ಕೈ ಜೋಡಿಸಲು ಸ್ನೇಹಿತರ ಸಹಾಯವನ್ನು ಪಡೆಯಬೇಕು ಎಂದು ಸಲಹೆ ನೀಡಿದ್ದಾರೆ.
(8 / 9)
ಪರೀಕ್ಷೆ ಸಮಯದಲ್ಲಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸಬೇಕು. ಇದು ಅವರಿಗೆ ಆರಾಮದಾಯಕವಾದ ಭಾವನೆ ಮೂಡಲು ನೆರವಾಗುತ್ತದೆ. ಶಿಕ್ಷಕ-ವಿದ್ಯಾರ್ಥಿಗಳ ಬಾಂಧವ್ಯ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ. ವಿದ್ಯಾರ್ಥಿಗಳ ಜೀವನವನ್ನು ಉನ್ನತಮಟಕ್ಕೆ ಏರಿಸಲು ಶಿಕ್ಷಕರ ಕರ್ತವ್ಯ ಮುಖ್ಯವಾಗಿರುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.(ANI)
ಇತರ ಗ್ಯಾಲರಿಗಳು